Travel
ಕರ್ನಾಟಕದಲ್ಲಿ ಸೇಫ್ ಅಲ್ಲದ ಜಾಗಗಳು ಇವು, ಹೋಗೋ ಮುಂಚೆ ಯೋಚ್ನೆ ಮಾಡಿ
ಪಶ್ವಿಮ ಘಟ್ಟದ ಕೆಲವು ಭಾಗಗಳು ಮತ್ತು ಚಿಕ್ಕಮಗಳೂರು, ಶಿವಮೊಗ್ಗದಂತಹಾ ಈಶಾನ್ಯ ಪ್ರದೇಶಗಳಲ್ಲಿ ಅಲ್ಲಲ್ಲಿ ನಕ್ಸಲ್ ಚಟುವಟಿಕೆಯಿದೆ. ಹೀಗಾಗಿ ಅತ್ತ ಹೋಗುವಾಗ ಎಚ್ಚರಿಕೆಯಿಂದಿರಿ.
ಕರ್ನಾಟಕ ಹಾಗೂ ತಮಿಳುನಾಡು ಸಮೀಪವಿರುವ ಕೆಲ ಪ್ರದೇಶಗಳು ವಿವಾದಗಳು ಹಾಗೂ ಉದ್ವಿಗ್ನತೆಯ ಪರಿಸ್ಥಿತಿಯಿಂದ ತುಸು ಅಪಾಯಕಾರಿ ಸ್ಥಳಗಳಾಗಿವೆ.
ಉಡುಪಿ ಮತ್ತು ಮಂಗಳೂರಿನಂತಹಾ ಕರಾವಳಿ ಪ್ರದೇಶಗಳು ಮಳೆಗಾಲದಲ್ಲಿ ಚಂಡಮಾರುತದ ಅನುಭವವನ್ನು ಪಡೆಯುತ್ತದೆ. ಹೀಗಾಗಿ ಇಲ್ಲಿನ ಕಡಲತೀರಗಳು ಪ್ರಕ್ಷುಬ್ಧವಾಗಿರುತ್ತವೆ.
ಕರ್ನಾಟಕವು ತನ್ನ ಸುಂದರವಾದ ಕಾಡುಗಳಿಗೆ ಹೆಸರುವಾಸಿಯಾಗಿದ್ದರೂ ಇದಕ್ಕೆ ತಾಕಿದಂತಿರುವ ಕೆಲವು ರಸ್ತೆಗಳಲ್ಲಿ ಕಾಡುಪ್ರಾಣಿಗಳು ಸಂಚರಿಸುತ್ತವೆ. ಹೀಗಾಗಿ ರಸ್ತೆಯಲ್ಲಿ ನೀಡಿದ ಸೂಚನೆಯನ್ನು ಅನುಸರಿಸಿ ಪ್ರಯಾಣ ಮಾಡಬೇಕು.
ರಾಜ್ಯದ ಹಲವು ಜಿಲ್ಲೆಗಳಲ್ಲಿರುವ ಟ್ರಕ್ಕಿಂಗ್ ಜಾಗಗಳು ಹೆಚ್ಚು ಸುರಕ್ಷಿತವಾಗಿಲ್ಲ. ನಗರಗಳಿಂದ ದೂರವಿರುವ ಇಂಥಾ ಜಾಗ ಹಲವು ಕೆಟ್ಟ ಘಟನೆಗಳಿಗೆ ಸಾಕ್ಷಿಯಾಗಿದೆ. ಇಲ್ಲಿ ಮೊಬೈಲ್ ನೆಟ್‌ವರ್ಕ್ ಸಹ ಇರುವುದಿಲ್ಲ.
ನಗರದಿಂದ ಹೊರಗಿರುವ ಹಳ್ಳಿಗಳಿಗೆ ನಗರವಾಸಿಗಳು ವೀಕೆಂಡ್‌ನಲ್ಲಿ ಟ್ರಿಪ್ ಹೋಗುತ್ತಾರೆ. ಆದರೆ ಇವು ತುಂಬಾ ಅಪಾಯಕಾರಿಯಾದ ಜಾಗವಾಗಿದೆ. ರಸ್ತೆ ಸಂಪರ್ಕವಿಲ್ಲದೆ, ಸೀಮಿತ ಸೌಲಭ್ಯವನ್ನು ಹೊಂದಿರುವ ಕಾರಣ ಜಾಗರೂಕರಾಗಿರಬೇಕು.
ಬೆಂಗಳೂರಿನಂತಹಾ ನಗರಗಳಲ್ಲಿ ಯಾವಾಗಲೂ ಜನನಿಬಿಡ ಆಗಿರುವ ಮಾರ್ಕೆಟ್, ಕಮರ್ಷಿಯಲ್ ಸ್ಟ್ರೀಟ್, ಚಿಕ್ಕಪೇಟೆ ಮೊದಲಾದ ಜಾಗಗಳಲ್ಲಿ ಯಾವಾಗಲೂ ಪಿಕ್‌ಪಾಕೆಟ್, ಕಳ್ಳತನದ ಪ್ರಕರಣಗಳು ವರದಿಯಾಗುತ್ತಿರುತ್ತವೆ.