ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಅತ್ತೆಯ ಪಾತ್ರದಲ್ಲಿ ನಟಿಸುತ್ತಿರುವ ನಟಿ ರಜನಿ ಪ್ರವೀಣ್, ತಮ್ಮ ಸ್ಟೈಲಿಶ್ ಲುಕ್ ನಿಂದ ಸೀರಿಯಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
Image credits: Instagram
ಫೇವರಿಟ್ ಸುಪ್ರೀತಾ
ರಜನಿ ನಿರ್ವಹಿಸುತ್ತಿರುವ ಸುಪ್ರೀತಾ ಪಾತ್ರವನ್ನು ಜನ ತುಂಬಾನೆ ಇಷ್ಟಪಟ್ಟಿದ್ದಾರೆ. ಆಕೆಯ ಸ್ಟೈಲ್, ಸಂದರ್ಭವನ್ನು ಹ್ಯಾಂಡಲ್ ಮಾಡುವ ರೀತಿ, ಲಕ್ಷ್ಮಿಯನ್ನು ಮನೆಯವರೆಲ್ಲಾ ದೂರಿದಾಗ ಆಕೆಗೆ ಬೆಂಬಲ ನೀಡಿದ್ದು ಸುಪ್ರೀತಾ.
Image credits: Instagram
ನೆಗೆಟಿವ್ ನಿಂದ ಪಾಸಿಟಿವ್ ಪಾತ್ರ
ಆರಂಭದಲ್ಲಿ ಸುಪ್ರೀತಾ ಪಾತ್ರ ನೆಗೆಟಿವ್ ಆಗಿತ್ತು, ಆದರೆ ನಂತರ ದಿನಗಳಲ್ಲಿ ಅದು ಪಾಸಿಟಿವ್ ಪಾತ್ರವಾಗಿ ಬದಲಾಗಿದ್ದು, ಅತ್ತಿಗೆಯನ್ನು ಎದುರು ಹಾಕಿಕೊಳ್ಳಲು ಏನು ಬೇಕಾದರೂ ಮಾಡುವ ಸುಪ್ರಿತಾ ಪಾತ್ರ ಜನರ ಫೇವರಿಟ್
Image credits: Instagram
ಸ್ಟೈಲಿಶ್ ನಟಿ
ರಜನಿ ಪ್ರವೀಣ್ ಸೀರಿಯಲ್ ನಲ್ಲಿ ಸಖತ್ ಸ್ಟೈಲಿಶ್ ಆಗಿದ್ದಾರೆ. ರಿಯಲ್ ಲೈಫಲ್ಲೂ ಇವರು ತುಂಬಾನೆ ಸ್ಟೈಲಿಶ್ ಆಗಿದ್ದು, ಸೋಶಿಯಲ್ ಮಿಡಿಯಾದಲ್ಲಿ ತಮ್ಮ ಫೋಟೊಗಳ ಮೂಲಕ ಸುದ್ದಿಯಲ್ಲಿರುತ್ತಾರೆ.
Image credits: Instagram
ಬ್ಲೌಸ್ ಧರಿಸದೇ ಸೀರೆಯುಟ್ಟ ರಜನಿ
ಇದೀಗ ರಜನಿ ಬ್ಲೌಸ್ ಧರಿಸದೇ ಸ್ಟೈಲಿಶ್ ಆಗಿ ಕೆಂಪು ಬಣ್ಣದ ಸೀರೆಯನ್ನು ಉಟ್ಟು ಪೋಸ್ ನೀಡಿದ್ದು, ಜೊತೆಗೆ ಹೆವಿ ಜ್ಯುವೆಲ್ಲರಿ ಧರಿಸಿದ್ದು ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ.
Image credits: Instagram
ಗಾರ್ಜಿಯಸ್ ಎಂದ ಫ್ಯಾನ್ಸ್
ರಜನಿ ಲುಕ್ ಗೆ ಮನಸೋತಿರುವ ಅಭಿಮಾನಿಗಳು ಗಾರ್ಜಿಯಸ್, ಬ್ಯೂಟಿ ಫುಲ್, ತುಂಬಾನೆ ಚೆನ್ನಾಗಿ ಕಾಣಿಸುತ್ತೀರಿ ಎನ್ನುತ್ತಾ, ಹಾರ್ಟ್ ಹಾಗೂ ಫೈರ್ ಇಮೋಜಿ ಕಾಮೆಂಟ್ ಮಾಡಿದ್ದಾರೆ.