Cricket

ದುಬಾರಿ ಆಟಗಾರ

ಕಳೆದ ಐಪಿಎಲ್ ಹರಾಜಿನಲ್ಲಿ ಕೆಲವು ಆಟಗಾರರು ದೊಡ್ಡ ಮೊತ್ತಕ್ಕೆ ಹರಾಜಾಗಿದ್ದರು, ಸ್ಯಾಮ್ ಕರ್ರನ್, ಹರಾಜಿನಲ್ಲಿ ಹೊಸ ಇತಿಹಾಸ ಬರೆದಿದ್ದರು.

Image credits: PTI

ನಂಬಿಕೆ ಉಳಿಸಿಕೊಂಡ ಗ್ರೀನ್

ಎರಡನೇ ದುಬಾರಿ ಆಟಗಾರ ಕ್ಯಾಮರೋನ್ ಗ್ರೀನ್‌ ಅವರೊಬ್ಬರೇ, ತಮ್ಮ ಮೇಲೆ ಫ್ರಾಂಚೈಸಿ ಇಟ್ಟ ನಂಬಿಕೆ ಉಳಿಸಿಕೊಂಡರು.

Image credits: PTI

ನಿರೀಕ್ಷೆ ಹುಸಿ

ದುಬಾರಿ ಮೊತ್ತಕ್ಕೆ ಹರಾಜಾಗಿ, ನಿರೀಕ್ಷೆ ಹುಸಿಗೊಳಿಸಿದ ಕೆಲವು ತಾರಾ ಆಟಗಾರರು ಯಾರು ಎನ್ನುವುದನ್ನು ನೋಡೋಣ
 

Image credits: PTI

ಸ್ಯಾಮ್ ಕರ್ರನ್:

ಪಂಜಾಬ್ ಕಿಂಗ್ಸ್ 18.5 ಕೋಟಿ ರುಪಾಯಿ ದಾಖಲೆ ಮೊತ್ತಕ್ಕೆ ಕರ್ರನ್ ಅವರನ್ನು ಖರೀದಿಸಿತ್ತು. ಆದರೆ ಸಾಮರ್ಥ್ಯಕ್ಕೆ ತಕ್ಕಂತೆ ಆಡಲು ಫೇಲ್ ಆದರು, ಪಂಜಾಬ್ ಫೇಲ್ ಆಯಿತು.

Image credits: PTI

ಬೆನ್ ಸ್ಟೋಕ್ಸ್‌

ಸಿಎಸ್‌ಕೆ ಫ್ರಾಂಚೈಸಿಯು 16.25 ಕೋಟಿ ರುಪಾಯಿ ನೀಡಿ ಬೆನ್ ಸ್ಟೋಕ್ಸ್ ಖರೀದಿಸಿತ್ತು, ಆದರೆ ಸ್ಟೋಕ್ಸ್ ಕೇವಲ 2 ಐಪಿಎಲ್‌ ಪಂದ್ಯಗಳನ್ನಷ್ಟೇ ಆಡಿದರು.

Image credits: PTI

ಹ್ಯಾರಿ ಬ್ರೂಕ್‌

ಸನ್‌ರೈಸರ್ಸ್ ಹೈದರಾಬಾದ್, ಹ್ಯಾರಿ ಬ್ರೂಕ್‌ಗೆ 13.25 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಬ್ರೂಕ್ ಒಂದು ಶತಕ ಸಿಡಿಸಿದ್ದು ಬಿಟ್ಟರೇ, ಉಳಿದೆಲ್ಲಾ ಪಂದ್ಯದಲ್ಲೂ ನಿರಾಸೆ ಅನುಭವಿಸಿದರು.

Image credits: PTI

ಮಯಾಂಕ್ ಅಗರ್‌ವಾಲ್:

ಕಳೆದ ಹರಾಜಿನಲ್ಲಿ ಅಗರ್‌ವಾಲ್, ಭಾರತದ ದುಬಾರಿ ಆಟಗಾರ ಎನಿಸಿಕೊಂಡಿದ್ದರು. ಆದರೆ ಅಗರ್‌ವಾಲ್, ಹೈದರಾಬಾದ್ ತಂಡದ ನಿರೀಕ್ಷೆ ಉಳಿಸಿಕೊಳ್ಳಲಿಲ್ಲ.

Image credits: PTI

ಜೋಫ್ರಾ ಆರ್ಚರ್

ಕಳೆದ ಆವೃತ್ತಿಯಲ್ಲೇ ಆರ್ಚರ್‌ರನ್ನು ಮುಂಬೈ ಫ್ರಾಂಚೈಸಿ ಖರೀದಿಸಿತ್ತು. ಬುಮ್ರಾ ಅನುಪಸ್ಥಿತಿಯಲ್ಲಿ ಆರ್ಚರ್‌ ಮೇಲೆ ಸಾಕಷ್ಟು ನಿರೀಕ್ಷೆಯಿತ್ತು. ಆದರೆ ಇಂಗ್ಲೆಂಡ್‌ ವೇಗಿ ವೈಫಲ್ಯ ಅನುಭವಿಸಿದರು. 

Image credits: Getty
Find Next One