Small Screen

ಆರವ್ ಸೂರ್ಯ

ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಜೇನು ಗೂಡು ಸೀರಿಯಲ್ ನ ನಾಯಕ ಆರವ್ ಸೂರ್ಯ (Arav Surya), ತಂದೆಯಾದ ಸಂಭ್ರಮದಲ್ಲಿದ್ದಾರೆ. 

Image credits: social media

ಯಂಶ್ ಅರಸು

ಆರವ್ ತಮ್ಮ ಮಗನಿಗೆ ಯಂಶ್ ಅರಸು ಎಂದು ನಾಮಕರಣ ಮಾಡಿದ್ದು, ಬಂಧು ಬಾಂಧವರೊಡನೆ ಅದ್ಧೂರಿ ಸಮಾರಂಭ ಕೂಡ ಏರ್ಪಡಿಸಿದ್ದರು. 
 

Image credits: social media

ವೈಷ್ಣವಿ

ನಟ ಆರವ್ ಸೂರ್ಯ ತಮ್ಮ ಬಹುಕಾಲದ ಗೆಳತಿ ವೈಷ್ಣವಿ (Vaishnavi) ಜೊತೆ ಡಿಸೆಂಬರ್ 12, 2021ರಂದು ತಿರುಪತಿಯಲ್ಲಿ (Tirupati) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 

Image credits: social media

ಮುದ್ದು ಸಂಸಾರ

ಮದುವೆಯಾದ ವರ್ಷದೊಳಗೆ ತಂದೆಯಾಗಿದ್ದ ಆರವ್, ಕಳೆದ ಡಿಸೆಂಬರ್ ನಲ್ಲಿ ತಂದೆಯಾದ ಸಂಭ್ರಮವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. 

Image credits: social media

ಕಿರುತೆರೆಯಲ್ಲಿ ಬ್ಯುಸಿ

ಕರಿಯರ್ ಲೈಫ್ ಬಗ್ಗೆ ಮಾತನಾಡೋದಾದ್ರೆ ಆರವ್ ಸೂರ್ಯ ಕಳೆದ ಹಲವಾರು ವರ್ಷಗಳಿಂದ ಕಿರುತೆರೆಯಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಹಲವಾರು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. 

Image credits: social media

ಸೀರಿಯಲ್

ಸದ್ಯ ಜೇನು ಗೂಡು (Jenugudu serial) ಸೀರಿಯಲ್ ನಲ್ಲಿ ನಟಿಸುತ್ತಿರುವ ಆರವ್ ಈ ಹಿಂದೆ ಮರಳಿ ಬಂದಳು ಸೀತೆ, ಯಾರಿವಳು, ವೀಣಾಪಾಣಿ ಮೊದಲಾದ ಸೀರಿಯಲ್ ನಲ್ಲಿ ನಟಿಸಿದ್ದಾರೆ.

Image credits: social media

ನೆಚ್ಚಿನ ನಟ

ಅವಿಭಕ್ತ ಕುಟುಂಬದ ಕಥೆ ಹೊಂದಿರುವ ಜೇನು ಗೂಡು ಸೀರಿಯಲ್ ನಲ್ಲಿ ಆರವ್, ಮುದ್ದು ಪೆದ್ದಾದ ಶಶಾಂಕ್ ಆಗಿ ನಟಿಸುತ್ತಿದ್ದು, ಈ ಸೀರಿಯಲ್ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಹ ಪಡೆದುಕೊಂಡಿದ್ದಾರೆ. 
 

Image credits: social media
Find Next One