ಕನ್ನಡ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಮಿಂಚಿದ ನಟಿ ಮಯೂರಿ ಕ್ಯಾತರಿ ಈಗ ಸಖತ್ ಸ್ಟೈಲಿಶ್. ಹಲವು ವರ್ಷಗಳ ಹಿಂದೆ ಕಿರುತೆರೆಯಲ್ಲಿ ಭಾರಿ ಜನಪ್ರಿಯತೆ ಪಡೆದಿದ್ದ ಅಶ್ವಿನಿ ನಕ್ಷತ್ರ ಸೀರಿಯಲ್ ನಟಿ ಮಯೂರಿ.
tv-talk Feb 22 2025
Author: Pavna Das Image Credits:Instagram
Kannada
ಸಿನಿಮಾಗಳಲ್ಲಿ ಅವಕಾಶ
ಬಳಿಕ ಕೆಲವು ಸಿನಿಮಾಗಳಲ್ಲಿ ನಾಯಕಿಯಾಗಿ ಅವಕಾಶವನ್ನು ಪಡೆದುಕೊಂಡರು, ಆದರೆ ಚಂದನವನದಲ್ಲಿ ನೆಲೆಯೂರುವಲ್ಲಿ ಸೋತರು.
Image credits: Instagram
Kannada
ಬಿಗ್ ಬಾಸ್ ಸ್ಪರ್ಧಿ
ಹಲವು ವರ್ಷಗಳಿಂದ ನಟನೆಯಿಂದ ದೂರ ಉಳಿದಿದ್ದ ನಟಿ ಬಿಗ್ ಬಾಸ್ ಸೀಸನ್ 9 ರಲ್ಲಿ ಸ್ಪರ್ಧಿಸಿದ್ದು, ಒಂದೆರಡು ವಾರದಲ್ಲೇ ಹೊರ ಬಂದಿದ್ದರು.
Image credits: Instagram
Kannada
ನನ್ನ ದೇವರು
ನನ್ನ ದೇವರು ಸೀರಿಯಲ್ ಮೂಲಕ ಕಿರುತೆರೆಗೆ ಕಂ ಬ್ಯಾಕ್ ಮಾಡಿದ್ದ ಮಯೂರಿ, ಆದರೆ ಧಾರಾವಾಹಿ ಕಥೆ, ನಟನೆ ಎಲ್ಲವೂ ವೀಕ್ಷಕರನ್ನು ಸೆಳೆಯುವಲ್ಲಿ ಸೋತಿತ್ತು.
Image credits: Instagram
Kannada
ಗಂಡನಿಂದ ದೂರ?
ಮಯೂರಿ ಕೂಡ ಗಂಡನಿಂದ ಡಿವೋರ್ಸ್ ಪಡೆದಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ನಟಿ ಆ ಬಗ್ಗೆ ಎಲ್ಲೂ ಸ್ಪಷ್ಟನೆ ಕೊಟ್ಟಿಲ್ಲ. ಸದ್ಯಕ್ಕೆ ಮತ್ತೆ ನಟನೆಯಿಂದ ದೂರ ಉಳಿದು ಮಗನ ಜೊತೆ ಎಂಜಾಯ್ ಮಾಡುತ್ತಿರುತ್ತಾರೆ.
Image credits: Instagram
Kannada
ಸಖತ್ ಸ್ಟೈಲಿಶ್
ಡಿವೋರ್ಸ್ ವದಂತಿಗಳು ಬಂದ ನಂತರ ನಟಿ ಪೂರ್ತಿಯಾಗಿ ಬದಲಾಗಿದ್ದಾರೆ. ತುಂಬಾನೆ ಸ್ಟೈಲಿಶ್, ಗ್ಲಾಮರಸ್ ಅವತಾರಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ ಕೊಡುತ್ತಿದ್ದಾರೆ.
Image credits: Instagram
Kannada
ದುಬೈನಲ್ಲಿ ಮಯೂರಿ
ಸದ್ಯ ನಟಿ ದುಬೈಗೆ ತೆರಳಿದ್ದು, ಅಲ್ಲಿನ ಪ್ರವಾಸಿ ತಾಣಗಳಲ್ಲಿ ಎಂಜಾಯ್ ಮಾಡುತ್ತಿರುವ ಫೋಟೊ ಹಂಚಿಕೊಂಡಿದ್ದಾರೆ. ಫೋಟೋಗಳು ಸಖತ್ ಸ್ಟೈಲಿಶ್ ಆಗಿದ್ದು, ಇವರನ್ನ ನೋಡಿದ್ರೆ ಮಗುವಿನ ತಾಯಿ ಅನ್ನೋದೆ ಸಾಧ್ಯ ಇಲ್ಲ.
Image credits: Instagram
Kannada
ದೀಪಿಕಾ ದಾಸ್, ಕಿಶನ್ ಜೊತೆ ಮಯೂರಿ
ಒಂದು ಫೋಟೊದಲ್ಲಿ ದೀಪಿಕಾ ದಾಸ್, ಕಿಶನ್ ಜೊತೆ ಮಯೂರಿ ಪೋಸ್ ಕೊಟ್ಟಿದ್ದು, ಎಲ್ಲರೂ ಜೊತೆಯಾಗಿ ಟ್ರಾವೆಲ್ ಮಾಡುತ್ತಿರುವಂತೆ ಕಾಣಿಸುತ್ತಿದೆ.
Image credits: Instagram
Kannada
ಆಟಿಟ್ಯೂಡ್ ಬೇಬ್ ಈಸ್ ಬ್ಯಾಕ್
ನಟಿಯ ಫೋಟೊಗಳನ್ನು ನೋಡಿ ಫ್ಯಾನ್ಸ್ ಆಟಿಟ್ಯೂಡ್ ಬೇಬ್ ಈಸ್ ಬ್ಯಾಕ್, ನಿಮ್ಮನ್ನು ದೊಡ್ಡ ಪರದೆ ಮೇಲೆ ನೋಡಲು ಕಾಯ್ತಿರೋದಾಗಿ ತಿಳಿಸಿದ್ದಾರೆ.
Image credits: Instagram
Kannada
ನೀವು ನೋಡಿರದ ರೂಪ
ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನ ಶೇರ್ ಮಾಡಿರುವ ನಟಿ M the type you’ve never seen ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ.