ಬೆಳ್ಳಿತೆರೆಯ ಕನಸು ಕಂಡಿದ್ದ ಸೀರಿಯಲ್ ನಟಿ ನಂದಿನಿ ಸಾವು ಕಂಡಿದ್ದಾರೆ.
ರಾಜರಾಜೇಶ್ವರಿ ನಗರದ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆ*ತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕನ್ನಡದ ಹಲವು ಸೀರಿಯಲ್‌ಗಳಲ್ಲಿ ನಂದಿನಿ ನಟಿಸಿದ್ದರು.
ಉದಯ ಟಿವಿಯಲ್ಲಿ ಪ್ರಸಾರವಾಗಿದ್ದ ಅಣ್ಣ ತಂಗಿ, ಮದುಮಗಳು, ಜೀವಹೂವಾಗಿದೆ, ನೀನಾದೆ ನಾ ಸೀರಿಯಲ್‌ನಲ್ಲಿ ನಟಿಸಿದ್ದರು.
ಸಾವಿಗೆ ಕಾರಣ ಏನು ಅನ್ನೋದು ತಿಳಿದುಬಂದಿಲ್ಲ. ಇನ್ನು ಕೆಲವರು ಹೃದಯಾಘಾತದಿಂದ ಸಾವು ಕಂಡಿದ್ದಾರೆ ಎಂದು ಹೇಳುತ್ತಿದ್ದಾರೆ.
ಮೂಲತಃ ವಿಜಯನಗರದ ಕೊಟ್ಟೂರಿನವರಾದ ನಂದಿನಿ, ತಮಿಳಿನಲ್ಲಿ ಗೌರಿ ಎನ್ನುವ ಸೀರಿಯಲ್‌ನಲ್ಲಿ ನಟಿಸಿದ್ದರು.
ಸೋಶಿಯಲ್ ಮೀಡಿಯಾದಲ್ಲೀ ಸಖತ್ ಆಕ್ಟೀವ್ ಆಗಿದ್ದ ನಂದಿನಿ, ಇನ್ಸ್‌ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು.
ಕಳೆದ ಆಗಸ್ಟ್‌ನಲ್ಲಿ ಯೂಟ್ಯೂಬ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದ ನಂದಿನಿ, ತಮ್ಮೂರಿನಲ್ಲಿ ಗಣಪತಿ ಹಬ್ಬದ ಸಂಭ್ರಮವನ್ನು ತಿಳಿಸಿದ್ದರು.
ನಂದಿನಿ ಅವರ ತಾಯಿ ಶಾಲೆಯ ಟೀಚರ್ ಆಗಿದ್ದು ಈಕೆಗೆ ತಂಗಿ ಕೂಡ ಇದ್ದಾರೆ. ಕುವೆಂಪು ವಿವಿಯಲ್ಲಿ ವಿದ್ಯಾಭ್ಯಾಸ ಮಾಡಿದ್ದರು.
ಇವರು ನಟಿಸಿದ್ದ ಗೌರಿ ಸೀರಿಯಲ್ ತಮಿಳಿನ ಕಲೈನರ್ ಟಿವಿಯಲ್ಲಿ ಪ್ರಸಾರ ಕಾಣುತ್ತಿತ್ತು.
ನಟಿ ರಜಿನಿ ಮನೆಯಲ್ಲಿ ಸತ್ಯನಾರಾಯಣ ಪೂಜೆ.. ಕಿರುತೆರೆ ತಾರೆಯರು ಭಾಗಿ
ತೆಲುಗು ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಶೈನ್ ಆಗ್ತಿದ್ದಾರೆ ಕನ್ನಡದ ಮಹಾಲಕ್ಷ್ಮೀ
ಹೊಸ ವರ್ಷಕ್ಕೆ ಶ್ವೇತಾ ಪ್ರಸಾದ್ ಸ್ಪೆಷಲ್ ಗಿಫ್ಟ್… ರಾಧಾ ಮಿಸ್ ಅಂದಕ್ಕೆ ಫ್ಯಾನ್ಸ್ ಫಿದಾ
ಸೀರಿಯಲ್’ಗೆ ಎಂಟ್ರಿ ಕೊಡೋದಕ್ಕೂ ಮುನ್ನ ಏನ್ ಕೆಲ್ಸ ಮಾಡ್ತಿದ್ರು ಈ ನಟಿಯರು