Small Screen
ನಟಿಸಿದ್ದು, ಅಗ್ನಿ ಸಾಕ್ಷಿ (Agni Sakshi) ಧಾರಾವಾಹಿಯಲ್ಲಿ ಮಾತ್ರವಾದ್ರೂ, ಇಂದಿಗೂ ಜನರು ಹೆಚ್ಚು ಇಷ್ಟ ಪಡುತ್ತಿರುವ ಕನ್ನಡ ಕಿರುತೆರೆ ನಟಿಯರಲ್ಲಿ ವೈಷ್ಣವಿ ಗೌಡ ಒಬ್ಬರು.
ಸದ್ಯ ನಟಿ ಬೇಸರದಲ್ಲಿದ್ದಾರೆ. ತಮ್ಮ ಪ್ರೀತಿಯ ಶ್ವಾನ ಬಂಟಿಯ (Dog bunty) ಸಾವಿನಿಂದ ನಟಿ ನೊಂದಿದ್ದಾರೆ.
ಪ್ರಾಣಿ ಪ್ರಿಯೆಯಾಗಿರುವ ವೈಷ್ಣವಿ ಗೌಡ (Vaishnavi Gowda), ತಮ್ಮ ಮನೆಯಲ್ಲೂ ಮುದ್ದಾದ ಪಮೋರಿಯನ್ ನಾಯಿ ಸಾಕಿದ್ದು, ಅದಕ್ಕೆ ಬಂಟಿ ಎಂದು ಹೆಸರಿಟ್ಟಿದ್ದರು.
ಕೆಲದಿನಗಳ ಹಿಂದಷ್ಟೆ Many moods of Bunty ಎಂದು ಸೋಶಿಯಲ್ ಮೀಡಿಯಾದಲ್ಲಿ ಹಲವು ಫೋಟೋಗಳನ್ನು ಶೇರ್ ಮಾಡಿದ್ದರು.
ಬಂಟಿ ಜೊತೆ ವಿವಿಧ ರೀತಿಯಲ್ಲಿ ಫೋಸ್ ಕೊಡುತ್ತಾ ನಟಿ ಫೋಟೋಸ್ ತೆಗೆದುಕೊಂಡಿದ್ದು, ಅವರು ಅದರೊಟ್ಟಿಗೆ ಎಷ್ಟು ಅನ್ಯೋನ್ಯವಾಗಿದ್ದರು ಅನ್ನೋದನ್ನು ತೋರಿಸಿತ್ತು.
ಇದೀಗ ಪ್ರೀತಿಯ ನಾಯಿ ಬಂಟಿ ಸಾವನ್ನಪ್ಪಿದ್ದು, ಆ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡು, ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ತಮ್ಮ ಪ್ರೀತಿಯ ಬಂಟಿ ಜೊತೆ ಎರಡು ಮುದ್ದಾದ ಫೋಟೊ ಹಂಚಿ ಕೊಂಡು Miss you my baby brother, U will always remain special ಎಂದು ಬರೆದುಕೊಂಡಿದ್ದಾರೆ.
ಇವರು ಹಂಚಿಕೊಂಡ ಫೋಟೋಗೆ ಹರ್ಷಿಕಾ ಪೂಣಚ್ಚ, ಶುಭಾ ಪೂಂಜಾ ಸೇರಿ ಹಲವು ಅಭಿಮಾನಿಗಳು ಬೇಸರ ಹಂಚಿಕೊಂಡಿದ್ದಾರೆ.
‘ಲಕ್ಷ್ಮೀ ಬಾರಮ್ಮ’ ಸೀರಿಯಲ್‌ನ ಅಹಂಕಾರಿ ವಿಧಿ ರಿಯಲ್ ಲೈಫಲ್ಲಿ ದಂತ ವೈದ್ಯೆ
Mothers Day Special: ಮಮತೆಯ ತಾಯಿಯೊಂದಿಗೆ ನೆಚ್ಚಿನ ತಾರೆಯರು
ಮಾಲ್ಡೀವ್ಸ್: ಮಗನ ಜೊತೆ ಶ್ವೇತ, ಸಂತೂರ್ ಮಮ್ಮಿ ಎಂದ ನೆಟ್ಟಿಗರು
ಬಿಕಿನಿ ಧರಿಸಿ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡ ಗೀತಾ ಸೀರಿಯಲ್ ವಿಲನ್