ಕನ್ನದ ಕಿರುತೆರೆ ನಟಿ ಕಾವ್ಯಾ ಗೌಡ ಮಗಳು ಸಿಯಾ ಜೊತೆಗಿನ ಮೊದಲ ವಿದೇಶ ಪ್ರಯಾಣ ಎಂಜಾಯ್ ಮಾಡುತ್ತಿದ್ದಾರೆ.
tv-talk Feb 08 2025
Author: Pavna Das Image Credits:instagram
Kannada
ಪ್ಯಾರಿಸ್ ನಲ್ಲಿ ಕಾವ್ಯಾ
ನಟಿ ಕಾವ್ಯಾ ಗೌಡ ಪತಿ ಸೋಮಶೇಖರ್ ಹಾಗೂ ಮಗಳು ಸಿಯಾ ಜೊತೆಗೆ ಪ್ಯಾರಿಸ್ ತೆರಳಿದ್ದು, ಅಲ್ಲಿಂದ ಮುದ್ದಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Image credits: Instagram
Kannada
ಡಿಸ್ನಿ ಲ್ಯಾಂಡ್
ಕಾವ್ಯಾ ಗೌಡ ಪ್ಯಾರಿಸ್ ನಲ್ಲಿ ಮೊದಲಿಗೆ ಡಿಸ್ನಿ ಲ್ಯಾಂಡ್ ಗೆ ತೆರಳಿದ್ದರು, ಅಲ್ಲಿ ಮಗಳ ಜೊತೆ ಸಖತ್ ಆಗಿ ಎಂಜಾಯ್ ಮಾಡಿದ್ದರು.
Image credits: Instagram
Kannada
ಐಫೆಲ್ ಟವರ್ ಮುಂದೆ ಸಿಯಾ
ಇದೀಗ ಪ್ಯಾರಿಸ್ ನ ಜನಪ್ರಿಯ ಐಫೆಲ್ ಟವರ್ ಮುಂದೆ ಪತಿ ಹಾಗೂ ಮಗಳ ಜೊತೆಗೆ ವಿವಿಧ ರೀತಿಯ ಫೋಟೊ ಶೂಟ್ ಮಾಡಿ, ಕಾವ್ಯಾ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
Image credits: Instagram
Kannada
ಸಿಯಾ ಇನ್ ಪ್ಯಾರಿಸ್
ಪ್ಯಾರಿಸ್ ನ ಸುಂದರ ಫೋಟೊಗಳನ್ನು ಶೇರ್ ಮಾಡಿರುವ ಕಾವ್ಯಾ ಸಿಯಾ ಇನ್ ಪ್ಯಾರಿಸ್ ಎನ್ನುತ್ತಾ, ಸುಂದರವಾದ ಮೆಮೊರಿ ನೀಡಿದ್ದಕ್ಕೆ ಥ್ಯಾಂಕ್ಯೂ ಎಂದಿದ್ದಾರೆ.
Image credits: Instagram
Kannada
ಮಗಳಿಗೆ ಒಂದು ವರ್ಷ
ಇದೇ ಜನವರಿ 26ರಂದು ಕಾವ್ಯಾ ಗೌಡ ತಮ್ಮ ಮಗಳ ಒಂದನೇ ವರ್ಷದ ಹುಟ್ಟುಹಬ್ಬವನ್ನು ಲಕ್ಸುರಿ ಹೊಟೇಲ್ ಒಂದರಲ್ಲಿ ಅದ್ಧೂರಿಯಾಗಿಯೇ ಆಚರಿಸಿಕೊಂಡಿದ್ದರು.
Image credits: Instagram
Kannada
ಸಿಯಾ ಮೊದಲ ವಿಮಾನ ಪಯಣ
ಇನ್ನು ಇದು ಸಿಯಾಳ ಮೊದಲ ವಿಮಾನ ಪಯಣ ಆಗಿದ್ದು, ಆ ಸುಂದರ ಕ್ಷಣಗಳನ್ನು ಸಹ ನಟಿ ಸೆರೆ ಹಿಡಿದಿದ್ದರು, ಜೊತೆಗೆ ಪ್ಯಾರಿಸ್ ನಲ್ಲೂ ಕೇಕ್ ಕತ್ತರಿಸಿ ಸಂಭ್ರಮಿಸಿದ್ದರು.
Image credits: Instagram
Kannada
ನಟನೆಯಿಂದ ದೂರ
ಕಾವ್ಯಾ ಗೌಡ ಕೊನೆಯದಾಗಿ ರಾಧಾ ರಮಣದಲ್ಲಿ ನಟಿಸಿದ್ದರು, ಕೆಲವು ಸೀರಿಯಲ್ ಗಳಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯಕ್ಕಂತೂ ನಟನೆಯಿಂದ ಸಂಪೂರ್ಣವಾಗಿ ದೂರ ಉಳಿದಿದ್ದಾರೆ.
Image credits: Instagram
Kannada
ಫ್ಯಾಮಿಲಿ ಜೊತೆಗೆ ಕಾವ್ಯಾ
ಕಾವ್ಯಾ ಸದ್ಯ ಪತಿ, ಮಗು ಹಾಗೂ ಸಂಸಾರದ ಕಡೆಗೆ ಸಂಪೂರ್ಣವಾಗಿ ಗಮನ ಹರಿಸಿದ್ದು, ಫ್ಯಾಮಿಲಿ ಜೊತೆ ಟೂರ್, ಕಾರ್ಯಕ್ರಮ ಎಂಜಾಯ್ ಮಾಡುತ್ತಾ ಹಾಯಾಗಿದ್ದಾರೆ.