Travel

ಭೂಲೋಕದ ಸ್ವರ್ಗ

ಕೇರಳ ತನ್ನ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಅದರಲ್ಲೂ ಮಳೆಗಾಲದಲ್ಲಿ ಕೇರಳದ ಸೊಬಗು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ಇಲ್ಲಿನ ಪ್ರಕೃತಿ ರಮಣೀಯತೆ ಎಂಥವರನ್ನೂ ಬೆರಗುಗೊಳಿಸುತ್ತೆ.

Image credits: Getty

ಬ್ಯಾಕ್‌ವಾಟರ್ಸ್‌

ಮಳೆಗಾಲದಲ್ಲಿ ನೀವು ಕೇರಳ ರಾಜ್ಯಕ್ಕೆ ವಿಸಿಟ್ ಮಾಡೋ ಪ್ಲಾನ್ ಮಾಡಿದ್ರೆ ಬ್ಯಾಕ್‌ವಾಟರ್ಸ್‌ ಸೌಂದರ್ಯ ಸವಿಯಬಹುದು. ಮಳೆಗಾಲದಲ್ಲಿ ಪರಿಸರ ಹಚ್ಚ ಹಸಿರಿನಿಂದ ತುಂಬಿರುತ್ತದೆ. 

Image credits: Getty

ಆರ್ಯುವೇದ

ಮಳೆಗಾಲದ ವಾತಾವರಣ ಆರ್ಯುವೇದ ಚಿಕಿತ್ಸೆ ಪಡೆದುಕೊಳ್ಳಲು ಅತ್ಯುತ್ತಮವಾಗಿದೆ. ಈ ತಂಪಾದ ವಾತಾವರಣ ದೇಹ ಮೂಲಿಕೆಗಳ ಶಕ್ತಿಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲು ನೆರವಾಗುತ್ತದೆ.
 

Image credits: Getty

ಸ್ನೇಕ್‌ ಬೋಟ್ ರೇಸ್

ಓಣಂ ಹಬ್ಬದ ಸಂದರ್ಭದಲ್ಲಿಯೇ ಜಗತ್ತಿನ ಅತೀ ಪ್ರಸಿದ್ಧವಾದ ಸ್ನೇಕ್ ಬೋಟ್ ರೇಸ್ ಇಲ್ಲಿ ನಡೆಯುತ್ತದೆ. ಆಲಪ್ಪುಳ ಬ್ಯಾಕ್‌ ವಾಟರ್‌ನಲ್ಲಿ ನಡೆಯುವ ಸ್ಪರ್ಧೆಯನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಾರೆ.

Image credits: Getty

ವಾಟರ್‌ಫಾಲ್ಸ್‌

ದೇವರ ನಾಡಿನಲ್ಲಿ ಹಲವಾರು ಸುಂದರ ಜಲಪಾತಗಳಿವೆ. ಮಳೆಗಾಲದಲ್ಲಿ ಇವು ತುಂಬಿ ಧುಮ್ಮಿಕ್ಕಿ ಹರಿಯುತ್ತವೆ. ತ್ರಿಶ್ಯೂರ್‌ನ ಅತಿರಪಳ್ಳಿ ಫಾಲ್ಸ್, ಮುನ್ನಾರ್‌ನ ಅಟ್ಟುಕಾಡ್ ಫಾಲ್ಸ್ ನೋಡಲು ಕಣ್ಣಿಗೆ ಮನಮೋಹಕವಾಗಿರುತ್ತದೆ.
 

Image credits: Getty

ಓಣಂಸದ್ಯ

ಕೇರಳದ ಪ್ರಮುಖ ಹಬ್ಬಗಳಲ್ಲಿ ಓಣಂ ಸಹ ಒಂದಾಗಿದೆ. ಪೂಕಳಂ, ತಿರುವಾದಿರ ಮೊದಲಾದವುಗಳನ್ನು ಒಳಗೊಂಡ ದಿನವನ್ನು ಜನರು ಸಂಭ್ರಮದಿಂದ ಆಚರಿಸುತ್ತಾರೆ. ಅದರಲ್ಲೂ ಕೇರಳ ವಿಶಿಷ್ಟ ಆಹಾರ ಓಣಂ ಸದ್ಯ ಎಲ್ಲರ ನೆಚ್ಚಿನದ್ದಾಗಿದೆ.

Image credits: Getty

ಗ್ರೀನ್ ಹಿಲ್ಸ್‌

ಕೇರಳದ ಸುಂದರವಾದ ಹಿಲ್‌ ಸ್ಟೇಷನ್ ಎಂಥವರ ಮನಸ್ಸನ್ನೂ ಸೆಳೆಯುತ್ತದೆ. ಮುನ್ನಾರ್, ವಾಗಮೊನ್‌, ಮಲಯುಟ್ಟೋರ್, ಕಲ್ಪೆಟ್ಟಾ, ವಯನಾಡಿನಲ್ಲಿ ಸುಂದರವಾದ ಗ್ರೀನ್‌ಹಿಲ್ಸ್ ಮನಸೂರೆಗೊಳ್ಳುವಂತಿದೆ.

Image credits: Getty
Find Next One