ಆಶಾ ಅಯ್ಯನರ್ (Asha Ayyanar) ಅಂದ್ರೆ ನೀವು ಖಂಡಿತವಾಗಿ ಯಾರೀಕೆ ಎಂದು ಕೇಳ್ತೀರಾ? ಆದ್ರೆ ಭಾಗ್ಯಲಕ್ಷ್ಮೀ ಸೀರಿಯಲ್ ನ ಪೂಜಾ ಪಾತ್ರದ ಬಗ್ಗೆ ಕೇಳಿದ್ರೆ ಖಂಡಿತಾ ಗೊತ್ತಿರುತ್ತೆ ಅಲ್ವಾ?
tv-talk Jun 03 2023
Author: Suvarna News Image Credits:social media
Kannada
ಕುತಂತ್ರಿ ಪೂಜಾ
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ, ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ (serial) ನಟಿಸುತ್ತಿರುವ ಆಶಾ ಆಲಿಯಾಸ್ ಪೂಜಾ, ಲಕ್ಷ್ಮೀ ಬದುಕನ್ನು ಹಾಳು ಮಾಡಲು ಹೊರಟಿರೋ ಕುತಂತ್ರಿ.
Image credits: social media
Kannada
ನೆಗೆಟಿವ್ ರೋಲ್
ರಾಧಾ ರಮಣಾ, ಮೂರು ಗಂಟು ಸೀರಿಯಲ್ ನಲ್ಲಿ ನಟಿಸಿರುವ ಆಶಾ ಭಾಗ್ಯಲಕ್ಷ್ಮಿಯ ಪೂಜಾ ಆಗಿ ನೆಗೆಟಿವ್ ರೋಲ್ (negative role) ಮೂಲಕವೇ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದ್ದಾರೆ.
Image credits: social media
Kannada
ಬೈಗುಳಕ್ಕೆ ಖುಷಿ ಪಡ್ತಾರೆ
ತಮ್ಮ ಆನ್ ಸ್ಕ್ರೀನ್ ಪಾತ್ರದಿಂದಾಗಿ ಸೋಶಿಯಲ್ ಮೀಡೀಯಾದಲ್ಲಿ ಪ್ರೇಕ್ಷಕರಿಂದ ಬೈಸಿಕೊಳ್ಳುವ ಆಶಾ, ಅದನ್ನು ನೆಗೆಟಿವ್ ಆಗಿ ತೆಗೆದುಕೊಳ್ಳದೆ, ತನ್ನ ನಟನೆಯನ್ನು ಜನ ಒಪ್ಪಿಕೊಂಡಿರೋದಕ್ಕೆ ಖುಷಿಯಾಗಿದ್ದಾರೆ.
Image credits: social media
Kannada
ರೀಲ್ಸ್ ರಾಣಿ
ಸೀರಿಯಲ್ ನಲ್ಲೂ ರೀಲ್ಸ್ ಮಾಡಿಕೊಂಡೇ ಇರುವ ಆಶಾ ನಿಜ ಜೀವನದಲ್ಲೂ ಸೀರಿಯಲ್ ತಂಡದವರ ಜೊತೆ ತುಂಬಾನೆ ರೀಲ್ಸ್ ಮಾಡಿಕೊಂಡು ಸೋಶಿಯಲ್ ಮಿಡಿಯಾದಲ್ಲಿ (social media) ಪ್ರತಿದಿನ ಶೇರ್ ಮಾಡ್ತಾರೆ.
Image credits: social media
Kannada
ಪೂಜಾ ತರ ಅಲ್ವೇ ಅಲ್ಲ
ಆನ್ ಸ್ಕ್ರೀನ್ ಪಾತ್ರ ಪೂಜ ತರ ಅಲ್ವೇ ಅಲ್ಲ. ತುಂಬಾ ಚಿಲ್ ಆಗಿ, ಎಲ್ಲರನ್ನೂ ನಗಿಸ್ತಾ ಇರೋಳು ನಾನು. ನಿಜ ಜೀವನದಲ್ಲಿ ನನ್ನ ಹುಡುಗನನ್ನು ಯಾರದ್ರೂ ಮದ್ವೆ ಆಗ್ತಾರೆ ಅಂದ್ರೆ ಬಿಟ್ಟುಕೊಡುವಂತಹ ಹುಡುಗಿ ನಾನು ಅಂತಾರೆ.
Image credits: social media
Kannada
ಫೋಟೋ ಶೂಟ್
ಇವರ ಸೋಶಿಯಲ್ ಮೀಡಿಯಾ ನೋಡಿದ್ರೆ ಸಾಂಪ್ರದಾಯಿಕ ಉಡುಗೆಯಲ್ಲಿ ಸಾಕಷ್ಟು ಫೋಟೋ ಶೂಟ್ ಮಾಡಿಸಿರೋದು ಕಾಣಬಹುದು. ತಮ್ಮ ಫೋಟೋ, ರೀಲ್ಸ್ ಮೂಲಕವೇ ಜನರಿಗೆ ಇವರು ಹತ್ರ ಆಗ್ತಿದ್ದಾರೆ.