Sports
ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆಗಿನ ಮಾತುಕತೆ ಬಳಿಕ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಜೊತೆಗಿನ ಅಗ್ರ ಕುಸ್ತಿಪಟುಗಳ ಮಾತುಕತೆ ಯಶಸ್ವಿಯಾಗಿದೆ.
ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ಭೂಷಣ್ ಸಿಂಗ್ ವಿರುದ್ಧದ ಹೋರಾಟವನ್ನು ಜೂನ್ 15ರ ವರೆಗೆ ಸ್ಥಗಿತಗೊಳಿಸಲು ಕುಸ್ತಿಪಟುಗಳು ಒಪ್ಪಿದ್ದಾರೆ.
ಇದೇ ವೇಳೆ ಕುಸ್ತಿಪಟುಗಳು ಕ್ರೀಡಾಸಚಿವ ಅನುರಾಗ್ ಠಾಕೂರ್ ಎದುರು 5 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ
1. ತಮ್ಮ ವಿರುದ್ಧ ದಾಖಲಾದ ಎಫ್ಐಆರ್ಗಳನ್ನು ರದ್ದುಗೊಳಿಸಬೇಕು.
2. ಜೂನ್ 15ರೊಳಗೆ ಬ್ರಿಜ್ಭೂಷಣ್ ವಿರುದ್ಧ ಚಾಜ್ರ್ಶೀಟ್ ಸಲ್ಲಿಕೆ ಆಗಬೇಕು.
3. ಕುಸ್ತಿ ಫೆಡರೇಶನ್ಗೆ ಮಹಿಳೆಯೊಬ್ಬರು ಮುಖ್ಯಸ್ಥರಾಗಬೇಕು.
4. ಫೆಡರೇಶನ್ಗೆ ಜೂನ್ 30ರೊಳಗೆ ಚುನಾವಣೆ ನಡೆಸಬೇಕು.
5. ಚುನಾವಣೆಯಲ್ಲಿ ಬ್ರಿಜ್‌ಭೂಷಣ್‌ರ ಕುಟುಂಬಸ್ಥರು, ಆಪ್ತರು ಸ್ಪರ್ಧಿಸುವಂತಿಲ್ಲ.