Sandalwood

ಚಂದನವನದ ಧ್ರುವತಾರೆಯರ ಕ್ರಿಸ್ಮಸ್

ಸೋಶಿಯಲ್ ಮೀಡಿಯಾದಲ್ಲಿ forscreens ಎನ್ನುವ ಪೇಜ್ ನಮ್ಮನ್ನಗಲಿದ ಚಂದನವನದ ತಾರೆಯರ ಎಐ ಇಮೇಜ್ ಬಳಸಿ ಕ್ರಿಸ್ಮಸ್ ಹಬ್ಬದ ಆಚರಣೆಯ ಫೋಟೊಗಳನ್ನು ಶೇರ್ ಮಾಡಿದೆ. 
 

Image credits: Instagram

ಡಾ. ರಾಜ್ ಕುಮಾರ್

ಬಿಳಿ ಶರ್ಟ್, ಕಪ್ಪು ಪ್ಯಾಂಟ್, ಕೆಂಪು ಸ್ವೆಟರ್ ಧರಿಸಿರೋ ಅಣ್ಣಾವ್ರ ಕ್ರಿಸ್ಮಸ್ ಲುಕ್ ತುಂಬಾನೆ ಚೆನ್ನಾಗಿದೆ ಅಲ್ವಾ?
 

Image credits: Instagram

ಜಯಂತಿ

ಕೆಂಪು ಜರಿ ಸೀರೆ, ಕೈತುಂಬಾ ಬಳೆ, ಮುಡಿತುಂಬಾ ಮಲ್ಲಿಗೆ, ಕುತ್ತಿಗೆಯಲ್ಲಿ ಮುತ್ತಿನ ಹಾರ ಧರಿಸಿರುವ ಜಯಂತಿ ಮುಖದಲ್ಲಿರುವ ಗತ್ತು ನೋಡೋದಕ್ಕೆ ಚೆಂದ. 
 

Image credits: Instagram

ಡಾ. ವಿಷ್ಣುವರ್ಧನ್

ಒಂದು ಕೈಯಲ್ಲಿ ಉಡುಗೊರೆ, ಮತ್ತೊಂದು ಕೈಯಲ್ಲಿ ಕಾಫಿ ಮಗ್ ಹಿಡಿದು, ಕೆಂಪು ಬಣ್ಣದ ಸ್ವೆಟ್ ಶರ್ಟ್ ಧರಿಸಿ, ನಗು ಬೀರಿರುವ ವಿಷ್ಣವರ್ಧನ್ ಅವರನ್ನು ನೋಡಿದ್ರೆ ನಮ್ಮೊಂದಿಗೆ ಇರುವಂತೆ ಅನಿಸುತ್ತಿದೆ. 
 

Image credits: Instagram

ಲೀಲಾವತಿ

ಕಣ್ಣಲ್ಲಿ ಕನ್ನಡಕ ಧರಿಸಿ ಕೆಂಪು ಸೀರೆಯುಟ್ಟು, ಸರಳ ಅಲಂಕಾರದಲ್ಲಿರುವ ಲೀಲಾವತಿ ಅಮ್ಮನವರ ಲುಕ್ ಅವರಷ್ಟೇ ಸಿಂಪಲ್ ಜೊತೆಗೆ ಸುಂದರವಾಗಿದೆ. 
 

Image credits: Instagram

ಶಂಕರ್ ನಾಗ್

ಸ್ನೋ ಫ್ಲೇಕ್ ಚಿತ್ರವಿರುವ ಕೆಂಪು ಶರ್ಟ್ ಧರಿಸಿರುವ ಶಂಕರ್ ನಾಗ್ ಕಣ್ಣಲ್ಲಿರುವ ಹೊಳಪು ಅಭಿಮಾನಿಗಳ ಎದೆಗೆ ನಾಟದೇ ಇರದು.
 

Image credits: Instagram

ಕಲ್ಪನಾ

ಶರಪಂಜರದ ಚೆಲುವೆ ಕಲ್ಪನಾ ಅಂತೂ ಕೆಂಪು ಸೀರೆ, ದೊಡ್ಡದಾದ ಜುಮುಕಿ, ಕೆಂಪಾದ ಬೊಟ್ಟು ತೊಟ್ಟು ಅಪ್ಸರೆಯಂತೆ ಕಾಣಿಸ್ತಿದ್ದಾರೆ ಅಲ್ವಾ? 
 

Image credits: Instagram

ರೆಬಲ್ ಸ್ಟಾರ್ ಅಂಬರೀಶ್

ದೊಡ್ಡದಾದ ಮೀಸೆ, ಆ ತುಂಟ ನಗು, ಕೆಂಪು ಸ್ವೆಟ್ ಶರ್ಟ್ ಧರಿಸಿ, ಕಾಫಿ ಮಗ್ ಕೈಯಲ್ಲಿ ಹಿಡಿದಿರುವ ರೆಬಲ್ ಸ್ಟಾರ್ ನೋಡಿದ್ರೆ, ಸಾಂತಾ ಕ್ಲಾಸ್ ನೋಡಿದಷ್ಟೇ ಮುದ್ದಾಗಿ ಕಾಣಿಸ್ತಿದ್ದಾರೆ. 
 

Image credits: Instagram

ಮಂಜುಳಾ

ಕೆಂಪು ಸೀರೆಯುಟ್ಟು, ತಲೆಯಲ್ಲಿ ಕನಕಾಂಬರ ಹೂವು ಮುಡಿದು, ಕೈಯಲ್ಲಿ ವೈನ್ ಗ್ಲಾಸ್ ಹಿಡಿದಿರುವ ಬಜಾರಿ ಮಂಜುಳಾ ಲುಕ್ ಹೇಗಿದೆ? 
 

Image credits: Instagram

ದ್ವಾರಕೀಶ್

ಕೆಂಪು ಶರ್ಟ್ ಧರಿಸಿರುವ ದ್ವಾರಕೀಶ್ ಅವರನ್ನ ನೋಡಿದ್ರೆ, ಈಗಷ್ಟೇ ಎನೋ ಹಾಸ್ಯ ಚಟಾಕಿ ಹಾರಿಸಿ, ಎಲ್ಲರನ್ನೂ ನಗಿಸಿದಂತೆ ಕಾಣುತ್ತೆ. 
 

Image credits: Instagram

ಪುನೀತ್ ರಾಜ್ ಕುಮಾರ್

ಕೊನೆಯದಾಗಿ ಪರಮಾತ್ಮ ಅಪ್ಪು ತಮ್ಮ ನಿಷ್ಕಲ್ಮಷ ನಗುವನ್ನು ಚೆಲ್ಲುತ್ತಾ, ಎಲ್ಲರಿಗೂ ಕ್ರಿಸ್ಮಸ್ ಶುಭ ಕೋರಿದಂತೆ ಕಾಣುತ್ತೆ. 
 

Image credits: Instagram

ಅಬ್ಬಬ್ಬಾ! ಈ ವರ್ಷ ಹೊಸ ಮನೆ ಕಟ್ಟಿಸಿ ಗೃಹಪ್ರವೇಶ ಮಾಡಿದ ಸೆಲೆಬ್ರಿಟಿಗಳು ಇವರೇ

ಸೀರೆಯಲ್ಲಿ ಮಿಂಚುತ್ತಿರುವ ವಿಜಯಲಕ್ಷ್ಮಿ ; ಗುಣದಲ್ಲಿ ಸತಿಸಾವಿತ್ರಿ ಎಂದ ಫ್ಯಾನ್ಸ್

ಮಿಸ್ ಏಷ್ಯಾ ಪೆಸಿಫಿಕ್ 2024 ರನ್ನರ್ ಅಪ್ ಆದ ಕನ್ನಡತಿ ಲಾಸ್ಯ ನಾಗರಾಜ್

ರಾಧಿಕಾ ಪಂಡಿತ್ ಬಗ್ಗೆ ನಿಮಗೆ ಗೊತ್ತಿಲ್ಲದ ಕುತೂಹಲಕಾರಿ ಸಂಗತಿಗಳು