ಚಂದನವನದಲ್ಲಿ ಮದುವೆ, ಬ್ರೇಕಪ್, ಡಿವೋರ್ಸ್ ಆಗಿರೋದು ಬಹಳ ಕಡಿಮೆ, ಆದರೂ ಒಂದಷ್ಟು ನಟ ನಟಿಯರು, ಮೊದಲ ಮದುವೆಯಲ್ಲಿ ಸಂತೋಷ ಕಾಣದೇ ಎರಡನೇ ಮದುವೆಯಾಗಿದ್ದಾರೆ.
sandalwood Feb 15 2025
Author: Pavna Das Image Credits:Instagram : 10_second_kannada
Kannada
ಎರಡು -ಮೂರು ಮದುವೆಯಾದ ನಟರು
ಇವತ್ತು ಎರಡು, ಅಥವಾ ಮೂರು ಬಾರಿ ಮದುವೆಯಾಗಿರುವ ಒಂದಷ್ಟು ನಟರ ಬಗ್ಗೆ ಒಂದಷ್ಟು ಮಾಹಿತಿ ನೀಡುತ್ತಿದ್ದೇವೆ.
Image credits: iSTOCK
Kannada
ಟೈಗರ್ ಪ್ರಭಾಕರ್
ಸ್ಯಾಂಡಲ್’ವುಡ್ ಹೀರೋ, ವಿಲನ್ ಟೈಗರ್ ಪ್ರಭಾಕರ್ ಒಂದೆರಡಲ್ಲ ಮೂರು ಬಾರಿ ಮದುವೆಯಾಗಿದ್ದಾರೆ. ಪ್ರಭಾಕರ್ ಮೊದಲಿಗೆ ಮೇರಿ, ನಂತರ ಜಯಮಾಲ, ಬಳಿಕ ಅಂಜು ಅವರನ್ನು ಮದುವೆಯಾದರು.
Image credits: Instagram : 10_second_kannada
Kannada
ಪ್ರಕಾಶ್ ರೈ
ನಟ ಪ್ರಕಾಶ್ ರೈ ಕೂಡ ಎರಡು ಮದುವೆಯಾಗಿದ್ದು, ಮೊದಲಿಗೆ ಲಲಿತಾ ಕುಮಾರಿ, ಡಿವೋರ್ಸ್ ಬಳಿಕ ಪೋನಿ ವರ್ಮಾ ಅವರನ್ನು ವಿವಾಹವಾಗಿದ್ದಾರೆ.
Image credits: Instagram : 10_second_kannada
Kannada
ದುನಿಯಾ ವಿಜಯ್
ನಟ ದುನಿಯಾ ವಿಜಯ್ ನಾಗರತ್ನ ಅವರನ್ನು ವಿವಾಹವಾಗಿದ್ದರು, ನಂತರ ಕೀರ್ತಿ ಪಟೋಡಿ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
Image credits: Instagram : 10_second_kannada
Kannada
ರಘು ಮುಖರ್ಜಿ
ರಘು ಮುಖರ್ಜಿ ಮೂರು ಮದುವೆಯಾಗಿದ್ದಾರೆ ಎನ್ನುವ ಮಾಹಿತಿ ಇದೆ, ಇವರು ಮೊದಲು ಮದುವೆಯಾಗಿದ್ದು ದೀಪಾ, ನಂತರ ಭಾವನಾ, ಸದ್ಯ ನಟಿ ಅನು ಪ್ರಭಾಕರ್ ಜೊತೆ ಸಂಸಾರ ನಡೆಸುತ್ತಿದ್ದಾರೆ.
Image credits: Instagram : 10_second_kannada
Kannada
ರಾಜೇಶ್ ಕೃಷ್ಣನ್
ಗಾಯಕ ರಾಜೇಶ್ ಕೃಷ್ಣನ್ ಅವರು ಮೂರು ಬಾರಿ ಮದುವೆಯಾಗಿ ಡಿವೋರ್ಸ್ ಪಡೆದಿದ್ದಾರೆ. ಇವರು ಟಿವಿ ನಿರೂಪಕಿ ರಮ್ಯಾ ವಶಿಷ್ಠ, ಡೆಂಟಿಸ್ಟ್ ಹರಿಪ್ರಿಯಾ ಹಾಗೂ ಗಾಯಕಿ ಸೌಮ್ಯ ರಾವ್ ಅವರನ್ನು ಮದುವೆಯಾಗಿದ್ದರು.