'ಪೊಗರು' ಸಿನಿಮಾ ಬಳಿಕ ನಟಿ ರಶ್ಮಿಕಾ ಮಂದಣ್ಣ ಅವರು ಕನ್ನಡದಲ್ಲಿ ನಟಿಸಿಲ್ಲ. ಇನ್ನು ಯಾವುದೇ ಕನ್ನಡ ಸಿನಿಮಾದಲ್ಲಿ ನಟಿಸುವ ಮಾತುಕತೆ ಕೂಡ ನಡೆದಂತಿಲ್ಲ.
Image credits: rashmika mandanna instagram
Kannada
ಹಿಟ್ ಸಿನಿಮಾಗಳು
ರಶ್ಮಿಕಾ ಮಂದಣ್ಣ ಅವರು ತೆಲುಗು, ತಮಿಳು, ಹಿಂದಿ ಭಾಷೆಯ ಸ್ಟಾರ್ ನಟರ ಜೊತೆ ಸಿನಿಮಾದಲ್ಲಿ ನಟಿಸುತ್ತ, ಹಿಟ್ ಸಿನಿಮಾ ಹೀರೋಯಿನ್ ಆಗುತ್ತಿದ್ದಾರೆ.
Image credits: rashmika mandanna instagram
Kannada
ಬ್ರೇಕಪ್
ರಶ್ಮಿಕಾ ಮಂದಣ್ಣ ಅವರು ರಕ್ಷಿತ್ ಶೆಟ್ಟಿ ಜೊತೆ ಬ್ರೇಕಪ್ ಮಾಡಿಕೊಂಡಿದ್ದಕ್ಕೂ ವೀಕ್ಷಕರಿಗೆ ಬೇಸರ ಇದೆ. ಇಲ್ಲಿ ಯಾರದ್ದು ತಪ್ಪು ಎಂದು ಸ್ಪಷ್ಟವಾಗಿ ಗೊತ್ತಿಲ್ಲ.
Image credits: rashmika mandanna instagram
Kannada
ಹೈದರಾಬಾದ್‌ನವ್ಳು!
ಬೇರೆ ಬೇರೆ ಭಾಷೆಗಳಲ್ಲಿ ದೊಡ್ಡ ಮಟ್ಟದ ಸಿನಿಮಾದಲ್ಲಿ ನಟಿಸುತ್ತಿರುವ ರಶ್ಮಿಕಾ ಮಂದಣ್ಣ ತಾನು ಹೈದರಬಾದ್‌ನವಳು ಎನ್ನುತ್ತಾರೆ.
Image credits: rashmika mandanna instagram
Kannada
ಪ್ರೊಡಕ್ಷನ್ ಹೆಸರು ಹೇಳಿಲ್ಲ
ಇನ್ನು ರಶ್ಮಿಕಾ ಮಂದಣ್ಣ ಅವರು ರಕ್ಷಿತ್ ಶೆಟ್ಟಿ ಜೊತೆ ಸಿನಿಮಾ ಮಾಡಿದ್ದು, ಮೊದಲ ಅವಕಾಶ ನೀಡಿದ ಪ್ರೊಡಕ್ಷನ್ ಹೆಸರನ್ನು ಕೂಡ ಹೇಳಿರಲಿಲ್ಲ.
Image credits: rashmika mandanna instagram
Kannada
ಕನ್ನಡಕ್ಕೆ ಅವಮಾನ
ರಶ್ಮಿಕಾ ಮಂದಣ್ಣ ಅವರು ಪದೇ ಪದೇ ಕನ್ನಡವನ್ನು ಅವಮಾನಿಸಿದರು, ಕಡೆಗಾಣಿಸಿದರು ಎಂಬ ಆರೋಪ ಇದೆ. ಹೀಗಾಗಿ ರಶ್ಮಿಕಾ ಮೇಲೆ ಅಭಿಮಾನಕ್ಕಿಂತ ಅಸಮಾಧಾನ ಜಾಸ್ತಿ ಇದೆ.
Image credits: rashmika mandanna instagram
Kannada
ಬಾಲಯ್ಯ ಜೊತೆ ಮಾತು
ಈ ಬಗ್ಗೆ ಅವರು ನಟ ಬಾಲಯ್ಯ ಜೊತೆಗಿನ ಆಹಾ ಸಿರೀಸ್‌ನ ಟಾಕಿಂಗ್ ಶೋದಲ್ಲಿ ಮಾತನಾಡಿದ್ದಾರೆ.
Image credits: rashmika mandanna instagram
Kannada
ಯಾಕೆ ನಟಿಸ್ತಿಲ್ಲ
“ನಾನು ಪೊಗರು ಸಿನಿಮಾದಲ್ಲಿ ನಟಿಸಿದ್ದೇನೆ, ಆಮೇಲೆ ಲಾಕ್‌ಡೌನ್ ಆಯ್ತು. ಸುಮ್ಮನೆ ತಪ್ಪು ಕಲ್ಪನೆಯಿಂದ ಈ ಥರ ಆಗಿದೆ. ಅದು ಬಿಟ್ಟು ಏನೂ ಇಲ್ಲ. ನನಗೆ ಕನ್ನಡ ಸಿನಿಮಾದಲ್ಲಿ ನಟಿಸೋಕೆ ಇಷ್ಟ” ಎಂದು ಅವರು ಹೇಳಿದ್ದಾರೆ.
Image credits: rashmika mandanna instagram
Kannada
ಕಾಂಟ್ರವರ್ಸಿ ಜಾಸ್ತಿಯಾಯ್ತು!
“ಸಿನಿಮಾದಲ್ಲಿ ಯಶಸ್ಸು ಸಿಗುತ್ತಿದ್ದಂತೆ ಕಾಂಟ್ರವರ್ಸಿ ಆಯ್ತು. ಇದು ಬಹಳ ಬೇಸರ ತಂದರೂ ಕೂಡ ನನ್ನ ಪರವಾಗಿ ವಾದ ಮಾಡಿದ ಫ್ಯಾನ್ಸ್ ನೋಡಿ ಖುಷಿ ಆಯ್ತು” ಎಂದು ಹೇಳಿದ್ದಾರೆ.