ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ ನಟಿ ವಿಜಯಲಕ್ಷ್ಮೀ. ತಮ್ಮ ಮುಗ್ಧ ನಟನೆಯಿಂದಲೇ ಗಮನ ಸೆಳೆದ ನಟಿ ಇವರು.
ವಿಜಯಲಕ್ಷ್ಮೀ ಲಕ್ಷಣ ಸೀರಿಯಲ್ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು.
ಲಕ್ಷಣ ಧಾರಾವಾಹಿಯಲ್ಲಿ ಕಪ್ಪು ಹುಡುಗಿ ನಕ್ಷತ್ರಳ ಪಾತ್ರಕ್ಕೆ ಜೀವ ತುಂಬಿದ್ದರು ವಿಜಯಲಕ್ಷ್ಮೀ.
ನಕ್ಷತ್ರ ಪಾತ್ರವನ್ನು ಜನರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ನಕ್ಷತ್ರಾ ಮತ್ತು ಭೂಪತಿ ಜೋಡಿ ಅಂದು ಸಿಕ್ಕಾಪಟ್ಟೆ ಫೇಮಸ್ ಆಗಿತ್ತು.
ಇದೀಗ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಮೈನಾ ಧಾರಾವಾಹಿಯಲ್ಲಿ ವಿಜಯಲಕ್ಷ್ಮಿ ನಟಿಸುತ್ತಿದ್ದಾರೆ.
ಗ್ರಾಮದಿಂದ ಬೆಂಗಳೂರಿಗೆ ಬರುವ ಮೈನಾ ಅಲ್ಲಿ ಬಟ್ಟೆಯ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಪ್ರಿಯಕರ ಧ್ರುವ ಮತ್ತು ಬಾಸ್ ಮಧ್ಯದ ತ್ರಿಕೋನ ಪ್ರೇಮ ಕಥೆಯಲ್ಲಿ ಸಿಕ್ಕಿ ಬೀಳುತ್ತಾರೆ.
ಇದಲ್ಲದೇ ವಿಜಯಲಕ್ಷ್ಮೀ ಭರ್ಜರಿ ಬ್ಯಾಚುಲರ್ ರಿಯಾಲಿಟಿ ಶೋನಲ್ಲಿ ಕೂಡ ಮೆಂಟರ್ ಆಗಿ ಭಾಗವಹಿಸಿದ್ದರು.
ಭರ್ಜರಿ ಬ್ಯಾಚುಲರ್ ನ ಎಲ್ಲಾ ಎಪಿಸೋಡ್ ಗಳಲ್ಲಿ ಭಾಗವಹಿಸಿದ್ದ ವಿಜಯಲಕ್ಷ್ಮಿ ಫಿನಾಲೆ ಎಪಿಸೋಡ್ ನಲ್ಲಿ ಮಾತ್ರ ಮಿಸ್ ಆಗಿದ್ದರು.
ವಿಜಯಲಕ್ಷ್ಮಿ ಇದೀಗ ಶೂಟಿಂಗ್ ಗೆ ಬ್ರೇಕ್ ಕೊಟ್ಟು ವಿಯೆಟ್ನಾಂಗೆ ಹಾರಿದ್ದು ಅಲ್ಲಿ ಎಂಜಾಯ್ ಮಾಡ್ತಿದ್ದಾರೆ.
ವಿಜಯಲಕ್ಷ್ಮಿ ಅಲ್ಲಿನ ಸುಂದರ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಹಳ್ಳಿ ಹುಡುಗಿ ಮೈನಾ ಸಖತ್ ಸ್ಟೈಲ್ ಆಗಿ ಕಾಣಿಸಿಕೊಂಡಿದ್ದಾರೆ. ಫ್ಯಾನ್ಸ್ ವಾರೆ ವಾ ಎನ್ನುತ್ತಿದ್ದಾರೆ.
ಅತ್ತ ರಾಮಾಚಾರಿ ಸಾಯೋ ಸ್ಥಿತಿಯಲ್ಲಿದ್ರೆ… ಇತ್ತ ಸಕಲೇಶಪುರದಲ್ಲಿ ಎಂಜಾಯ್ ಮಾಡ್ತಿದ್ದಾರೆ ಚಾರು
ಯಶಸ್ವಿಯಾಗಿ ಓಡುತ್ತಿರುವ 3BHK….ಚಿತ್ರತಂಡದ ಜೊತೆ ಪಾರ್ಟಿ ಮೂಡಲ್ಲಿ ಚೈತ್ರಾ ಆಚಾರ್
'ತಾರಕ್ ಮೆಹ್ತಾ' ದಿಂದ ಜೇಠಾಲಾಲ್ ಕಾಣೆ!
'ಅಣ್ಣಯ್ಯ' ಧಾರಾವಾಹಿ ಪಿಂಕಿ ಪಾತ್ರಧಾರಿ ಸಹನಾ ಶೆಟ್ಟಿ ರಿಯಲ್ ಗಂಡ ಯಾರು?