ಕನ್ನಡ ಕಿರುತೆರೆಯಲ್ಲಿ ನಟಿ ಹಾಗೂ ನಿರೂಪಕಿಯಾಗಿ ಗುರುತಿಸಿಕೊಂಡು ಇತ್ತೀಚೆಗೆ ನಿರೂಪಣೆಗೆ ವಿದಾಯ ಹೇಳಿದ್ದ ಅನುಪಮಾ ಗೌಡ, ತಮ್ಮ ಮನೆಯಲ್ಲಿ ಸಂಭ್ರಮದಿಂದ ಹಬ್ಬ ಆಚರಿಸಿಕೊಂಡಿದ್ದಾರೆ.
ಅನುಪಮಾ ಗೌಡ ಮನೆಯಲ್ಲಿ ವರಮಹಾಲಕ್ಷ್ಮೀ ಹಬ್ಬ ಸಂಭ್ರಮದಿಂದ ನಡೆದಿದ್ದು, ನಟಿ ತನ್ನ ಆತ್ಮೀಯರ ಜೊತೆ ಸಂಭ್ರಮದಿಂದ ಹಬ್ಬ ಸೆಲೆಬ್ರೇಟ್ ಮಾಡಿದ್ದಾರೆ.
ಅನುಪಮಾ ಗೌಡ ಬೆಸ್ಟ್ ಫ್ರೆಂಡ್ ಆಗಿರುವ ನೇಹಾ ಗೌಡ ತಮ್ಮ ಮಗಳೊಂದಿಗೆ ಹಬ್ಬಕ್ಕೆ ಆಗಮಿಸಿ, ಸಂಭ್ರಮಿಸಿದ್ದಾರೆ.
ಕನ್ನಡ ಕಿರುತೆರೆಯ ಸೆಲೆಬ್ರಿಟಿ ಜೋಡಿಗಳಾದ ಇಶಿತಾ ವರ್ಷ ಹಾಗೂ ಕೊರಿಯೋಗ್ರಾಫರ್ ಮುರುಗಾನಂದ ಕೂಡ ಜೊತೆಯಾಗಿ ಕಾಣಿಸಿಕೊಂಡಿದ್ದರು.
ಕನ್ನಡ ಚಿತ್ರರಂಗದ ಹಿರಿಯ ನಟಿಯರಾದ ಶೃತಿ ಹಾಗೂ ಮಾಳಾವಿಕಾ ಅವಿನಾಶ್ ಕೂಡ ಅನುಪಮಾ ಮನೆಯ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು.
ಇನ್ನು ಟ್ಯಾಲೆಂಟ್ ಕಲಾವಿದ ಪ್ರಶಾಂತ್, ರಾಘವ ಸೇರಿ ಹಲವಾರು ಮಂದಿ ಅನುಪಮಾ ಮನೆಯ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಆದರೆ ಇಬ್ಬರು ಮಾತ್ರ ಕಾಣಿಸಲೇ ಇಲ್ಲ.
ಅಕ್ಕನ ಮನೆಯಲ್ಲಿ ಇಷ್ಟೊಂದು ಸಂಭ್ರಮದಿಂದ ಹಬ್ಬ ನಡೆಯುವಾಗ ತಂಗಿ ತೇಜಸ್ವಿನಿ ಆನಂದ್ ಕುಮಾರ್ ಯಾವ ಫೋಟೊದಲ್ಲೂ ಕಾಣಿಸಿಕೊಂಡಿಲ್ಲ, ಯಾಕೆ ಎಂದಿದ್ದಾರೆ ಜನ.
ಇನ್ನು ಅನುಪಮಾ ಮತ್ತು ಕೃಷಿ ತಾಪಂಡ ಇಬ್ಬರೂ ಬೆಸ್ಟ್ ಫ್ರೆಂಡ್ಸ್, ಆದರೆ ಈ ಬಾರಿ ಅನುಪಮಾ ಮನೆಯ ಹಬ್ಬದಲ್ಲಿ ಕೃಷಿ ತಾಪಂಡ ಮಿಸ್ ಆಗಿರುವುದು ನೆಟ್ಟಿಗರ ಗಮನಕ್ಕೆ ಬಂದಿದೆ.
ಜನ ಕಾಮೆಂಟ್ ಮಾಡಿ ಯಾಕೆ ನಿಮ್ಮ ದೋಸ್ತ್ ಕೃಷಿ ತಾಪಂಡನ ಬಿಟ್ಬಿಟ್ರಿ, ಏನಾಯ್ತು ಎಂದು ಕೇಳಿದ್ದಾರೆ. ಆದರೆ ಕೃಷಿ ಹಾರ್ಟ್ ಇಮೋಜಿ ಹಾಕಿ ತಮ್ಮ ಪ್ರೀತಿಯನ್ನು ತೋರಿಸಿದ್ದಾರೆ.
ಅನುಪಮಾ ಗೌಡ ನಿರೂಪಣೆಗೆ ವಿದಾಯ ಹೇಳಿದ ಮೇಲೆ ಮುಂದೆ ಏನು ಎನ್ನುವ ಪ್ರಶ್ನೆ ಬಂದಿದೆ. ಶೀಘ್ರದಲ್ಲೇ ಸಿನಿಮಾದಲ್ಲಿ ನಟಿಸುತ್ತಿರುವ ಸುದ್ದಿ ಇದೆ, ಇದೆಷ್ಟು ನಿಜಾ ಅನ್ನೋದು ಗೊತ್ತಿಲ್ಲ.
ಚೊಚ್ಚಲ ತಾಯ್ತನದ ಸಂಭ್ರಮದಲ್ಲಿ ‘ಕಮಲಿ’ ಸೀರಿಯಲ್ ನಟಿ Photos Viral
ಫ್ಯಾಮಿಲಿ, ಫ್ರೆಂಡ್ಸ್ ಜೊತೆ ಸಂಭ್ರಮದಿಂದ ಬರ್ತ್ ಡೇ ಸೆಲೆಬ್ರೇಟ್ ಮಾಡಿದ ಗೊಂಬೆ
Instagram ಸಬ್‌ಸ್ಕ್ರಿಪ್ಶನ್ ಮೂಲಕವೇ ಲಕ್ಷ ಲಕ್ಷ ಸಂಪಾದಿಸ್ತಿರೋ 10 ವ್ಯಕ್ತಿಗಳು
‘ಅಣ್ಣಯ್ಯ’ ಶಿವು ಹುಟ್ಟುಹಬ್ಬಕ್ಕೆ Nisha Ravikrishnan ಸ್ಪೆಷಲ್ ವಿಶ್… ಬೇಗ ರಿಯಲ್ ಜೋಡಿಯಾಗಿ ಫ್ಯಾನ್ಸ್ ಹಾರೈಕೆ