ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷಣ ಸೀರಿಯಲ್ ದಿನದಿಂದ ದಿನಕ್ಕೆ ವಿಚಿತ್ರ ತಿರುವುಗಳನ್ನು ಪಡೆಯುತ್ತಾ ಸಾಗಿದೆ. ಸದ್ಯಕ್ಕಂತೂ ಮೌರ್ಯ- ಶ್ವೇತಾರದ್ದೇ ಕಥೆಯಾಗಿದೆ.
Image credits: Instagram
ವಿಲನ್‌ನಿಂದ ಹೀರೋವರೆಗೆ
ವಿಲನ್ ಆಗಿ ಎಂಟ್ರಿ ಕೊಟ್ಟು ನಕ್ಷತ್ರಾ ಜೀವ ತೆಗೆಯುವವಂತಹ ಕಾಟ ಕೊಟ್ಟು, ಬಳಿಕ ತಪ್ಪನ್ನು ಅರಿತು, ಸದ್ಯ ಮೆಚ್ಚಿನ ಮನೆಮಗನಾಗಿ ನಟಿಸುತ್ತಿರುವ ಮೌರ್ಯ ಪಾತ್ರಧಾರಿ ಅಭಿಷೇಕ್ ಶ್ರೀಕಾಂತ್.
Image credits: Instagram
ಅಭಿಷೇಕ್ ಶ್ರೀಕಾಂತ್
ನಟನಾಗಿ ನಮಗೆಲ್ಲಾ ಪರಿಚಯ ಇರೋ ಅಭಿಷೇಕ್ ನಟನೂ ಹೌದು, ಡ್ಯಾನ್ಸರ್ ಹೌದು, ಬೈಕರ್ ಹೌದು, ಅದೆಲ್ಲಾಕ್ಕಿಂತ ಮುಖ್ಯವಾಗಿ ಫೋಟೋಗ್ರಾಫರ್ ಹೌದು.
Image credits: Instagram
ಫೋಟೋಗ್ರಾಫರ್ ಅಭಿಷೇಕ್
ಫ್ರೊಫೆಷನಲ್ ಫೋಟೋಗ್ರಾಫರ್ ಆಗಿರುವ ಅಭಿಷೇಕ್ ವೈಲ್ಡ್ ಲೈಫ್ ಫೋಟೋಗ್ರಾಫಿ ಅದ್ಭುತವಾಗಿದೆ. ನೀವು abhishek_shrikanth_photography ಪೇಜ್ ನಲ್ಲಿ ಇವರ ಫೋಟೋಗಳನ್ನು ನೋಡಬಹುದು.
Image credits: Instagram
ಆರ್ಟಿಸ್ಟ್ ಕೂಡ ಹೌದು
ನಟ ಹೌದು, ಆದರೆ ಇವರೊಬ್ಬ ಅದ್ಭುತ ಚಿತ್ರಗಾರನೂ ಹೌದು, ಇವರ ಇನ್ಸ್ಟಾಗ್ರಾಂ ಸ್ಟೋರೀಸ್ ನೋಡಿದ್ರೆ, ಅಲ್ಲಿ ಇವರ ಕೈಚಳಕದಲ್ಲಿ ಮೂಡಿ ಬಂದ ಅದ್ಭುತ ಚಿತ್ರಗಳನ್ನು ಕಾಣಬಹುದು.
Image credits: Instagram
ಸೀರಿಯಲ್ - ಸಿನಿಮಾ
ಲಕ್ಷಣ ಸೀರಿಯಲ್ ಗೂ ಮುನ್ನ ಇವರು ಯಜಮಾನಿ ಸೀರಿಯಲ್ ನಲ್ಲಿ ನಟಿಸಿದ್ದರು. ಅಲ್ಲದೇ ಕೆಟಿಎಂ ಮತ್ತು ತಲ್ವಾರ್ ಪೇಟೆ ಸಿನಿಮಾದಲ್ಲೂ ಅಭಿಷೇಕ್ ಬಣ್ಣ ಹಚ್ಚಿದ್ದಾರೆ.
Image credits: Instagram
ಫಿಟ್ನೆಸ್
ಅಭಿಷೇಕ್ ಅವರನ್ನ ನೋಡಿದ್ರೇನೆ ಗೊತ್ತಾಗುತ್ತೆ ಇವರು ಫಿಟ್ನೆಸ್ ಕಡೆಗೆ ಎಷ್ಟೊಂದು ಗಮನ ಹರಿಸ್ತಾರೆ ಅಂತ. ತಮ್ಮ ಸೋಶಿಯಲ್ ಮೀಡಿಯಾ ಮೂಲಕವೂ ಇವರು ಜಿಮ್ ವೀಡಿಯೋ ಹಂಚಿಕೊಳ್ಳುತ್ತಾರೆ.
Image credits: Instagram
ಬೈಕರ್ -ಸೋಲೋ ರೈಡರ್
ಅಭಿಷೇಕ್ ಗೆ ಬೈಕ್ ಅಂದ್ರೆ ತುಂಬಾನೆ ಕ್ರೇಜ್, ಜೊತೆಗೆ ಸೋಲೋ ರೈಡ್ ಮತ್ತು ಸೋಲೋ ಟ್ರಾವೆಲ್ ಮಾಡೋದು ಅಂದ್ರೂನು ಇವರಿಗಿಷ್ಟ.