ಕನ್ನಡ ಕಿರುತೆರೆಯಲ್ಲಿ ಗೀತಾ ಸೀರಿಯಲ್ ಹಾಗೂ ಬಿಗ್ ಬಾಸ್ ಮೂಲಕ ಜನಪ್ರಿಯತೆ ಗಳಿಸಿದ ನಟಿ.
ಕಲರ್ಸ್ ಕನ್ನಡದ ಗೀತಾ ಧಾರಾವಾಹಿಯಲ್ಲಿ ಮುಖ್ಯಪಾತ್ರಕ್ಕೆ ಬಣ್ಣ ಹಚ್ಚುವ ಮೂಲಕ ಕನ್ನಡಿಗರಿಗೆ ಪರಿಚಿತರಾದರು.
ಬಿಗ್ ಬಾಸ್ ಸೀಸನ್ 11 ರಲ್ಲಿ ಸ್ಪರ್ಧಿಸುವ ಮೂಲಕ ಮತ್ತಷ್ಟು ಜನಪ್ರಿಯತೆ ಗಳಿಸಿದ ಭವ್ಯಾ ಗೌಡ.
ಝೀ ಕನ್ನಡದಲ್ಲಿ ಇನ್ನೇನು ಪ್ರಸಾರವಾಗಬೇಕಿದ್ದ ಕರ್ಣ ಸೀರಿಯಲ್ ಗೆ ನಾಯಕಿಯಾಗಿ ಆಯ್ಕೆ ಆಗುವ ಮೂಲಕ ಸದ್ದು ಮಾಡಿದ್ದರು.
ಕನ್ನಡತಿ ಖ್ಯಾತಿಯ ಕಿರಣ್ ರಾಜ್ ಗೆ ಜೋಡಿಯಾಗಿ ಭವ್ಯಾ ಗೌಡ ನಟಿಸಿದ್ದು, ಇವರಿಬ್ಬರ ಪ್ರೊಮೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಇನ್ನೇನು ಕರ್ಣ ಸೀರಿಯಲ್ ಪ್ರಸಾರವಾಗಬೇಕು ಎನ್ನುವಾಗಲೇ ಕಲರ್ಸ್ ವಾಹಿನಿ, ಭವ್ಯಾ ಅವರಿಗೆ ಕಾಂಟ್ರಾಕ್ಟ್ ಮುಗಿಯದೆ ಬೇರೆ ಧಾರಾವಾಹಿಯಲ್ಲಿ ನಟಿಸಿದ್ದಕ್ಕೆ ತಡೆ ನೀಡಿತು.
ಭವ್ಯಾ ಕಾರಣದಿಂದಾಗಿ ಸೀರಿಯಲ್ ಮುಂದೂಡಲಾಯಿತು. ಮುಂದೆ ಸೀರಿಯಲ್ ಯಾವಾಗ ಪ್ರಸಾರ ಆಗುತ್ತದೆ ಎನ್ನುವ ಮಾಹಿತಿ ಬಹಿರಂಗವಾಗಿಲ್ಲ.
ಭವ್ಯಾ ಗೌಡ ಕಲರ್ಸ್ ವಾಹಿನಿಗೆ ತಾನು ಕೋರ್ಟ್ ಮೂಲಕ ಉತ್ತರ ಕೊಡುವುದಾಗಿ ಹೇಳಿದ್ದರು.
ವಿವಾದದ ಬಳಿಕ ಭವ್ಯಾ ಗೌಡ ಸೋಶಿಯಲ್ ಮೀಡಿಯಾದಿಂದ ನಾಪತ್ತೆಯಾಗಿದ್ದರು. ಇದೀಗ ಮತ್ತೆ ಆಕ್ಟಿವ್ ಆಗಿದ್ದಾರೆ ಬೆಡಗಿ.
ಭವ್ಯಾ ಗೌಡ ತಮ್ಮ ಇನ್’ಸ್ಟಾಗ್ರಾಂನಲ್ಲಿ ಹೊಸ ಫೋಟೊಗಳನ್ನು ಶೇರ್ ಮಾಡಿದ್ದು, ಭವ್ಯಾಳನ್ನು ಕಂಡು ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
ಬ್ಲ್ಯಾಕ್ ಬಣ್ಣದ ಆಫ್ ಶೋಲ್ಡರ್ ಶಾರ್ಟ್ ಡ್ರೆಸ್ಸಲ್ಲಿ ಭವ್ಯಾ ಗೌಡ, ಸಿಕ್ಕಾಪಟ್ಟೆ ಕ್ಯೂಟ್ ಆಗಿ ಕಾಣಿಸ್ತಿದ್ದಾರೆ. ಫ್ಯಾನ್ಸ್ ನಟಿಯ ಲುಕ್ ಗೆ ಮೆಚ್ಚುಗೆ ಸೂಚಿಸಿದ್ದಾರೆ.
ಸ್ಟೈಲಿಶ್ ಅವತಾರದಲ್ಲಿ ನಿರೂಪಕಿ ಜಾಹ್ನವಿ…. ರಾಕ್ ಸ್ಟಾರ್ ಲುಕ್ ಸೂಪರ್
ಈ ಕನ್ನಡ ಧಾರಾವಾಹಿ ನಟಿಯರ Real Age ಎಷ್ಟು? ನೀವು ಊಹಿಸಿದ್ದೆಲ್ಲ ನಿಜವಲ್ಲ!
ಮೈಸೂರಿನ ಮೊಸರನ್ನ ಜೊತೆ ಶುಭಾಂಶು ಬಾಹ್ಯಾಕಾಶಕ್ಕೆ!
ರೆಡ್ ಗೌನಲ್ಲಿ ಲಕ ಲಕ ಮಿಂಚುತ್ತಿದ್ದಾರೆ ಬಿಗ್ ಬಾಸ್ ಮನೆಮಗಳು ಐಶ್ವರ್ಯ ಸಿಂಧೋಗಿ