ಬಿಗ್ ಬಾಸ್ ಸೀಸನ್ 11 ರಲ್ಲಿ ತಮ್ಮ ಪಾಸಿಟಿವ್ ನೆಸ್ ನಿಂದಲೇ ಸದ್ದು ಮಾಡಿದ ಬೆಡಗಿ ಗೌತಮಿ ಜಾದವ್.
ಝೀ ಕನ್ನಡ ವಾಹಿನಿಯ ಸತ್ಯ ಸೀರಿಯಲ್ ಮೂಲಕ ಜನಪ್ರಿಯತೆ ಪಡೆದ ಇವರನ್ನು ಕನ್ನಡ ಕಿರುತೆರೆಯ ಲೇಡಿ ರಾಮಾಚಾರಿ ಅಂತಲೇ ಕರೆಯೋದು.
ಗೌತಮಿ ಜಾದವ್ ಹೊಸದಾಗಿ ಫೋಟೊ ಶೂಟ್ ಮಾಡಿಸಿಕೊಂಡಿದ್ದು, ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ತಿಳಿ ಬಣ್ಣದ ಸೀರೆಯುಟ್ಟು, ಕೈಯಲ್ಲಿ ತಾವರೆ ಹೂವು ಹಿಡಿದು ಮೂಗಿನಲ್ಲಿ ನತ್ತು, ಕಿವಿಯಲ್ಲಿ ಮಾಟಿ ಧರಿಸಿ ಥೇಟ್ ರವಿವರ್ಮದ ಕುಂಚದಲ್ಲಿ ಅರಳಿದ ಕಲಾಕೃತಿಯಂತೆ ಕಾಣಿಸಿಕೊಂಡಿದ್ದಾರೆ.
ಗೌತಮಿ ಜಾದವ್ ನೈಜ್ಯ ಸೌಂದರ್ಯವನ್ನು ನೋಡಿ ಅಭಿಮಾನಿಗಳು ಹಾಡಿ ಹೊಗಳಿದ್ದು, ನೀವು ತ್ರಿಪುರ ಸುಂದರಿ, ಧರೆಗಿಳಿದ ಅಪ್ಸರೆ ಎಂದು ಹಾಡಿ ಹೊಗಳಿದ್ದಾರೆ.
ಬಿಗ್ ಬಾಸ್ ಬಳಿಕ ಗೌತಮಿ ಜಾದವ್ ಕಲರ್ಸ್ ಕನ್ನಡ ವಾಹಿನಿಯ ಭಾರ್ಗವಿ LLB ಮತ್ತು ಉದಯ ಟಿವಿಯ ಸೇವಂತಿ ಧಾರಾವಾಹಿಯಲ್ಲಿ ನಟಿಸಿದ್ದರು.
ಇದೀಗ ಅಭಿಮಾನಿಗಳು ಮತ್ತೆ ಗೌತಮಿಯವರನ್ನು ದೊಡ್ಡ ಅಥವಾ ಸಣ್ಣ ತೆರೆ ಮೇಲೆ ನೋಡಲು ಕಾಯುತ್ತಿದ್ದಾರೆ. ಯಾವಾಗ ನಟಿ ಬಿಗ್ ನ್ಯೂಸ್ ಕೊಡುತ್ತಾರೆ ಕಾದು ನೋಡಬೇಕು.
ಸದ್ಯ ನಟನೆಯಿಂದ ದೂರ ಉಳಿದಿರುವ ನಟಿ ಗೌತಮಿ, ಪತಿ ಅಭಿಷೇಕ್ ಕಾಸರಗೋಡ್ ಜೊತೆ ಕ್ವಾಲಿಟಿ ಟೈಮ್ ಕಳೆಯುತ್ತಿದ್ದಾರೆ.
ಅಮ್ಮನ ಮನೆಯ ಶಾಸ್ತ್ರದಂತೆ ಸೀಮಂತ ಮಾಡಿಕೊಂಡ ಲಕ್ಷ್ಮೀ ಬಾರಮ್ಮ ನಟಿ ರಶ್ಮಿ ಪ್ರಭಾಕರ್
ಬರ್ತ್ ಡೇ ಗರ್ಲ್ ಮೇಘಾ ಶೆಟ್ಟಿ ವೈಯ್ಯಾರಕ್ಕೆ ಪಡ್ಡೆಗಳ ದಿಲ್ ದಢಕ್ ಹೆಚ್ಚಿದೆ
ಊರಿನಲ್ಲೇ ಸೀಮಂತ ಮಾಡ್ಕೊಂಡ ಕನ್ನಡ ನಟಿ ನವ್ಯಾ ನಾರಾಯಣ ಗೌಡ ಫೋಟೋಗಳಿವು!
ಶಿರಡಿಯಲ್ಲಿ ಕೃಷಿ, ಅನುಪಮಾ ಗೌಡ... ಫ್ರೆಂಡ್ಸ್ ಅಂದ್ರೆ ಹೀಗಿರಬೇಕು ಅಲ್ವಾ?