Travel
ಬೆಂಗಳೂರಿನ ಸಮೀಪದಲ್ಲಿರುವ ಅತ್ಯಂತ ಸುಂದರವಾದ ಗಿರಿಧಾಮಗಳಲ್ಲಿ ನಂದಿ ಬೆಟ್ಟವೂ ಒಂದು. ಈ ಸ್ಥಳವು ಸಮುದ್ರದಿಂದ 4800 ಅಡಿ ಎತ್ತರದಲ್ಲಿದೆ. ಹಸಿರು ಮತ್ತು ಸುಂದರ ನೋಟಕ್ಕೆ ಹೆಸರುವಾಸಿಯಾಗಿದೆ.
ಬೆಂಗಳೂರಿನಿಂದ 50 ಕಿ.ಮೀ ದೂರವಿರುವ ರಾಮನಗರ ಬೆಟ್ಟ ರಾಕ್ ಕ್ಲೈಬಿಂಗ್‌ಗೆ ಹೆಸರುವಾಸಿಯಾಗಿದೆ. ಬಾಲಿವುಡ್‌ನ ಶೋಲೆ ಚಿತ್ರದ ಶೂಟಿಂಗ್‌ನ್ನು ಇಲ್ಲಿ ನಡೆಸಲಾಗಿತ್ತು.
ಬೆಂಗಳೂರಿನಿಂದ 22 ಕಿ.ಮೀ ದೂರದಲ್ಲಿರುವ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಫ್ಯಾಮಿಲಿ, ಫ್ರೆಂಡ್ ಜೊತೆ ಸಮಯ ಕಳೆಯಲು ಸೂಕ್ತ ಜಾಗ. ಇಲ್ಲಿ ಬಟರ್‌ಫ್ಲೈ ಗಾರ್ಡನ್ ಮತ್ತು ಝೂ ಸಹ ಇದೆ.
ಬೆಂಗಳೂರಿನಿಂದ 50 ಕಿ.ಮೀ ದೂರವಿರುವ ಸಾವನದುರ್ಗ ಏಷ್ಯಾದ ಅತಿದೊಡ್ಡ ಏಕಶಿಲಾ ಬೆಟ್ಟವಾಗಿದೆ. ವೀಕೆಂಡ್‌ನಲ್ಲಿ ಟ್ರಕ್ಕಿಂಗ್ ಹೋಗಲು ಹೇಳಿ ಮಾಡಿಸಿದ ಜಾಗ.
ಬೆಂಗಳೂರಿನಿಂದ 53 ಕಿಮೀ ದೂರದಲ್ಲಿರುವ ಜನಪದ ಲೋಕ ಎಂಬ ಸ್ಥಳ ಜನಪದವನ್ನು ಉಳಿಸಿ, ಬೆಳೆಸಲು ನಿರ್ಮಿಸಿದ ತಾಣವಾಗಿದೆ. ಈ ಸ್ಥಳ ಕರ್ನಾಟಕದ ಗ್ರಾಮೀಣ ಬದುಕಿನ ಚಿತ್ರಣ ಮುಂದಿಡುತ್ತದೆ.
ಭಾರತೀಯ ಸಾಂಪ್ರದಾಯಿಕ ನೃತ್ಯಗಳನ್ನು ಕಲಿಸುವ ಸ್ಕೂಲ್ ನೃತ್ಯಗ್ರಾಮ. ಇದು ಬೆಂಗಳೂರು ನಗರದಿಂದ 35 ಕಿ.ಮೀ ದೂರದಲ್ಲಿದೆ. ಕಟ್ಟಡದ ಆರ್ಕಿಟೆಕ್ಚರ್ ವಿಶಿಷ್ಟವಾಗಿದ್ದು ಎಲ್ಲರ ಗಮನ ಸೆಳೆಯುತ್ತದೆ.