ಟ್ರಾಫಿಕ್ ಇರಲ್ಲ, ಡ್ರೈವಿಂಗ್ ಟೆನ್ಷನ್‌ನಂತೂ ಇಲ್ವೆ ಇಲ್ಲ. ಮತ್ಯಾಕೆ ತಡ.. ಈ ವಾರಾಂತ್ಯದಲ್ಲಿ ಬೆಂಗಳೂರಿಗೆ ಸಮೀಪದಲ್ಲಿರುವ ಈ ಸುಂದರ ತಾಣಗಳಿಗೆ ಭೇಟಿ ನೀಡಿ ಆರಾಮವಾಗಿ ಕಾಲ ಕಳೆಯಿರಿ.
travel Apr 10 2026
Author: Ashwini HR Image Credits:Shutterstock
Kannada
ನಂದಿ ಬೆಟ್ಟ
ಬೆಂಗಳೂರಿನಿಂದ ಕೇವಲ 1.5 ಗಂಟೆ ದೂರದಲ್ಲಿದೆ. ಅದ್ಭುತ ಸೂರ್ಯೋದಯ ಮತ್ತು ತಂಪಾದ ಹವಾಮಾನಕ್ಕೆ ಜನಪ್ರಿಯ. ಮುಂಜಾನೆ ಬೇಗ ಹೋದರೆ ಆಕಾಶದಲ್ಲಿ ತೇಲುವ ಮೋಡಗಳ ಮಧ್ಯೆ ನೀವಿರಬಹುದು.
Image credits: Asianet News
Kannada
ರಾಮನಗರ
ಬೆಂಗಳೂರಿನಿಂದ ಸುಮಾರು 50 ಕಿ.ಮೀ. ದೂರದಲ್ಲಿದೆ. ಇಲ್ಲಿನ ಎತ್ತರದ ಕಲ್ಲಿನ ಬೆಟ್ಟಗಳು ಟ್ರೆಕ್ಕಿಂಗ್ ಮತ್ತು ಫೋಟೋಗ್ರಫಿಗೆ ಹೇಳಿ ಮಾಡಿಸಿದ ಜಾಗ. ಪ್ರಕೃತಿಯ ಶಾಂತತೆಯನ್ನು ಇಲ್ಲಿ ಅನುಭವಿಸಬಹುದು.
Image credits: our own
Kannada
ಸಕಲೇಶಪುರ
ಸುಮಾರು 220 ಕಿ.ಮೀ.ದೂರದಲ್ಲಿದ್ದು, ಹಚ್ಚ ಹಸಿರಿನ ಕಾಫಿ ತೋಟಗಳು, ಸುಂದರವಾದ ಮಂಜರಾಬಾದ್ ಕೋಟೆ ಮತ್ತು ಮಂಜಿನಿಂದ ಆವೃತವಾದ ಬೆಟ್ಟಗಳು ನಿಮ್ಮ ಮನಸೋಲಿಸುತ್ತವೆ.
Image credits: Getty
Kannada
ರೈಲು ಪ್ರಯಾಣ ಬೆಸ್ಟ್ ಆಯ್ಕೆ
ನೀವು ಸಕಲೇಶಪುರ ಅಥವಾ ರಾಮನಗರಕ್ಕೆ ಹೋಗುವುದಾದರೆ ಬೆಂಗಳೂರಿನಿಂದ ಹೊರಡುವ ರೈಲುಗಳನ್ನು ಬಳಸಿ. ವಿಶೇಷವಾಗಿ ಸಕಲೇಶಪುರಕ್ಕೆ ರೈಲಿನಲ್ಲಿ ಹೋಗುವಾಗ ಸಿಗುವ 'ಗ್ರೀನ್ ರೂಟ್' ನೋಟ ಮರೆಯಲಾಗದ ಅನುಭವ ನೀಡುತ್ತದೆ.