Small Screen

ಯಾರಿವರು ಹೇಳಿ?

ಈ ಫೋಟೋ ನೋಡಿದಾಗ ಎಲ್ಲೋ ನೋಡಿದ ಹಾಗೆ ಅನಿಸ್ತಿದ್ಯಾ? ಸರಿಯಾಗಿ ನೋಡಿ ಯಾರು ಹೇಳಿ ನೋಡೋಣ. 
 

Image credits: Instagram

ಖಡಕ್ ವಿಲನ್

ಕಿರುತೆರೆಯ ಖಡಕ್ ವಿಲನ್ ಆಗಿ ನಟಿಸಿ, ವಿಲನ್ ಅಂದ್ರೆ ಹೀಗೆ ಇರಬೇಕು ಅನ್ನೋವಷ್ಟರ ಮಟ್ಟಿಗೆ ಪಾತ್ರಕ್ಕೆ ನ್ಯಾಯ ಒದಗಿಸಿದ ನಟಿ ಇವರು. 

Image credits: Instagram

ಚೈತ್ರಾ ರಾವ್ ಸಚಿನ್

ಇವರು ಚೈತ್ರಾ ರಾವ್.. ಇನ್ನೂ ಗೊತ್ತಾಗಿಲ್ವಾ? ಗಿಣಿರಾಮ ಸೀರಿಯಲ್‌ನ ಉತ್ತರ ಕರ್ನಾಟಕದ ಖಡಕ್ ವಿಲನ್ ಭವಾನಿ ಬ್ಯಾಡಗಿ ಆಲಿಯಾಸ್ ಆಯಿ ಸಾಹೇಬ್.

Image credits: Instagram

ಆಯಿಸಾಬೇಬ್ ನಟನೆಗೆ ಜನರು ಫಿದಾ

ಗಿಣಿರಾಮ ಸೀರಿಯಲ್‌ನಲ್ಲಿ ವಿಲನ್ ಆಯಿಸಾಹೀಬಾ ಆಗಿ ನಟಿಸಿದ್ದ ಚೈತ್ರಾಗೆ ಈ ಪಾತ್ರ ಸಾಕಷ್ಟು ಹೆಸರು ಜನಪ್ರಿಯತೆ ತಂದುಕೊಟ್ಟಿದ್ದು, ಇವರ ನಟನೆಗೆ ಜನರು ಫಿದಾ ಆಗಿದ್ದಾರೆ.

Image credits: Instagram

ಹಾಸನ ಇವರ ಊರು

ಹಾಸನದಲ್ಲಿ ಹುಟ್ಟಿ ಬೆಳೆದಿರುವ ಚೈತ್ರಾ, ನಟನೆ ಎಂಟ್ರಿ ಕೊಟ್ಟಿದ್ದು ಆಕಸ್ಮಿಕವಾಗಿ. ಸದ್ಯ ತಮ್ಮ ಅದ್ಭುತ ಅಭಿನಯದ ಮೂಲಕ 5-6 ವರ್ಷಗಳಿಂದ ನಟನೆಯಲ್ಲೇ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
 

Image credits: Instagram

HR ಆಗಿದ್ದೋರು ನಟಿಯಾದ್ರು

ನಟನೆಯ ಗಂಧ ಗಾಳಿ ಗೊತ್ತಿಲ್ಲದ ಚೈತ್ರಾ ಖಾಸಗಿ ಕಂಪನಿಯಲ್ಲಿ ಎಚ್‌ಆರ್‌ ಆಗಿ ಕೆಲಸ ಮಾಡುತ್ತಿದ್ದರು. ಗಾಯಕಿಯಾಗಿದ್ದ ಚ್ರೈತ್ರಾ ನಟನೆಗೆ ಬಂದಿದ್ದು ಆಕಸ್ಮಿಕ.
 

Image credits: Instagram

ಮಿಸಸ್‌ ಬ್ಯೂಟಿಫುಲ್‌ ಐಸ್‌

ಮಿಸಸ್‌ ಕರ್ನಾಟಕ ಪೇಜೆಂಟ್‌ನಲ್ಲಿ ಭಾಗಿಯಾಗಿದ್ದ ಚೈತ್ರಾ ಮಿಸಸ್‌ ಬ್ಯೂಟಿಫುಲ್‌ ಐಸ್‌ ಟೈಟಲ್‌ ಪಡೆದಿದ್ದರೂ, ಆವಾಗ್ಲೇ ಅವರಿಗೆ ಧಾರಾವಾಹಿ ನಿರ್ದೇಶಕರಾದ ರಾಮ್‌ಜಿ ಪ್ರೊಡಕ್ಷನ್‌ನವರು ಪರಿಚಯವಾದದ್ದು. 
 

Image credits: Instagram

ಕನ್ನಡ ಸೀರಿಯಲ್

ಚೈತ್ರಾರ ಮೊದಲ ಸೀರಿಯಲ್ ನಾಗಕನ್ನಿಕೆ, ನಂತರ ಸರಯೂ, ವಿದ್ಯಾ ವಿನಾಯಕ, ನೇತ್ರಾವತಿ ಧಾರಾವಾಹಿಯಲ್ಲಿ ನಟಿಸಿದ್ದಾರೆ ಜೊತೆಗೆ ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ.
 

Image credits: Instagram

ತಮಿಳು, ತೆಲುಗಿನಲ್ಲೂ ಬ್ಯುಸಿ

ತಮಿಳಿನಲ್ಲಿ ಕಣ್ಣಮ್ಮ, ‘ಅರಮನೈ ಗಿಳಿ, ಮೈನಾ ಹಾಗೂ ತೆಲುಗಿನಲ್ಲಿ ಗುಂಡಮ್ಮ ಕಥಾ, ಇನ್ನಿತರ ಧಾರಾವಾಹಿಯಲ್ಲಿಅಭಿನಯಿಸಿದ್ದಾರೆ ಚೈತ್ರಾ.
 

Image credits: Instagram

ಪುಟ್ಟಣ್ಣ ಕಣಗಾಲ್ ಸಂಬಂಧಿ

ಕನ್ನಡ ಚಿತ್ರರಂಗದ ಮಹಾನ್ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್ ಚೈತ್ರಾರ ಸಂಬಂಧಿಯಂತೆ. ಇವರ ಅಜ್ಜಿಯ ತಮ್ಮ. ಬಾಲ್ಯದಲ್ಲೇ ಚೈತ್ರಾ ಕಣ್ಣುಗಳನ್ನು ನೋಡಿ ಇವಳನ್ನ ನಟಿಯನ್ನಾಗಿ ಮಾಡ್ತೀನಿ ಅಂದಿದ್ರಂತೆ. 
 

Image credits: Instagram
Find Next One