ಕನ್ನಡತಿ ಸೀರಿಯಲ್‌ನಲ್ಲಿ ಅಮ್ಮಮ್ಮನಾಗಿ ಮನೆಮಾತಾಗಿರುವ ನಟಿ ಚಿತ್ಕಳಾ ಬಿರಾದಾರ್ ಸಂಭ್ರಮದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
Image credits: Instagram
ಮಗನ ಮದುವೆ ಸಂಭ್ರಮ
ತಮ್ಮ ಮಗನ ಮದುವೆ ಸಂಭ್ರಮದಲ್ಲಿರುವ ಚಿತ್ಕಳಾ ಬಿರಾದಾರ್ ಸೋಶಿಯಲ್ ಮೀಡಿಯಾದಲ್ಲಿ ಮಗನ ಮದುವೆಯ ಫೋಟೋಗಳನ್ನು ಜೊತೆ ಮಾಡಿ ವಿಡಿಯೋ ಮಾಡಿ ಶೇರ್ ಮಾಡಿದ್ದಾರೆ.
Image credits: Instagram
ಸೌರಭ್ - ದೇವಾಂಶಿ ವಿವಾಹ
ನನ್ನ ಮಗನ ಮದುವೆ ಮೊನ್ನೆ ನಡೆಯಿತು.. ಸೌರಭ ದೇವಾಂಶಿ ವಧುವರರಾಗಿ ಹಿರಿಯರ ಆಶೀರ್ವಾದ ಪಡೆದರು. ಅವರ ಮುಂದಿನ ಬಾಳಿಗೆ ನಿಮ್ಮ ಹಾರೈಕೆಯಿರಲಿ ಎಂದು ಹೇಳಿದ್ದಾರೆ.
Image credits: Instagram
ಅಮೇರಿಕ ಉದ್ಯೋಗಿ ಪುತ್ರ
ಚಿತ್ಕಲ ಅವರ ಪುತ್ರ ಸೌರಭ್ ಅಮೆರಿಕಾದಲ್ಲಿ ಉದ್ಯೋಗದಲ್ಲಿದ್ದು, ಕನ್ನಡತಿ ಸೀರಿಯಲ್ ಸಮಯದಲ್ಲಿ ಅವರು ಸೀರಿಯಲ್‌ನಿಂದ ಬ್ರೇಕ್ ತೆಗೆದುಕೊಂಡು ಅಮೆರಿಕಕ್ಕೆ ಹೋಗಿ ಬಂದಿದ್ದರು.
Image credits: Instagram
ಸೊಸೆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ
ಖಾಸಗಿ ಸಮಾರಂಭದಲ್ಲಿ ಸಂಪ್ರದಾಯಬದ್ಧವಾಗಿ ಮಗನ ಮದುವೆ ಮಾಡಿಸುವ ಚಿತ್ಕಳಾ ಅವರ ಸೊಸೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.
Image credits: Instagram
ಸಂಭ್ರಮದ ಕ್ಷಣಗಳು
ಮದುವೆ ಸಮಾರಂಭದ ಪ್ರತಿ ಕ್ಷಣಗಳ ಫೋಟೋಗಳನ್ನು ಸೆರೆ ಹಿಡಿದಿರುವ ಚಿತ್ಕಳ ಅದನ್ನೇ ವಿಡಿಯೋ ಮಾಡಿ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
Image credits: Instagram
ಅಭಿಮಾನಿಗಳ ಹಾರೈಕೆ
ನವ ವಧು ವರರಿಗೆ ಶುಭಹಾರೈಕೆ . ನಮ್ಮ ಅಮ್ಮಮ್ಮ ದಂಪತಿಗಳು ಬಹಳ ಚೆಂದವಾಗಿದ್ದೀರಿ . ನೀವು ಎಂದಿನಂತೆ ಲಕ್ಷಣವಾಗಿ ಕಾಣಿಸುತ್ತಿದ್ದೀರಿ . ಯಾರ ಕೆಟ್ಟ ದೃಷ್ಟಿನೂ ತಾಗದಿರಲಿ ಎಂದು ಹಾರೈಸಿದ ಅಭಿಮಾನಿಗಳು.
Image credits: Instagram
ಹರ್ಷನ ಜೊತೆಗೆ ಸ್ವಂತ ಮಗನ ಮದುವೆಯೂ ಆಯ್ತು
ಚಂದ ಮುದ್ದಾದ ಜೋಡಿ, ಹರ್ಷನ ಮದುವೆ ಜೊತೆ ಸ್ವಂತ ಮಗನ ಮದ್ವೆನೂ ಮಾಡಿಸಿ ಆಯ್ತು ಎಂದು ಇನ್ನು ಕೆಲವರು ಹೇಳಿದ್ದಾರೆ.