Kannada

ನಿರೂಪ್ ಭಂಡಾರಿ

ರಂಗಿತರಂಗ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ ನಟ ನಿರೂಪ್ ಭಂಡಾರಿ. ತಮ್ಮ ಆದ್ಭುತ ನಟನೆ ಹಾಗೂ ಹ್ಯಾಂಡ್ಸಮ್ ಲುಕ್ ಮೂಲಕ ಜನಮನ ಗೆದ್ದಿದ್ದರು.

Kannada

ಹತ್ತನೇ ವಿವಾಹ ವಾರ್ಷಿಕೋತ್ಸವ

ಸಿನಿಮಾಗಳಲ್ಲಿ ಆಗೊಮ್ಮೆ, ಈಗೊಮ್ಮೆ ಕಾಣಿಸಿಕೊಳ್ಳುವ ನಿರೂಪ್ ಇತ್ತೀಚೆಗೆ ದಾಂಪತ್ಯ ಜೀವನದ 10ನೇ ವರ್ಷದ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದು, ಪತ್ನಿ ಜೊತೆಗಿನ ಮುದ್ದಾದ ಫೋಟೋಗಳನ್ನ ಶೇರ್ ಮಾಡಿದ್ದಾರೆ .

Image credits: Instagram
Kannada

ಪತ್ನಿಗೆ ಸ್ವಿಟ್ ವಿಶ್

ನನ್ನ ಜೀವನದ ಪ್ರತಿ ಹೆಜ್ಜೆಯಲ್ಲೂ, ಪ್ರತಿ ಕಷ್ಟದಲ್ಲೂ, ಎಲ್ಲಾ ಯಶಸ್ಸುಗಳಲ್ಲೂ ಜೊತೆ ನಿಲ್ಲುವ ಪತ್ನಿಗೆ ಹ್ಯಾಪಿ ಆನಿವರ್ಸರಿ. ಇಷ್ಟು ಬೇಗ 10 ವರ್ಷ ಕಳೆಯಿತು ಅನ್ನೋದನ್ನ ನಂಬಲು ಸಾಧ್ಯವಿಲ್ಲ ಎಂದಿದ್ದಾರೆ ನಟ.

Image credits: Instagram
Kannada

ಮುದ್ದಿನ ಮಗುವಿನ ಅಪ್ಪ

ನಿರೂಪ್ ಭಂಡಾರಿ ಪತ್ನಿ ಯಾವ ಹೀರೋಯಿನ್ ಗೂ ಕೂಡ ಕಡಿಮೆ ಇಲ್ಲ ಎನ್ನುವಂತೆ ಫೋಟೊಗಳಲ್ಲಿ ಮಿಂಚುತ್ತಿದ್ದಾರೆ. ಇವರಿಬ್ಬರದು ಲವ್ ಮ್ಯಾರೇಜ್ ಆಗಿದ್ದು, ಈ ಜೋಡಿಗೆ ಈಗಾಗಲೇ ಒಬ್ಬ ಮುದ್ದಾದ ಮಗ ಕೂಡ ಇದ್ದಾನೆ.

Image credits: Instagram
Kannada

ಪ್ರೀತಿಸಿ ಮದುವೆಯಾದ ನಿರೂಪ್

ನಿರೂಪ್ ಭಂಡಾರಿ ಅವರ ಪತ್ನಿ ಧನ್ಯ, ಫ್ಯಾಮಿಲಿ ಫ್ರೆಂಡ್ ಆಗಿದ್ದು, ಬಾಲ್ಯದಿಂದಲೇ ಒಬ್ಬರಿಗೊಬ್ಬರು ಗೊತ್ತಿದ್ದ ಕುಟುಂಬ ಇದಾಗಿತ್ತು. ಹಾಗಾಗಿ ಇಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ.

Image credits: Instagram
Kannada

ಸಿಹಿ ನೆನಪುಗಳನ್ನು ಹಂಚಿಕೊಂಡ ನಟ

ಇದೀಗ ಸೋಶಿಯಲ್ ಮೀಡಿಯಾದಲ್ಲಿ ನಿರೂಪ್ ಪತ್ನಿ ಜೊತೆಗೆ ಕಳೆದ ಮಧುರ ಕ್ಷಣಗಳ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಮದುವೆಯ ಫೋಟೊ ಕೂಡ ಇದರಲ್ಲಿವೆ.

Image credits: Instagram
Kannada

ನಿರೂಪ್ ಭಂಡಾರಿ ಅಭಿನಯಿಸಿದ ಚಿತ್ರಗಳು

ರಂಗಿತರಂಗದ ಬಳಿಕ ನಿರೂಪ್ ಕಿಚ್ಚ ಸುದೀಪ್ ಜೊತೆ ವಿಕ್ರಾಂತ್ ರೋಣ, ರಾಜರಥ, ಅಮರ್, ಆದಿ ಲಕ್ಷ್ಮಿ ಪುರಾಣ, ವಿಂಡೋ ಸೀಟ್ ಸಿನಿಮಾದಲ್ಲಿ ನಟಿಸಿದ್ದರು.

Image credits: Instagram
Kannada

ಯಾವ ಸಿನಿಮಾದಲ್ಲಿ ನಟಿಸ್ತಿದ್ದಾರೆ

ಇತ್ತೀಚೆಗೆ ನಿರೂಪ್ ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದರು. ‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಸಿನಿಮಾದಲ್ಲೂ ನಟಿಸಲಿದ್ದಾರೆ.

Image credits: Instagram

ಸಂಗೀತ ಶೃಂಗೇರಿಗೆ ಲವ್ ಆಗಿದ್ಯಾ? ಫೋಟೊ ಜೊತೆಗಿನ ಕ್ಯಾಪ್ಶನ್ ಗುಟ್ಟೇನು?

ತಮ್ಮ ಸಿನಿಮಾ ರಿಲೀಸ್ ಆಗುವ ಮುನ್ನವೇ ಸಾವನ್ನಪ್ಪಿದ ಕನ್ನಡ ನಟರು

ಸಿನಿಮಾದಲ್ಲಿ ತಮ್ಮ ಮಕ್ಕಳೊಂದಿಗೆ ನಟಿಸಿದ್ದ ಚಂದನವನದ ಸ್ಟಾರ್ ನಟರು

ಸಿನಿಮಾ ಹೀರೋ ಅಲ್ಲ, ನಿರ್ದೇಶಕನನ್ನೇ ಲವ್ ಮಾಡಿ ಮದ್ವೆಯಾದ ನಟಿಯರು