ಕನ್ನಡ ಚಿತ್ರ ನಟಿ ಮೇಘನಾ ಗಾಂವ್ಕರ್ ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿ 15 ವರ್ಷಗಳು ತುಂಬಿದ್ದು ಈ ಹಿನ್ನೆಲೆಯಲ್ಲಿ ನಟಿ, ತಮ್ಮ ಜರ್ನಿ ಕುರಿತು ಹಂಚಿಕೊಂಡಿದ್ದಾರೆ.
ನಾನು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಇಂದಿಗೆ 15 ವರ್ಷಗಳು! ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಮತ್ತು ಅನುಭವಗಳಿಗೆ ನಾನು ನಿಜವಾಗಿಯೂ ಕೃತಜ್ಞಳಾಗಿದ್ದೇನೆ ಎಂದಿದ್ದಾರೆ.
ಇಲ್ಲಿಯವರೆಗೆ ನಾನು ನಟಿಸಿದ ಎಲ್ಲಾ ಚಿತ್ರಗಳ ಪ್ರತಿಯೊಬ್ಬ ನಿರ್ದೇಶಕ, ನಿರ್ಮಾಪಕ, ಸಹ-ನಟರು ಮತ್ತು ಸಂಪೂರ್ಣ ತಂಡಕ್ಕೆ, ನಿಮ್ಮ ಅಮೂಲ್ಯ ಕೊಡುಗೆಗಾಗಿ ಧನ್ಯವಾದಗಳು! ಎಂದಿದ್ದಾರೆ.
ಮುಂದಿನ 15 ವರ್ಷಗಳು ಮತ್ತು ಅದರ ನಂತರದ 15 ವರ್ಷಗಳನ್ನು ಎದುರು ನೋಡುತ್ತಿದ್ದೇನೆ. ಎಂದೆಂದಿಗೂ ಸಿನಿಮಾವನ್ನು ಇಷ್ಟಪಡುತ್ತೇನೆ, ಈ ಬಗ್ಗೆ ಹೆಮ್ಮೆ ಇದೆ ಎಂದಿದ್ದಾರೆ ಮೇಘನಾ.
ಮೇಘನಾ ಗಾಂವ್ಕರ್ ನಮ್ ಏರಿಯಾದಲ್ ಒಂದು ದಿನ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.
ವಿನಾಯಕ ಗೆಳೆಯರ ಬಳಗ, ತುಗ್ಲಕ್, ಚಾರ್ ಮಿನಾರ್, ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ, ಕಾಳಿದಾಸ ಕನ್ನಡ ಮೇಷ್ಟ್ರು, ಶುಭಮಂಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇನ್ನು ಕೊನೆಯದಾಗಿ ಮೇಘನಾ ಗಾಂವ್ಕರ್ ಶಿವಾಜಿ ಸುರತ್ಕಲ್ ೨, ಜಡ್ಜ್ ಮೆಂಟ್ ಮತ್ತು ಛೂ ಮಂಥರ್ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಮೇಘನಾ ಹತ್ತು ಸಿನಿಮಾಗಳಲ್ಲಿ ನಟಿಸಿದ್ದು, ವಿಜಯ್ ರಾಘವೇಂದ್ರ, ರಮೇಶ್ ಅರವಿಂದ್, ರವಿಚಂದ್ರನ್, ರಕ್ಷಿತ್ ಶೆಟ್ಟಿ ಸೇರಿ ಸ್ಟಾರ್ ನಟರ ಜೊತೆ ಅಭಿನಯಿಸಿದ್ದಾರೆ.
ಇತ್ತೀಚೆಗಷ್ಟೇ ನಟಿ ಮೇಘನಾ ಪಿಎಚ್ ಡಿ ಸಬ್ ಮಿಟ್ ಮಾಡಿದ್ದು, ನಟಿ ಮೇಘನಾ ಇದೀಗ ಡಾಕ್ಟರ್ ಮೇಘನಾ ಆಗಿದ್ದಾರೆ.
ಮೇಘನಾ ಗಾಂವ್ಕರ್ ಕಲ್ಬುರ್ಗಿ ಹುಡುಗಿಯಾಗಿದ್ದು, ಪ್ರಾಥಮಿಕ ಪ್ರೌಢ ಶಿಕ್ಷಣವನ್ನು ಕಲ್ಬುರ್ಗಿಯಲ್ಲಿಯೇ ಮುಗಿಸಿದ್ದು, ಕಾಲೇಜು ಶಿಕ್ಷಣ ಬೆಂಗಳೂರಿನಲ್ಲಿ ಮಾಡಿದ್ದಾರೆ.
ನಟಿ ಸಿನಿಮಾ ಆಯ್ಕೆ ಬಗ್ಗೆ ತುಂಬಾನೆ ಚೂಸಿಯಾಗಿದ್ದು, ೧೫ ವರ್ಷಗಳಲ್ಲಿ ನಟಿಸಿದ್ದು ಕೇವಲ ಹತ್ತು ಸಿನಿಮಾ ಮಾತ್ರ. ಮುಂದಿನ ಸಿನಿಮಾ ಯಾವುದು ಅನ್ನೋ ಮಾಹಿತಿ ಕೂಡ ಇಲ್ಲ.
ನಟಿ ರಾಧಿಕಾ ಪಂಡಿತ್ ತಂದೆ ಕೂಡ ನಟ! ಕೃಷ್ಣಪ್ರಸಾದ್ ನಟಿಸಿದ ಸಿನಿಮಾ ಸೂಪರ್ ಹಿಟ್!
ವಯಸ್ಸು 63… ರೆಡಿಯಾಗ್ತಿರೋ ಸಿನಿಮಾಗಳು 15ಕ್ಕೂ ಹೆಚ್ಚು… KFIನ ರೂಲ್ ಮಾಡ್ತಿದ್ದಾರೆ ಶಿವಣ್ಣ
ಸಿನಿಮಾದಲ್ಲಿ 24 ಕ್ಯಾರೆಟ್ ವೆರೈಟಿ ಗೋಲ್ಡ್ ಹಾಕ್ತಿದ್ದ ಬಿ ಸರೋಜಾದೇವಿ!
'ನಾನು ಯಶ್ ಜೊತೆ ಸಿನಿಮಾ ಮಾಡೋಕೆ ಸಾಲ ಮಾಡ್ಬೇಕು: ತಾಯಿ ಪುಷ್ಪ!