Small Screen
ಕನ್ನಡ ಕಿರುತೆರೆಯ ಹೆಸರಾಂತ ನಟಿ ಹಾಗೂ ನಿರೂಪಕಿ ಅನುಪಮಾ ಗೌಡ ಹೊಸ ಫೋಟೊಶೂಟ್ ಮಾಡಿ, ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಕರ್ಲಿ ಬ್ಯೂಟಿ ಅನುಪಮಾ ತುಂಬಾನೆ ಸುಂದರವಾಗಿ ಕಾಣಿಸುತ್ತಿದ್ದು, ಹುಡುಗರಂತೂ ನಟಿಯ ಅಂದಕ್ಕೆ ಫಿದಾ ಆಗಿದ್ದಾರೆ. ನಿಮ್ಮಿಂದಲೇ ಸೀರೆಯ ಅಂದ ಹೆಚ್ಚಿತು ಅಂತಿದ್ದಾರೆ.
ಅನುಪಮಾ ಫೋಟೊಗಳಿಗೆ ಕಾಮೆಂಟ್, ಲೈಕ್ಸ್ ಸುರಿಮಳೆ ಬಂದಿದ್ದು, ನೀನು ಸುಂದರಿ ಸಂದೇಹವೇ ಇಲ್ಲ, ಗೊಂಬೆ, ಬ್ಯೂಟಿ, ಯಾಕಿಷ್ಟು ಸುಂದರಿ ನೀವು ಎಂದು ಪ್ರಶ್ನೆಗಳನ್ನೂ ಕೂಡ ಕೇಳಿದ್ದಾರೆ ಪಡ್ಡೆಗಳು.
ಮತ್ತೊಬ್ಬ ಅಭಿಮಾನಿ ಅನುಪಮಾ ಗೌಡ ಈ ಸೀರೆ ಲುಕ್ ನ್ನು ನೋಡಿ ತೆಲುಗಿನ ಫಿದಾ ಸಿನಿಮಾದಲ್ಲಿ ಸಾಯಿ ಪಲ್ಲವಿಯನ್ನು ನೋಡಿದ ಹಾಗಾಯಿತು ಎಂದು ಹೇಳಿದ್ದಾರೆ.
ಅನುಪಮಾ ಗೌಡ, ತಿಳಿ ಹಸಿರು ಬಣ್ಣದ ಸೀರೆ ಟಿಶ್ಯೂ ಸಿಲ್ಕ್ ಸೀರೆ ಧರಿಸಿದ್ದು, ಒಂದು ಸಣ್ಣ ಅಭರವೂ ಧರಿಸಿದೇ, ನಗುವಿನ ಆಭರಣ ಧರಿಸಿ ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ.
ಸದ್ಯ ಅನುಪಮಾ ಕಲರ್ಸ್ ಕನ್ನಡದಲ್ಲಿ ಈ ವಾರವಷ್ಟೇ ಆರಂಭವಾದ ಬಾಯ್ಸ್ Vs ಗರ್ಲ್ಸ್ ರಿಯಾಲಿಟಿ ಶೋ ಹೋಸ್ಟ್ ಮಾಡುತ್ತಿದ್ದಾರೆ. ಇದು ಸಖತ್ ಮನರಂಜನೆ ನೀಡುವ ಕಾರ್ಯಕ್ರಮವಾಗಿದೆ.
ಅನುಪಮಾ ಗೌಡ ಅಕ್ಕ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟು, ಬಳಿಕ ನಿರೂಪಕಿಯಾಗಿ ಜನಪ್ರಿಯತೆ ಪಡೆದು, ಒಂದಷ್ಟು ಸಿನಿಮಾಗಳಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ಮಿಂಚಿದ್ದಾರೆ.
ಅನುಪಮಾ ಗೌಡ ಸಿನಿಮಾಗಳಲ್ಲಿ ನಟಿಸಿದ್ದು ಕಡಿಮೆಯೇ, ಅದರೂ ಅದ್ಭುತವಾದ ಪಾತ್ರಗಳಲ್ಲೇ ನಟಿಸಿದ್ದಾರೆ. ತ್ರಯಂಬಕಂ ಸಿನಿಮಾದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ರಾಜ್ಯ ಪಶಸ್ತಿ ಬಂದಿದೆ.