Kannada

ಕಪಿಲ್ ಶರ್ಮಾ

ತಮ್ಮ ಹಾಸ್ಯಗಳ ಮೂಲಕವೇ ದೇಶಾದ್ಯಂತ ಹೆಸರು ಗಳಿಸಿರುವ ಕಪಿಲ್ ಶರ್ಮಾ, ದೇಶ ವಿದೇಶದಲ್ಲೂ ಆಸ್ತಿ, ಹಣ ಮಾಡಿದ್ದಾರೆ. ಇವರ ಜೀವನ ಶೈಲಿ, ನೆಟ್ ವರ್ತ್ ಬಗ್ಗೆ ತಿಳಿಯೋಣ.

Kannada

ಕಪಿಲ್ ಶರ್ಮಾ ಐಷಾರಾಮಿ ಜೀವನ

ಕಪಿಲ್ ಶರ್ಮಾ ಮುಂಬೈನಲ್ಲಿ ಭವ್ಯವಾದ ಅಪಾರ್ಟ್ಮೆಂಟ್ ಹೊಂದಿದ್ದಾರೆ, ಇದು ಕೋಟ್ಯಂತರ ರೂಪಾಯಿ ಮೌಲ್ಯದ್ದಾಗಿದೆ . ಈ ಮನೆ ಅರಮನೆಯಂತೆ ಇದೆ ಎನ್ನಲಾಗುತ್ತಿದೆ.

Image credits: Instagram
Kannada

ಮುಂಬೈನಲ್ಲಿ ಐಷಾರಾಮಿ ಬಂಗಲೆ

ಕಪಿಲ್ ಶರ್ಮಾ ಮುಂಬೈ ಮನೆ ಲಕ್ಸುರಿಯಾಗಿದೆ. ಇದು ಅಂಧೇರಿ ಪಶ್ಚಿಮ ಪ್ರದೇಶದಲ್ಲಿ ಸಮುದ್ರಕ್ಕೆ ಎದುರಾಗಿದ್ದು, ಇದರ ಮೌಲ್ಯ ಬರೋಬ್ಬರಿ 15 -20 ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದೆ.

Image credits: Instagram
Kannada

ಪಂಜಾಬ್‌ನಲ್ಲಿ ಫಾರ್ಮ್‌ಹೌಸ್

ಪಂಜಾಬ್‌ನಲ್ಲಿರುವ ಕಪಿಲ್ ಶರ್ಮಾ ಅವರ ಫಾರ್ಮ್‌ಹೌಸ್ ಅರಮನೆಗಿಂತ ಕಡಿಮೆಯಿಲ್ಲ. ಹಚ್ಚ ಹಸಿರಿನ ನಡುವೆ ನೆಲೆಗೊಂಡಿರುವ ಈ ಫಾರ್ಮ್‌ಹೌಸ್ ಫ್ಯಾಮಿಲಿ ಜೊತೆ ಸಮಯ ಕಳೆಯಲು ಬೆಸ್ಟ್ ತಾಣ.

Image credits: Instagram
Kannada

ಫಾರ್ಮ್‌ಹೌಸ್ ಬೆಲೆ ಎಷ್ಟು?

ಕಪಿಲ್ ಶರ್ಮಾ ಅವರ ತೋಟದ ಮನೆಯ ಬೆಲೆ 20-25 ಕೋಟಿ ರೂಪಾಯಿಗಳು ಎಂದು ಹೇಳಲಾಗುತ್ತದೆ. ಒಟ್ಟಲ್ಲಿ ಕಪಿಲ್ ಶರ್ಮಾ ಅವರ ಮನೆಗಳೆಲ್ಲಾ ಭಾರಿ ದುಬಾರಿಯಾಗಿದೆ.

Image credits: Instagram
Kannada

ಪ್ರಕೃತಿಯ ನಡುವೆ ಕಪಿಲ್ ಶರ್ಮಾ

ಕಪಿಲ್ ಶರ್ಮಾ ಜನಸಂದಣಿ ಮತ್ತು ಗದ್ದಲದಿಂದ ಬೇಸತ್ತಾಗಲೆಲ್ಲಾ, ಈ ಶಾಂತ ಪ್ರಕೃತಿಯ ನಡುವೆ ಕುಟುಂಬದ ಜೊತೆ ಇದ್ದು ಎಂಜಾಯ್ ಮಾಡುತ್ತಾರೆ.

Image credits: Instagram
Kannada

ಕಾರುಗಳ ಕ್ರೇಜ್

ಕಪಿಲ್ ಶರ್ಮಾ ದುಬಾರಿ ಮತ್ತು ಪ್ರೀಮಿಯಂ ಕಾರುಗಳು ಸೇರಿದಂತೆ ಹಲವಾರು ಐಷಾರಾಮಿ ವಾಹನಗಳನ್ನು ಹೊಂದಿದ್ದಾರೆ. ಅವರ ಕಾರು ಸಂಗ್ರಹವು ಅವರ ಲಕ್ಸುರಿ ಲೈಫ್ ಸ್ಟೈಲ್ ಗೆ ಉದಾಹರಣೆ.

Image credits: Instagram
Kannada

ಅರಮನೆಯಂತಹ ಮನೆ

ಕಪಿಲ್ ಶರ್ಮಾ ಅವರ ಮನೆ ಅರಮನೆಗಿಂತ ಕಡಿಮೆಯಿಲ್ಲ. ಅಷ್ಟೊಂದು ಲಕ್ಸುರಿಯಾಗಿದೆ. ಕಪಿಲ್ ಶರ್ಮಾ ಅವರ ಅಂದಾಜು ನಿವ್ವಳ ಮೌಲ್ಯ 300 ಕೋಟಿ ಎಂದು ಅಂದಾಜಿಸಲಾಗಿದೆ.

Image credits: Instagram
Kannada

ಕಪಿಲ್ ಶರ್ಮಾ ಕೆಫೆ

ಕಪಿಲ್ ಶರ್ಮಾ ದುಬೈ ಹಾಗೂ ಕೆನಡಾದಲ್ಲಿ ‘ಕಪ್ಸ್ ಕೆಫೆ’ ತೆರೆದಿದ್ದಾರೆ. ಆ ಮೂಲಕ ವಿದೇಶದಲ್ಲೂ ಆಸ್ತಿ ಮಾಡಿಟ್ಟುಕೊಂಡಿದ್ದಾರೆ ಕಪಿಲ್ ಶರ್ಮಾ.

Image credits: Instagram
Kannada

ವ್ಯಾನಿಟಿ ವ್ಯಾನ್

ಕಪಿಲ್ ಶರ್ಮಾ ಬಳಿ ₹5.5 ಕೋಟಿ ಮೌಲ್ಯದ ಐಷಾರಾಮಿ, ಕಸ್ಟಮೈಸ್ ಮಾಡಿದ ವ್ಯಾನಿಟಿ ವ್ಯಾನ್ ಕೂಡ ಇದೆ.

Image credits: Instagram

80ರ ದಶಕದ ನಾಯಕಿಯರ 2026ರ ಸ್ಟೈಲಿಶ್ ಲುಕ್ AI Photos

ತುಂಬು ಗರ್ಭಿಣಿ ಲಕ್ಷ್ಮೀ ನಿವಾಸ ನಟಿ ಮಾನಸ ಮನೋಹರ್ Baby Shower Photos

ಕರ್ಣ, ನಿಧಿ ಥೈಲ್ಯಾಂಡಲ್ಲಿ…. ಕರಾವಳಿ ಕರ್ನಾಟಕದಲ್ಲಿ ನಮೃತಾ ಗೌಡ ಟೆಂಪಲ್ ರನ್

ಥೈಲಾಂಡಲ್ಲಿ ಕಿರುತೆರೆ ನಟರ ಸಮ್ಮರ್ ವೆಕೇಶನ್… ಎಷ್ಟು ಕ್ಯೂಟಾಗಿ ಕಾಣಿಸ್ತಿದ್ದಾರೆ ನೋಡಿ ಭವ್ಯಾ