ತರುಣ್ ಸುಧೀರ್ ಹಾಗೂ ಸೋನಲ್ ಮೊಂಥೆರೋ ಅವರು ಪ್ರೀತಿಸಿ ಮದುವೆಯಾಗಿದ್ದಾರೆ. ಹಿಂದು, ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ಈ ಜೋಡಿ ಮದುವೆಯಾಗಿತ್ತು.
ಆರಂಭದಲ್ಲಿ ಪ್ರೀತಿ ಸುದ್ದಿಯನ್ನು ಎಲ್ಲಿಯೂ ಹೇಳಿಕೊಳ್ಳದ ಈ ಜೋಡಿ ಬಹಳ ಅದ್ದೂರಿಯಾಗಿ ಮದುವೆ ಆಗಿತ್ತು.
ʼಚಿ ಸೌ ಸಾವಿತ್ರಿʼ, ʼಭಾಗ್ಯಲಕ್ಷ್ಮೀʼ ಧಾರಾವಾಹಿ ನಟಿ ಗೌತಮಿ ಅವರು ಜಾರ್ಜ್ ಕ್ರಿಸ್ಟಿ ಅವರನ್ನು ಮದುವೆಯಾಗಿದ್ದಾರೆ.
ಪ್ರಿಯಾಮಣಿ ಹಾಗೂ ಮುಸ್ತಫಾ ರಾಜ್ ಅವರು ಪ್ರೀತಿಸಿ ಮದುವೆಯಾಗಿದ್ದಾರೆ. ಬೆಂಗಳೂರಿನಲ್ಲಿ ಬಹಳ ಖಾಸಗಿಯಾಗಿ ಈ ಮದುವೆ ನಡೆದಿತ್ತು.
ಗ್ಯಾಬ್ರಿಯೆಲಾ ಹಾಗೂ ಸುಹಾಸ್ ಅವರು ಪ್ರೀತಿಸಿ ಮದುವೆಯಾಗಿದ್ದಾರೆ. ʼಕಮಲಿʼ ಧಾರಾವಾಹಿಯಲ್ಲಿ ಈ ಜೋಡಿ ಒಟ್ಟಿಗೆ ನಟಿಸಿತ್ತು.
ಇಂದು ಗ್ಯಾಬ್ರಿಯೆಲಾ, ಸುಹಾಸ್ ಇಬ್ಬರೂ ನಟನೆಯಲ್ಲಿ ಸಕ್ರಿಯವಾಗಿದ್ದು, ಧಾರಾವಾಹಿ, ರಿಯಾಲಿಟಿ ಶೋ, ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ನಟಿ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಅವರು ಪ್ರೀತಿಸಿ ಮದುವೆಯಾಗಿದ್ದರು. ಮೇಘನಾ ತಾಯಿ ಪ್ರಮೀಳಾ ಜೋಶಾಯ್ ಕ್ರಿಶ್ಚಿಯನ್ ಆದರೆ, ಅಪ್ಪ ಸುಂದರ್ ರಾಜ್ ಹಿಂದು.
ಚಿರಂಜೀವಿ ಅವರು ಹಿಂದು. ಹೀಗಾಗಿ ಈ ಜೋಡಿ ಎರಡೂ ಸಂಪ್ರದಾಯದ ಪ್ರಕಾರ ಈ ಮದುವೆ ಆಗಿತ್ತು.
ಪ್ರಮೀಳಾ ಜೋಶಾಯ್, ಸುಂದರ್ ರಾಜ್ ಅವರು ಕೂಡ ಪ್ರೀತಿಸಿ ಮದುವೆಯಾಗಿದ್ದಾರೆ. ಸುಂದರ್ ಅವರು ಹಿಂದು, ಪ್ರಮೀಳಾ ಕ್ರಿಶ್ಚಿಯನ್.
ಸಿನಿಮಾ ರಿಲೀಸ್ ಆಗ್ತಿದ್ದಂತೆ ಕಣ್ಮರೆಯಾಗೋದ್ಯಾಕೆ ನಟ Rakshith Shetty ?
ಗೋಲ್ಡನ್ ಬ್ಯೂಟಿ ಅಮೂಲ್ಯ ಮುದ್ದಾದ ಫ್ಯಾಮಿಲಿ ಫೋಟೊ ಶೂಟ್
ಕಾನ್ಸ್‌ನಲ್ಲಿ ಮಿಂಚಿದ ಸ್ಯಾಂಡಲ್ ವುಡ್ ನಟಿ ಪ್ರಣೀತಾ ಸುಭಾಷ್
ಮತ್ತಷ್ಟು ಸ್ಲಿಮ್ ಆಗ್ಬಿಟ್ರು ಯುವ ಬೆಡಗಿ ಸಪ್ತಮಿ ಗೌಡ