ತಮ್ಮ ನಿರರ್ಗಳ ಮಾತಿನ ಮೂಲಕ ಮೋಡಿ ಮಾಡುವ ನಿರೂಪಕಿ ಅನುಶ್ರೀ ವರ್ಷದ ಕೊನೆಯ ದಿನ ತಮ್ಮ ಸುಂದರವಾದ ಫೊಟೋಗಳನ್ನು ಶೇರ್ ಮಾಡಿ ಅಭಿಮಾನಿಗಳಿಗೆ ಪ್ರಶ್ನೆ ಕೂಡ ಕೇಳಿದ್ದಾರೆ.
tv-talk Dec 31 2025
Author: Pavna Das Image Credits:Instgaram
Kannada
ಕಪ್ಪು ಗೌನಲ್ಲಿ ಮಿಂಚಿದ ಮಾತಿನ ಮಲ್ಲಿ
ಮಾತಿನ ಮಲ್ಲಿ ಅನುಶ್ರೀ ಕಪ್ಪು ಬಣ್ಣದ ಸಿಂಪಲ್ ಗೌನ್ ಧರಿಸಿ, ಅದರ ಒಪ್ಪುವ ಗೋಲ್ಡನ್ ಮಿನಿಮಲ್ ಜ್ಯುವೆಲ್ಲರಿಯಲ್ಲಿ ಮಿಂಚಿದ್ದಾರೆ.
Image credits: Instgaram
Kannada
ವರ್ಷದ ಕೊನೆಯ ದಿನ
ಅನುಶ್ರೀ ತಮ್ಮ ಫೋಟೋಗಳನ್ನು ಶೇರ್ ಮಾಡಿ, ಈ ವರ್ಷದ ಕೊನೆಯ ದಿನ ಆದ್ರೆ ಹರುಷಕ್ಕೆ ಇದು ಕೊನೆ ದಿನವಲ್ಲ ಎನ್ನುವ ಮಾತುಗಳನ್ನು ಹಂಚಿಕೊಂಡಿದ್ದಾರೆ.
Image credits: Instgaram
Kannada
ಅಭಿಮಾನಿಗಳಿಗೆ ಪ್ರಶ್ನೆ ಕೇಳಿದ ಅನುಶ್ರೀ
ಅಷ್ಟೇ ಅಲ್ಲದೇ ಅನುಶ್ರೀ ಅಭಿಮಾನಿಗಳಿಗೆ ಪ್ರಶ್ನೆಯನ್ನೂ ಸಹ ಕೇಳಿದ್ದು, ಈ ವರ್ಷದ ಒಂದೊಳ್ಳೆ ಕ್ಷಣ ನಿಮ್ಮ ಜೀವನದಲ್ಲಿ ಯಾವುದು? ಎಂದು ಕೇಳಿದ್ದಾರೆ.
Image credits: Instgaram
Kannada
ನಿಮ್ಮ ಮದುವೆಯೇ ನಮ್ಮ ಮಧುರ ಕ್ಷಣ
ಇದಕ್ಕೆ ಹೆಚ್ಚಿನ ಅಭಿಮಾನಿಗಳು ಈ ವರ್ಷ ನಿಮ್ಮ ಮದುವೆಯಾಗಿರುವುದೇ ನಮ್ಮ ಜೀವನದ ಮಧುರ ಕ್ಷಣದಲ್ಲಿ ಒಂದು, ನೀವು ಎಷ್ಟು ಖುಷಿಪಟ್ಟಿದ್ದೀರೋ, ಅಷ್ಟೇ ನಾವು ಸಂಭ್ರಮಿಸಿದ್ದೇವೆ ಎಂದಿದ್ದಾರೆ.
Image credits: Instgaram
Kannada
ನಿಮ್ಮನ್ನ ಭೇಟಿಯಾಗಿದ್ದೇ ಮಧುರ ಕ್ಷಣ
ಕರುನಾಡಿನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಆಂಕರ್ ಅನುಶ್ರೀಯವರನ್ನು ಭೇಟಿಯಾಗಿದ್ದೇ ನಮ್ಮ ಮಧುರ ಕ್ಷಣ ಎಂದು ಇನ್ನೊಬ್ಬ ಅಭಿಮಾನಿ ಹೇಳಿದ್ದಾರೆ.
Image credits: Instgaram
Kannada
ಮಂಗಳಸೂತ್ರವನ್ನು ಬಿಡ್ತಿಲ್ಲ ಜನ
ಇನ್ನೂ ಕೆಲವರಂತೂ ಅಕ್ಕ ನೀವು ಸೂಪರ್ ಆದ್ರೂ ಮಂಗಳ ಸೂತ್ರ ಧರಿಸೋದನ್ನು ಮರಿಬೇಡಿ, ಹಾಕಿ ಎಂದು ಮತ್ತೆ ಕರಿಮಣಿ ವಿಷ್ಯ ನೆನಪಿಸಿಕೊಂಡಿದ್ದಾರೆ.