Small Screen

ಅಕ್ಷತಾ ದೇಶಪಾಂಡೆ

ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಕಥೆಯೊಂದು ಶುರುವಾಗಿದೆ ಸೀರಿಯಲ್ ನಾಯಕಿ ಕೃತಿ ಪಾತ್ರ ನಿರ್ವಹಿಸುತ್ತಿರುವ ಅಕ್ಷತಾ ದೇಶಪಾಂಡೆ ಇದೀಗ ತಮಿಳು ಸೀರಿಯಲ್ ನಲ್ಲಿ ಅವಕಾಶ ಪಡೆದಿದ್ದಾರೆ. 
 

Image credits: Instagram

ಅನಾಮಿಕ

ಅಕ್ಷತಾ ತಮಿಳಿನಲ್ಲಿ ಹೊಸದಾಗಿ ಆರಂಭವಾಗಲಿರುವ ಹಾರರ್ ಥ್ರಿಲ್ಲರ್ ಅನಾಮಿಕ ಸೀರಿಯಲ್‌ನಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ಇದರಲ್ಲಿ ಕನ್ನಡದ ಮತ್ತೊಬ್ಬ ನಟ ದರ್ಶಕ್ ಸಹ ನಟಿಸಿದ್ದಾರೆ. 
 

Image credits: Instagram

ಪರಿಶ್ರಮಕ್ಕೆ ಫಲ

ಈ ಬಗ್ಗೆ ಅಕ್ಷತಾ ತಮ್ಮ ಸೋಶಿಯಲ್ ಮೀಡೀಯಾದಲ್ಲಿ ಶೇರ್ ಮಾಡಿದ್ದು, ಇದಕ್ಕಾಗಿ ನಾನು ಬಹಳ ಸಮಯದಿಂದ ಕಠಿಣ ಪರಿಶ್ರಮ ಪಟ್ಟಿದ್ದೇನೆ, ನಿಮಗೆಲ್ಲಾ ಇಷ್ಟವಾಗುತ್ತೆ ಎಂದು ನಂಬಿದ್ದೇನೆ ಎಂದು ಬರೆದುಕೊಂಡಿದ್ದಾರೆ. 
 

Image credits: Instagram

ಬೆಳಗಾವಿ ಚೆಲುವೆ

ನಟಿ ಮತ್ತು ಮಾಡೆಲ್ ಆಗಿರುವ ಬೆಳಗಾವಿ ಮೂಲದ ಈ ಚೆಲುವೆ ಸದ್ಯ ಬೆಂಗಳೂರಿನಲ್ಲಿ ಸೆಟಲ್ ಆಗಿದ್ದಾರೆ. ಡ್ಯಾನ್ಸಿಂಗ್, ಟ್ರಾವೆಲಿಂಗ್ ಮಾಡುವ ಹವ್ಯಾಸವಿದೆ.
 

Image credits: Instagram

ಮತ್ತೆ ವಸಂತ

ಮತ್ತೆ ವಸಂತ ಸೀರಿಯಲ್ ಮೂಲಕ ನಟನೆಗೆ ಕಾಲಿಟ್ಟ ಅಕ್ಷತಾ, ಬಳಿಕ ಕಾವ್ಯಾಂಜಲಿ ಸೀರಿಯಲ್‌ನಲ್ಲಿ ಅಂಜಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಕಥೆಯೊಂದು ಶುರುವಾಗಿದೆ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. 
 

Image credits: Instagram

ಕೃತಿ ಪಾತ್ರ ತುಂಬಾ ಹತ್ತಿರ

ಕೃತಿ ಪಾತ್ರ ತನ್ನ ಜೀವನಕ್ಕೆ ತುಂಬಾ ಹತ್ತಿರವಾಗಿದೆ ಎನ್ನುವ ಅಕ್ಷತಾಗೆ ಧಾರಾವಾಹಿಯಲ್ಲಿ ಅಕ್ಕ, ತಂಗಿ ಜೊತೆ ಉತ್ತಮ ಬಾಂಧವ್ಯ ಇದ್ದಂತೆ, ನಿಜ ಜೀವನದಲ್ಲೂ ಅಕ್ಕನ ಜೊತೆ ಬಾಂಡಿಂಗ್ ಚೆನ್ನಾಗಿದೆಯಂತೆ. 

Image credits: Instagram

ಸೋಶಿಯಲ್ ಮೀಡೀಯಾ

ಸೋಶಿಯಲ್ ಮೀಡೀಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುವ ಅಕ್ಷತಾ ದೇಶಪಾಂಡೆ ಪ್ರತಿದಿನ ಒಂದೊಂದು ಹೊಸ ರೀಲ್ಸ್ ಮಾಡಿಕೊಂಡು ತಮ್ಮ ಅಭಿಮಾನಿಗಳ ಜೊತೆ ಕನೆಕ್ಟ್ ಆಗಿರ್ತಾರೆ. 
 

Image credits: Instagram

ಸರಿಗಮಪ ಅಶ್ವಿನ್ ಶರ್ಮಾ ನಿಶ್ಚಿತಾರ್ಥ; ಮಂಡಿಯೂರಿ ಪ್ರಪೋಸ್ ಮಾಡಿದ ಫೋಟೋ ವೈರಲ್!

ಲಕ್ಷಣ ಸೀರಿಯಲ್‌ನ ಹ್ಯಾಂಡ್ಸಮ್ ಹಂಕ್ ಮೌರ್ಯ ಬಗ್ಗೆ ನಿಮಗೆಷ್ಟು ಗೊತ್ತು?

ತಾಯಿ ಆಗುತ್ತಿದ್ದಂತೆ ಲುಕ್ ಬದಲಾಯಿಸಿಕೊಂಡ ಕಿರುತೆರೆ ನಟಿ ರಾಧಿಕಾ ರಾವ್!

ಧನುಶ್ರೀ ಬಾತ್ ರೂಮ್ ಫೋಟೋ ನೋಡಿ ನೆಟ್ಟಿಗರು ಏನಂದ್ರು ಗೊತ್ತಾ?