Sandalwood

ಸುಧಾರಾಣಿ

ಸ್ಯಾಂಡಲ್’ವುಡ್ ಎವರ್’ಗ್ರೀನ್ ಬ್ಯೂಟಿ ಅಂದ್ರೆ ಅದು ಸುಧಾರಾಣಿ. ಅವತ್ತು ಸಿನಿಮಾದಲ್ಲಿ ಹೇಗಿದ್ರೋ, ಈವಾಗ್ಲೂ ಅದೇ ಸೌಂದರ್ಯ ಉಳಿಸಿಕೊಂಡಿದ್ದಾರೆ ನಟಿ. 
 

Image credits: Instagram

ಜಯಶ್ರೀಯಿಂದ ಸುಧಾರಾಣಿ

ಹುಟ್ಟಿದಾಗ ಜಯಶ್ರೀ ಎನ್ನುವ ಹೆಸರನ್ನು ಹೊಂದಿದ್ದ ಸುಧಾರಾಣಿ ನಂತರ ಸಿನಿಮಕ್ಕಾಗಿ ಸುಧಾರಾಣಿಯಾದರು, ಜೊತೆಗೆ ಕನ್ನಡ ಚಿತ್ರರಂಗದಲ್ಲಿ ರಾಣಿಯಾಗಿ ಮಿಂಚಿದರು. 
 

Image credits: Instagram

ಸೀರಿಯಲ್ ನಲ್ಲೂ ನಟನೆ

ಸಿನಿಮಾದ ಜೊತೆಗೆ ಸುಧಾರಾಣಿ ಸೀರಿಯಲ್ ನಲ್ಲಿ ನಾಯಕಿಯಾಗಿ ಸಹ ಗುರುತಿಸಿಕೊಂಡರು. ತುಳಸಿ ಸೀರಿಯಲ್ ನಲ್ಲಿ ತುಳಸಿಯಾಗಿ, ಇದೀಗ ಶ್ರೀರಸ್ತು ಶುಭಮಸ್ತುವಿನಲ್ಲೂ ತುಳಸಿಯಾಗಿ ನಟಿಸುತ್ತಿದ್ದಾರೆ. 
 

Image credits: Instagram

ವೀಕ್ಷಕರ ಮೆಚ್ಚಿನ ತುಳಸಿ ಅಮ್ಮ

ಶ್ರೀರಸ್ತು ಶುಭಮಸ್ತು ಧಾರಾವಾಹಿಯ ತುಳಸಿ ಪಾತ್ರದ ಮೂಲಕ ಜನಮನ ಗೆಲ್ಲುತ್ತಿರುವ ನಟಿ ವೀಕ್ಷಕರ ಫೇವರಿಟ್ ತುಳಸಿ ಅಮ್ಮ ಆಗಿದ್ದಾರೆ. 
 

Image credits: Instagram

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್

ಸುಧಾರಾಣಿಯವರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದು, ವಿವಿಧ ರೀತಿಯ ವಿಡಿಯೋಗಳ ಜೊತೆಗೆ ಆವಾಗವಾಗ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. 
 

Image credits: Instagram

ಮಗಳ ಜೊತೆ ಸುಧಾರಾಣಿ

ಸುಧಾರಾಣಿಯವರು ಇದೀಗ ಮಗಳ ಜೊತೆಗಿನ ಫೋಟೊಗಳನ್ನು ಜೊತೆಯಾಗಿ ಸೇರಿಸಿ ವಿಡಿಯೋ ಮಾಡಿ ಅಪ್ ಲೋಡ್ ಮಾಡಿದ್ದಾರೆ. ಮಗಳು ಕೂಡ ಅಮ್ಮನಂತೆ ಮುದ್ದಾಗಿದ್ದಾರೆ. 
 

Image credits: Instagram

ಸುಧಾರ ಪ್ರೀತಿಯ ಸುಬ್ಬಿ

ಸುಧಾ ರಾಣಿ ಪುತ್ರಿಯ ಹೆಸರು ನಿಧಿ. ಈಕೆ ಡಿಗ್ರಿ ಓದುತ್ತಿದ್ದು, ಭರತನಾಟ್ಯ ಕಲಾವಿದೆ ಕೂಡ ಹೌದು. ಇವರನ್ನು ಅಮ್ಮ ಸುಧಾರಾಣಿ ಪ್ರೀತಿಯಿಂದ ಸುಬ್ಬಿ ಎಂದು ಕರೆಯುತ್ತಾರೆ. 
 

Image credits: Instagram

ನ್ಯೂ ಇಯರ್ ವಿಶ್

ಹೊಸ ವರ್ಷವನ್ನು ಬಿಗ್ ಬ್ಯಾಂಗ್ ನೊಂದಿಗೆ ಪ್ರಾರಂಭಿಸಲು ಸಜ್ಜಾಗುತ್ತಿರುವ ಎಲ್ಲರಿಗೂ ಶುಭ ಕೋರಿದ್ದು, ಜೀವನ ಸಂತೋಷ, ಖುಷಿ, ಸರ್ಪ್ರೈಸ್ ಗಳಿಂದ ಕೂಡಿರಲಿ ಎಂದು ಹಾರೈಸಿದ್ದಾರೆ ಸುಧಾರಾಣಿ.  

Image credits: Instagram

ನಮ್ಮನ್ನಗಲಿದ ಚಂದನವನದ ತಾರೆಯರ ಕ್ರಿಸ್ಮಸ್ ಸೆಲಬ್ರೇಶನ್ ಹೀಗೂ ಇದ್ದಿರಬಹುದೇ?

ಅಬ್ಬಬ್ಬಾ! ಈ ವರ್ಷ ಹೊಸ ಮನೆ ಕಟ್ಟಿಸಿ ಗೃಹಪ್ರವೇಶ ಮಾಡಿದ ಸೆಲೆಬ್ರಿಟಿಗಳು ಇವರೇ

ಸೀರೆಯಲ್ಲಿ ಮಿಂಚುತ್ತಿರುವ ವಿಜಯಲಕ್ಷ್ಮಿ ; ಗುಣದಲ್ಲಿ ಸತಿಸಾವಿತ್ರಿ ಎಂದ ಫ್ಯಾನ್ಸ್

ಮಿಸ್ ಏಷ್ಯಾ ಪೆಸಿಫಿಕ್ 2024 ರನ್ನರ್ ಅಪ್ ಆದ ಕನ್ನಡತಿ ಲಾಸ್ಯ ನಾಗರಾಜ್