ನಿರೂಪಕಿ ಅನುಶ್ರೀ ಮದುವೆಯಾದ ಬಳಿಕ ಮೊದಲ ಬಾರಿ ಅದ್ಧೂರಿಯಾಗಿ ಸಂಕ್ರಾಂತಿ ಹಬ್ಬವನ್ನು ಆಚರಿಸಿಕೊಂಡಿದ್ದು, ಫೋಟೊಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
tv-talk Jan 16 2026
Author: Pavna Das Image Credits:Instargam
Kannada
ಕೆಂಪು ಸೀರೆಯಲ್ಲಿ ಅನುಶ್ರೀ
ಅನುಶ್ರೀ ಕೆಂಪು ಬಣ್ಣದ ಸೀರೆಯುಟ್ಟು, ಕೈಯಲ್ಲಿ ಸೀರೆ, ಗಾಜಿನ ಬಳೆ, ಹೂವು, ಕುಂಕುಮ ಅರಿಶಿನದ ತಟ್ಟೆ ಹಿಡಿದು ನಿಂತಿರುವ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ. ಜೊತೆಗೆ ಹಬ್ಬದ ಶುಭಾಶಯ ತಿಳಿಸಿದ್ದಾರೆ.
Image credits: Instargam
Kannada
ಸಂಕ್ರಾಂತಿ ಹಬ್ಬ
ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡೋಣ… ಮಕರ ಸಂಕ್ರಾಂತಿ ಸಂಭ್ರಮಿಸೋಣ !!!ಎಲ್ಲರಿಗೂ ಶುಭವಾಗಲಿ ಎಂದು ಸಂಕ್ರಾಂತಿ ಹಬ್ಬದ ದಿನ ನಾಡಿನ ಸಮಸ್ತ ಜನತೆಗೆ ನಟಿ ಶುಭಾಶಯ ತಿಳಿಸಿದ್ದಾರೆ.
Image credits: Instargam
Kannada
ಸೀರೆಯಲ್ಲಿ ದೇವತೆಯ ರೂಪ
ಕೆಂಪು ಸೀರೆ ಹಾಗೂ ಆ ನಗುವಿನಲ್ಲಿ ಅನುಶ್ರೀ ಥೇಟ್ ದೇವತೆಯಂತೆ ಕಾಣಿಸುತ್ತಿದ್ದಾರೆ ಎಂದು ಅಭಿಮಾನಿಗಳು ತಿಳಿಸಿದ್ದಾರೆ, ಜೊತೆಗೆ ಅನುಶ್ರೀ ಬದುಕಲ್ಲಿ ಯಾವಾಗಲೂ ಸಿಹಿ ಇರಲಿ ಎಂದು ಹಾರೈಸಿದ್ದಾರೆ.
Image credits: Instargam
Kannada
ಕಾಮೆಂಟ್ ಸೆಕ್ಷನ್ ಪೂರ್ತಿ ಗಿಲ್ಲಿ ಹವಾ
ಇನ್ನು ಅನುಶ್ರೀ ಕೂಡ ಬಿಗ್ ಬಾಸ್ ಸ್ಪರ್ಧಿ ಗಿಲ್ಲಿ ಜೊತೆ ಕ್ಲೋಸ್ ಆಗಿರುವುದರಿಂದ ಅನುಶ್ರೀ ಫೋಟೊ ಕಾಮೆಂಟ್ ಸೆಕ್ಷನ್ ಪೂರ್ತಿಯಾಗಿ ಗಿಲ್ಲಿಗೆ ಓಟ್ ಮಾಡಲು ಮನವಿ ಮಾಡಲಾಗಿದೆ.
Image credits: Instargam
Kannada
ಅನುಶ್ರೀ ಮದುವೆ
ಅನುಶ್ರೀ ಕಳೆದ ವರ್ಷ ಆಗಸ್ಟ್ 28ರಂದು ಬ್ಯುಸಿನೆಸ್ ಮ್ಯಾನ್ ಆಗಿರುವ ರೋಷನ್ ಅವರ ಜೊತೆ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಮೊದಲ ಸಂಕ್ರಾಂತಿ ಹಬ್ಬ ಆಚರಿಸುತ್ತಿದ್ದಾರೆ.
Image credits: Instgaram
Kannada
ಡ್ಯಾನ್ಸ್ ಕರ್ನಾಟಕ ನಿರೂಪಣೆ
ಸದ್ಯ ಅನುಶ್ರೀ ಜೀ ಕನ್ನಡದ ಜನಪ್ರಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ನಿರೂಪಣೆ ಮಾಡುತ್ತಿದ್ದಾರೆ.