ಕನ್ನಡ ಸಿನಿಮಾರಂಗದಲ್ಲಿ ಸಾಲು ಸಾಲು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದ ನಟಿ ನೇಹಾ ಪಾಟೀಲ್ ಹೆಚ್ಚು ಜನಪ್ರಿಯತೆ ಪಡೆದಿದ್ದು ಮಾತ್ರ ಸೀರಿಯಲ್ ಮೂಲಕವೇ.
Image credits: Instagram
ಹಿಟ್ಲರ್ ಕಲ್ಯಾಣದ ಲಕ್ಷ್ಮೀ
ಮೊದಲು ವಿಲನ್ ಆಗಿ ನಾಯಕಿ ಲೀಲಾಳನ್ನು ಮನೆಯಿಂದ ಓಡಿಸಲು ಪ್ಲ್ಯಾನ್ ಮಾಡುತ್ತಿದ್ದ ಲಕ್ಷ್ಮೀ, ಇದೀಗ ಅತ್ತೆಗಾಗಿ ಏನು ಬೇಕಾದರೂ ಮಾಡಬಲ್ಲ ಸೊಸೆಯಾಗಿ ಜನಮನ ಗೆದ್ದಿದ್ದಾರೆ.
Image credits: Instagram
ಸೀರಿಯಲ್ ಬೇಡ್ಬೇ ಬೇಡ ಅಂತಿದ್ದ ನಟಿ
ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದ ನೇಹಾ ಪಾಟೀಲ್ ಗೆ ರಾಕ್ ಲೈನ್ ವೆಂಕಟೇಶ್ ಅವರು ಒಂದು ಸೀರಿಯಲ್ ಗೆ ಆಡಿಶನ್ ನೀಡುವಂತೆ ಕರೆದಾಗ, ಅಯ್ಯೋ ಸೀರಿಯಲ್ ಬೇಡ್ವೇ ಬೇಡ ಅಂದಿದ್ರಂತೆ.
Image credits: Instagram
ಜನಮದ ಜೋಡಿ
ನಂಗೆ ಸಿನಿಮಾಗಳೇ ಸಾಕು, ಸೀರಿಯಲ್ ಗೆ ಸೆಲೆಕ್ಟ್ ಆಗೋದು ಬೇಡ ಅಂತಿದ್ದವರಿಗೆ, ಜನುಮದ ಜೋಡಿ ಸೀರಿಯಲ್ ನಲ್ಲಿ ನಾಯಕಿಯಾಗುವ ಅವಕಾಶ ಒದಗಿ ಬಂತು. ಆ ಸೀರಿಯಲ್ ಮೂಲಕವೇ ಮನೆಮಾತಾದರು.
Image credits: Instagram
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್
ಝೀ ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ರನ್ನರ್ ಅಪ್ಪರ್ ಆಗಿದ್ದರು.
Image credits: Instagram
ಕನ್ನಡ ಸಿನಿಮಾ
ಕನ್ನಡ ಚಿತ್ರಗಳಾದ ಸಿತಾರ, ವರ್ಧನ, ದಕ್ಷ, ಸ್ಮೈಲ್ ಪ್ಲೀಸ್, ಟೈಟಲ್ ಬೇಕಾ?, ಮತ್ತೆ ಸತ್ಯಾಗ್ರಾಹ, ಪೋಲೀಸ್ ಸ್ಟೋರಿ 3, ಹುಲಿ ದುರ್ಗ, ತಿಪ್ಪಾಜಿ ಸರ್ಕಲ್ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದರು.
Image credits: Instagram
ಪ್ರಣವ್ ಜೊತೆ ಮದುವೆ
ಜನುಮದ ಜೋಡಿ ಸೀರಿಯಲ್ ಆದ ಬಳಿಕ, ನೇಹಾ ಮನೆಯವರೇ ನಿಶ್ಚಯಿಸಿದ ಬ್ಯುಸಿನೆಸ್ ಮೆನ್ ಹುಡುಗ ಪ್ರಣವ್ ಜೊತೆ ಮದುವೆಯಾಗಿದ್ದರು. ಇಬ್ಬರು ಜೊತೆಯಾಗಿ ಜೋಡಿ ನಂ 1 ನಲ್ಲಿ ಕಾಣಿಸಿಕೊಂಡಿದ್ದರು.