Travel

ವಿಶಿಷ್ಠ ದೇಗುಲಗಳು

ನಮ್ಮ ದೇಶದಲ್ಲಿ ಕೆಲವೊಂದು ದೇಗುಲಗಳಲ್ಲಿ ದೇವರಿಗೆ ವಿಚಿತ್ರ ರೀತಿಯ ನೈವೇದ್ಯವನ್ನು ಬಡಿಸಲಾಗುತ್ತೆ. ಈ ಬಗ್ಗೆ ಕೇಳಿದ್ರೆ ನಿಮಗೆ ಖಂಡಿತವಾಗಿಯೂ ಅಚ್ಚರಿಯಾಗುತ್ತೆ.

Image credits: our own

ಕೂಡಲ್, ಅಝ್ಗರ್ ಮಂದಿರ, ಮಧುರೈ (ತಮಿಳುನಾಡು)

ವಿಷ್ಣು ದೇವರ ಈ ದೇಗುಲದಲ್ಲಿ ದೇವರಿಗೆ ದೋಸೆಯನ್ನು ನೈವೇದ್ಯ ರೂಪದಲ್ಲಿ ನೀಡಲಾಗುತ್ತೆ. ಇದನ್ನೆ ಭಕ್ತರಿಗೆ ಪ್ರಸಾದವಾಗಿ ನೀಡಲಾಗುತ್ತೆ.ದೋಸೆ ಮಾಡುವ ಸಮಯದಲ್ಲಿ ಶುದ್ಧತೆ ಕಾಪಾಡುತ್ತಾರೆ.

Image credits: our own

ವನದೇವಿ ಮಂದಿರ ವಿಲಾಸ್ ಪುರ್ (ಛತ್ತೀಸ್ ಗಢ)

ದೇವಿಯ ಈ ಮಂದಿರದಲ್ಲಿ ಕಲ್ಲನ್ನು ನೀಡಲಾಗುತ್ತೆ. ಇಲ್ಲಿ ದೇವರಿಗೆ ಹರಕೆ ಹೊತ್ತರೆ ಅದೇವರಿಗೆ ಐದು ಕಲ್ಲನ್ನು ಹರಕೆ ನೀಡಲಾಗುತ್ತೆ. ಇದರಿಂದ ದೇವಿ ಸಂತಸಗೊಂಡು ಕೋರಿಕೆ ಪೂರೈಸುತ್ತಾಳೆ ಎನ್ನಲಾಗುತ್ತೆ.

Image credits: our own

ಮುರುಗ ದೇವಸ್ಥಾನ, ಪಳನಿ (ತಮಿಳುನಾಡು)

ಮುರುಗನ ಈ ಸನ್ನಿಧಿಯಲ್ಲಿ ಬೆಲ್ಲ ಮತ್ತು ಸಕ್ಕರೆಯಿಂದ ಮಾಡಿದ ಕ್ಯಾಂಡಿ ಜಾಮ್ ನೈವೇದ್ಯ ನೀಡಲಾಗುತ್ತೆ. ಇದನ್ನು ಪಂಚಾಮೃತ ಎನ್ನಲಾಗುತ್ತದೆ. ಮಂದಿರದ ಬಳಿ ಇರುವ ಪ್ಲಾಂಟ್ ನಲ್ಲಿ ಈ ನೈವೇದ್ಯ ತಯಾರಾಗುತ್ತದೆ. 

Image credits: our own

ಕಾಳಭೈರವ ಮಂದಿರ, ಉಜ್ಜೈನಿ

ಇಲ್ಲಿ ಭಗವಾನ್ ಕಾಳ ಭೈರವನಿಗೆ ಸಾರಾಯಿಯ ನೈವೇದ್ಯ ನೀಡಲಾಗುತ್ತೆ. ಭೈರವನ ಪ್ರತಿಮೆಯ ಬಾಯಿಯ ಮುಂದೆ ಪಾತ್ರೆಯಲ್ಲಿ ಮದ್ಯ ಇಟ್ಟ ಕೂಡಲೇ ಅದು ಖಾಲಿಯಾಗುತ್ತೆ. ಈ ಚಮತ್ಕಾರವನ್ನು ನೋಡಲು ದೂರ ದೂರದಿಂದ ಜನರು ಬರುತ್ತಾರೆ. 
 

Image credits: our own

ಚೈನೀಸ್ ಕಾಳಿ ಮಂದಿರ, ಕೋಲ್ಕತ್ತಾ

ಕಾಳಿ ಮಾತೆಯ ಈ ಮಂದಿರದಲ್ಲಿ ಚೌಮೀನ್ ಮತ್ತು ನೂಡಲ್ಸ್ ನ್ನು ದೇವಿಗೆ ಅರ್ಪಿಸಲಾಗುತ್ತೆ. ಇಲ್ಲಿ ಚೈನೀಸ್ ಫುಡ್ ದೇವರಿಗೆ ನೀಡೋದರಿಂದ ಈ ದೇಗುಲವನ್ನು ಚೈನೀಸ್ ಕಾಳಿ ಮಂದಿರ ಎನ್ನಲಾಗುತ್ತೆ.

Image credits: our own

ಜಯ ದುರ್ಗ ಪೀಠಂ, ಚೆನ್ನೈ (ತಮಿಳುನಾಡು)

ದೇವಿಯ ಈ ಮಂದಿರದಲ್ಲಿ ಬ್ರೌನಿ, ಬರ್ಗರ್ ಮತ್ತು ಸ್ಯಾಂಡ್ ವಿಚ್ ನೀಡಲಾಗುತ್ತೆ. ವಿಶೇಷತೆ ಏನು ಅಂದ್ರೆ ಇಲ್ಲಿನ ಪ್ರಸಾದ FSSAI ನಿಂದ ಪ್ರಮಾಣೀಕೃತವಾಗಿರುತ್ತೆ. ವಿದೇಶದಿಂದಲೂ ಭಕ್ತರು ಇಲ್ಲಿ ಬರುತ್ತಾರೆ. 
 

Image credits: unsplash
Find Next One