ಓರ್ವ ನಟ ಒಂದು ಸಿನಿಮಾವನ್ನು ರಿಜೆಕ್ಟ್ ಮಾಡಿದ್ದರೆ, ಇನ್ನೋರ್ವ ನಟನಿಗೆ ವರದಾನ ಆದ ಅನೇಕ ಉದಾಹರಣೆಗಳು ನಮ್ಮಲ್ಲಿವೆ.
ನಿರೂಪ್ ಭಂಡಾರಿ ಅವರಿಗೆ ಈ ಸಿನಿಮಾ ಅವಕಾಶ ಹೋಗುವ ಮುನ್ನ ಬೇರೊಬ್ಬ ನಟನಿಗೆ ಆಫರ್ ಹೋಗಿತ್ತು.
ಸಸ್ಪೆನ್ಸ್ ಥ್ರಿಲ್ಲರ್ ‘ರಂಗಿತರಂಗ’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ಈ ಸಿನಿಮಾದಲ್ಲಿ ನಿರೂಪ್ ಭಂಡಾರಿ ನಟಿಸಿದ್ದರು.
ನಿರ್ದೇಶಕ ಅನೂಪ್ ಭಂಡಾರಿ ಅವರಿಗೆ ದೊಡ್ಡ ಹಿಟ್ ಕೊಟ್ಟ ಸಿನಿಮಾವಿದು! 2015ರಲ್ಲಿ ತೆರೆಕಂಡ ಸಿನಿಮಾವಿದು.
1.5 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾ 45 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.
ಮೊದಲು ಈ ಸಿನಿಮಾ ಮಾಡಲು ರಕ್ಷಿತ್ ಶೆಟ್ಟಿ ಅವರನ್ನು ಸಂಪರ್ಕ ಮಾಡಲಾಗಿತ್ತು.
ಆಗ ರಕ್ಷಿತ್ ಶೆಟ್ಟಿ ‘ಉಳಿದವರು ಕಂಡಂತೆ’ ಸಿನಿಮಾದಲ್ಲಿ ಬ್ಯುಸಿಯಿದ್ದರು. ಹೀಗಾಗಿ ಅವರು ಈ ಸಿನಿಮಾ ರಿಜೆಕ್ಟ್ ಮಾಡಿದ್ದರು.
ರಕ್ಷಿತ್ ಶೆಟ್ಟಿ ಬಳಿಕ ನಿರೂಪ್ ಭಂಡಾರಿಯವರಿಗೆ ಈ ಸಿನಿಮಾ ಅವಕಾಶ ಸಿಕ್ಕಿತು. ಈಗ ಈ ಸಿನಿಮಾವು ಕನ್ನಡ ಚಿತ್ರರಂಗದಲ್ಲಿ ಮೈಲಿಗಲ್ಲಾಗಿದೆ.
ಪ್ರೀತಿಗೋಸ್ಕರ ಅಂತರ್‌ಧರ್ಮೀಯ ಮದುವೆಯಾದ ಕನ್ನಡದ ನಟ-ನಟಿಯರಿವರು!
ಸಿನಿಮಾ ರಿಲೀಸ್ ಆಗ್ತಿದ್ದಂತೆ ಕಣ್ಮರೆಯಾಗೋದ್ಯಾಕೆ ನಟ Rakshith Shetty ?
ಗೋಲ್ಡನ್ ಬ್ಯೂಟಿ ಅಮೂಲ್ಯ ಮುದ್ದಾದ ಫ್ಯಾಮಿಲಿ ಫೋಟೊ ಶೂಟ್
ಕಾನ್ಸ್‌ನಲ್ಲಿ ಮಿಂಚಿದ ಸ್ಯಾಂಡಲ್ ವುಡ್ ನಟಿ ಪ್ರಣೀತಾ ಸುಭಾಷ್