ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಚಿನ್ನು ಪಾತ್ರದ ಮೂಲಕ ಮನೆಮಾತಾಗಿದ್ದ ನಟಿ ರಶ್ಮಿ ಪ್ರಭಾಕರ್ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
tv-talk Aug 07 2025
Author: Pavna Das Image Credits:instagram
Kannada
ಸೀಮಂತ ಸಂಭ್ರಮ
ಇತ್ತೀಚೆಗೆ ಲಕ್ಷ್ಮೀ ಪ್ರಭಾಕರ್ ಅವರ ಸೀಮಂತವೂ ತುಂಬಾನೆ ಸರಳವಾಗಿ ಗಂಡನ ಮನೆಯಲ್ಲಿ ನಡೆದಿದ್ದು, ನಟಿ ಅಲ್ಲಿನ ಸುಂದರ ಫೋಟೊಗಳನ್ನು ಶೇರ್ ಮಾಡಿದ್ದರು.
Image credits: instagram
Kannada
ಅಮ್ಮನ ಮನೆಯ ಶಾಸ್ತ್ರ
ಇದೀಗ ತಮ್ಮ ತಾಯಿ ಮನೆಯಲ್ಲಿ ಅಮ್ಮನ ಮನೆಯ ಶಾಸ್ತ್ರದಂತೆ ಮತ್ತೊಮ್ಮೆ ಪೂರ್ತಿಯಾಗಿ ಸಿಂಗರಿಸಿಕೊಂಡು ಸೀಮಂತ ಶಾಸ್ತ್ರವನ್ನು ಮಾಡಿಕೊಂಡಿದ್ದಾರೆ.
Image credits: instagram
Kannada
9 ಯಾರ್ಡ್ ಸೀರೆ
ಅಮ್ಮನ ಮನೆಯ ಶಾಸ್ತ್ರದಲ್ಲಿ 9 ಯಾರ್ಸ್ ಸೀರೆ ಮಡಿಸರ್ ಉಡುವ ಕನಸು ನನಸಾಗಿದೆ. ನಮ್ಮ ಪುಟ್ಟ ಕನಸಿಗಾಗಿ ಕಾಯುತ್ತಿದ್ದೇವೆ ಎಂದು ನಟಿ ರಶ್ಮಿ ಬರೆದುಕೊಂಡಿದ್ದಾರೆ.
Image credits: instagram
Kannada
ರಶ್ಮಿ ಮುಖದಲ್ಲಿ ಗರ್ಭಿಣಿ ಕಳೆ
ನಟಿ ರಶ್ಮಿ ಮುಖದಲ್ಲಿ ಗರ್ಭಿಣಿ ಕಳೆ ಎದ್ದು ಕಾಣುತ್ತಿದ್ದು, ನಟಿ ಹಸಿರು ಬಣ್ಣದ, ನೇರಳೆ ಬಾರ್ಡರ್ ಇರುವ ಸೀರೆ ಧರಿಸಿದ್ದು, ತಮಿಳು ಅಯ್ಯಂಗಾರಿ ಸ್ಟೈಲ್ ನಲ್ಲಿ ರೆಡಿಯಾಗಿದ್ದಾರೆ.
Image credits: instagram
Kannada
ನಿಖಿಲ್ ಭಾರ್ಗವ್ ಜೊತೆ ಮದುವೆ
ನಟಿ ರಶ್ಮಿ ಪ್ರಭಾಕರ್ ಏಪ್ರಿಲ್ 25, 2022 ರಂದು ನಿಖಿಲ್ ಭಾರ್ಗವ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಇದೀಗ ಮದುವೆಯಾಗಿ ಮೂರು ವರ್ಷದ ಬಳಿಕ ತಾಯಿಯಾಗುತ್ತಿದ್ದಾರೆ.
Image credits: instagram
Kannada
ರಶ್ಮಿ ನಿಖಿಲ್ ಜೋಡಿ ಸೂಪರ್
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ರಶ್ಮಿ ಹೆಚ್ಚಾಗಿ ತಮ್ಮ ಪತಿ ಜೊತೆಗಿನ ಮುದ್ದಾದ ಕ್ಷಣಗಳನ್ನು ಶೇರ್ ಮಾಡುತ್ತಿರುತ್ತಾರೆ. ಇವರಿಬ್ಬರ ಜೋಡಿಯನ್ನು ಜನ ಇಷ್ಟಪಟ್ಟಿದ್ದಾರೆ.
Image credits: instagram
Kannada
ರಶ್ಮಿ ನಟಿಸಿದ ಸೀರಿಯಲ್ ಗಳು
ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ಲಚ್ಚಿ ಪಾತ್ರಕ್ಕೆ ಜೀವ ತುಂಬಿದ ನಟಿ ರಶ್ಮಿ ಪ್ರಭಾಕರ್ ಬಳಿಕ ʼಜೀವನ ಚೈತ್ರʼ ‘ಶುಭ ವಿವಾಹ’, ‘ಮನಸ್ಸೆಲ್ಲಾ ನೀನೇ’ ಧಾರಾವಾಹಿಗಳಲ್ಲಿ ನಟಿಸಿದ್ದರು.
Image credits: instagram
Kannada
ಸಿನಿಮಾಗಳು
ರಶ್ಮಿ ಸಿನಿಮಾಗಳಲ್ಲೂ ನಟಿಸಿದ್ದು, ‘ಬಿ5ʼ, ʼಮಹಾಕಾವ್ಯʼ ಇವರು ನಟಿಸಿದ ಸಿನಿಮಾಗಳು. ಅಷ್ಟೇ ಅಲ್ಲದೆ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ʼಸೂಪರ್ ಕ್ವೀನ್ʼ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಗೆದ್ದಿದ್ದರು.