Travel
ಜೋಗ ಜಲಪಾತದ ಸೌಂದರ್ಯ ಎಂಥವರನ್ನೂ ಮೋಡಿಮಾಡುತ್ತದೆ. ವಿಶೇಷವಾಗಿ ಮಾನ್ಸೂನ್‌ನಲ್ಲಿ ಇಲ್ಲಿಯ ಸೊಬಗನ್ನು ವರ್ಣಿಸಲು ಪದಗಳು ಸಾಲದು. ಇದು ಕರ್ನಾಟಕದ ಅತ್ಯಂತ ಪ್ರಸಿದ್ಧವಾದ ಜಲಪಾತಗಳಲ್ಲಿ ಒಂದಾಗಿದೆ.
ಕೇರಳದ ತ್ರಿಶ್ಯೂರ್ ಜಿಲ್ಲೆಯಲ್ಲಿರುವ ಅತಿರಪಳ್ಳಿ ಫಾಲ್ಸ್ ಅತ್ಯಂತ ಮನೋಹರ ಜಲಪಾತಗಳಲ್ಲಿ ಒಂದಾಗಿದೆ. ದಟ್ಟ ಕಾಡಿನ ಮಧ್ಯೆಯಿರುವ ಈ ಜಲಪಾತದ ವೈಭವ ಎಂಥವರನ್ನೂ ರೋಮಾಂಚನಗೊಳಿಸುತ್ತದೆ.
ಉತ್ತರಾಖಂಡ್‌ನ ಮುಸ್ಸೋರಿ ಬಳಿಯಿರುವ ಕೆಂಪ್ಟಿ ಫಾಲ್ಸ್ ಪ್ರಸಿದ್ಧ ಪ್ರವಾಸಿತಾಣಗಳಲ್ಲಿ ಒಂದಾಗಿದೆ. ಇಲ್ಲಿ ಜಲಪಾತ ವಿಭಜನೆಗೊಂಡು ಪ್ರತ್ಯೇಕವಾಗಿ ಹರಿಯುತ್ತದೆ.
ಧರ್ಮಶಾಲಾದ ಮಕ್‌ಲಿಯೋಡ್ ಗಂಜ್ ಸಮೀಪವಿರುವ ಭಾಗ್ಸು ಜಲಪಾತ, ಹಸಿರು ಪರಿಸರದ ಮಧ್ಯೆಯಿರುವ ಸುಂದರವಾದ ತಾಣವಾಗಿದೆ.
ಚಿರಾಪುಂಜಿಯ ಸಮೀಪವಿರುವ ಈ ಫಾಲ್ಸ್ ಭೂಮಿಯಲ್ಲೇ ಅತ್ಯಂತ ಹೆಚ್ಚು ಒದ್ದೆಯಾಗಿರುವ ಸ್ಥಳವೆಂದು ಗುರುತಿಸಿಕೊಂಡಿದೆ. ಮೇಘಾಲಯದಲ್ಲಿರುವ ಈ ನೋಹ್‌ಕಲಿಕಾಲ್ ಫಾಲ್ಸ್ ಭಾರತದಲ್ಲೇ ಅತೀ ಉದ್ದದ ಜಲಪಾತವಾಗಿದೆ.
ಹಿಮಾಚಲ ಪ್ರದೇಶದ ಮನಾಲಿಯಲ್ಲಿರುವ ಜೋಗಿನಿ ಫಾಲ್ಸ್ ಕಣ್ಣಿಗೆ ಹಬ್ಬವನ್ನುಂಟು ಮಾಡುವ ಅತ್ಯಂತ ರಮಣೀಯ ಜಲಪಾತವಾಗಿದೆ. ಇದು ಹಿಮಾಲಯದ ಸೊಬಗನ್ನು ಸಹ ಕಣ್ತುಂಬಿಕೊಳ್ಳುವಂತೆ ಮಾಡುತ್ತದೆ.