ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ‘ಕಮಲಿ’ ನಟಿ ಯಶಸ್ವಿನಿ ರವೀಂದ್ರ, ಚೊಚ್ಚಲ ತಾಯ್ತನದ ಸಂಭ್ರಮದಲ್ಲಿದ್ದಾರೆ.
ಕಮಲಿ ಧಾರಾವಾಹಿಯಲ್ಲಿ ಯಶಸ್ವಿನಿ ರವೀಂದ್ರ ರಿಷಿ ಸರ್ ತಂಗಿ ರಚನಾ ಪಾತ್ರದಲ್ಲಿ ನಟಿಸಿದ್ದರು. ಅಣ್ಣ ತಂಗಿಯ ಸಂಬಂಧ, ಯಶಸ್ವಿನಿ ನಟನೆಯನ್ನು ಜನರು ಇಷ್ಟಪಟ್ಟಿದ್ದರು.
ಕಮಲಿಗೂ ಮುನ್ನ ಯಶಸ್ವಿನಿ ಉದಯ ಟಿವಿಯ ಸಾಕ್ಷಿ ಧಾರಾವಾಹಿಯಲ್ಲಿ ಹಾಗೂ ಮನೆದೇವ್ರು ಧಾರಾವಾಹಿಯಲ್ಲಿ ವಿಲನ್ ಆಗಿ ನಟಿಸುವ ಮೂಲಕ ಗಮನ ಸೆಳೆದಿದ್ದರು.
ಕಮಲಿ ಧಾರಾವಾಹಿ ಬಳಿಕ ‘ಕಾಲವೇ ಮೋಸಗಾರ’ ಎನ್ನುವ ಸಿನಿಮಾದಲ್ಲೂ ನಟಿಸಿದ್ದರು. ನಂತರ ಕಿರುತೆರೆಯಿಂದ ಅಂತರ ಕಾಯ್ದುಕೊಂಡಿದ್ದರು. ನಂತರ ಯಾವುದೇ ಸಿನಿಮಾ ಬರಲಿಲ್ಲ.
2023ರಲ್ಲಿ ಯಶಸ್ವಿನಿ ಚೇತನ್ ಆರ್‌ಜೆ ಎನ್ನುವವರ ಜೊತೆ ಬೆಂಗಳೂರಿನ ರೆಸಾರ್ಟ್ ಒಂದರಲ್ಲಿ ಕುಟುಂಬ ಸ್ನೇಹಿತರ ನಡುವೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಇದೀಗ ಮದುವೆಯಾಗಿ ಮೂರು ವರ್ಷ ತುಂಬಿದ್ದು, ತಾಯಿಯಾಗುವ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಬೇಬಿ ಬಂಪ್ ಫೋಟೋ ಶೂಟ್ ಮಾಡಿ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
ಯಶಸ್ವಿನಿ ಪತಿ ಜೊತೆ ಮೆಟರ್ನಿಟಿ ಫೋಟೋ ಶೂಟ್ ಮಾಡಿ Turns out, our love had a heartbeat ಎಂದು ಕ್ಯಾಪ್ಶನ್ ಕೊಟ್ಟಿದ್ದು, ಅಭಿಮಾನಿಗಳು ಶುಭ ಕೋರಿದ್ದಾರೆ.
ಫ್ಯಾಮಿಲಿ, ಫ್ರೆಂಡ್ಸ್ ಜೊತೆ ಸಂಭ್ರಮದಿಂದ ಬರ್ತ್ ಡೇ ಸೆಲೆಬ್ರೇಟ್ ಮಾಡಿದ ಗೊಂಬೆ
Instagram ಸಬ್‌ಸ್ಕ್ರಿಪ್ಶನ್ ಮೂಲಕವೇ ಲಕ್ಷ ಲಕ್ಷ ಸಂಪಾದಿಸ್ತಿರೋ 10 ವ್ಯಕ್ತಿಗಳು
‘ಅಣ್ಣಯ್ಯ’ ಶಿವು ಹುಟ್ಟುಹಬ್ಬಕ್ಕೆ Nisha Ravikrishnan ಸ್ಪೆಷಲ್ ವಿಶ್… ಬೇಗ ರಿಯಲ್ ಜೋಡಿಯಾಗಿ ಫ್ಯಾನ್ಸ್ ಹಾರೈಕೆ
ಸೀರೆಯಲ್ಲಿ ಪ್ರೀತ್ಸೇ ಅಂತಾ ಬಂದ ಸ್ಪಂದನಾ ಸೋಮಣ್ಣ!