ಚಂದನವನದ ಸ್ಲೋ ಬ್ಯೂಟಿ ಪ್ರಣೀತಾ ಸುಭಾಷ್ ಕಾನ್ಸ್ ಚಲನಚಿತ್ರೋತ್ಸವದಲ್ಲಿ ಮಿಂಚಿದ್ದಾರೆ.
ಭಾರತೀಯ ಸಿನಿಮಾ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವಂತೆ ಮಾಡುವ ಭಾರತ್ ಪೆವಿಲಿಯನ್ ಸಮಿತಿ ಜೊತೆ 78 ನೇ ಕಾನ್ಸ್ ಚಲನಚಿತ್ರೋತ್ಸವದಲ್ಲಿ ನಟಿ ಭಾಗಿಯಾಗಿದ್ದಾರೆ.
ರೋಸ್ ರೂಮ್ ಅವರ ಬೇಬಿ ಪಿಂಕ್ ಬಣ್ಣದ ಬ್ಲೌಸ್, ಸೀರೆಯಂತಹ ಸ್ಕರ್ಟ್ ನಲ್ಲಿ ಮಿಂಚಿದ ಚೆಲುವೆ ಪ್ರಣೀತಾ
ಪ್ರಣೀತಾ ಸುಭಾಷ್ ಪಿಂಕ್ ಬಣ್ಣ ಚಿಕನ್ ಕಾರಿ ವರ್ಕ್ ಇರುವ ಬ್ಲೌಸ್ ಧರಿಸಿದ್ದು, ಇದರ ಜೊತೆಗೆ ನೆರಿಗೆ ಇರುವಂತಹ ಸಿಂಪಲ್ ಆಗಿರುವ ಸ್ಕರ್ಟ್ ಹಾಗೂ ವರ್ಕ್ ಇರುವ ದುಪಟ್ಟಾ ಧರಿಸಿದ್ದಾರೆ.
ಪ್ರಣೀತಾ ಸುಭಾಷ್ ಗೆ ಇಬ್ಬರು ಮಕ್ಕಳಿದ್ದು, ಆದ್ರೂ ನಟಿ ಫಿಟ್ನೆಸ್ ಕಾಪಾಡಿಕೊಂಡು ಬಂದಿದ್ದಾರೆ.
ಸದ್ಯ ಇಬ್ಬರು ಮಕ್ಕಳೊಂದಿಗೆ ಸಮಯ ಕಳೆಯುತ್ತಿರುವ ಪ್ರಣೀತಾ, ಸಿನಿಮಾ, ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದಾರೆ.
ಇಬ್ಬರು ಮಕ್ಕಳಾದಾ ಮೇಲೆ ಸಿನಿಮಾದಿಂದ ನಟಿ ದೂರ ಇದ್ದರೂ ಸಹ ಹಲವು ಬ್ರ್ಯಾಂಡ್ ಗಳಿಗೆ ಮಾಡೆಲ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ.
ಕನ್ನಡದ ಪೊರ್ಕಿ ಸಿನಿಮಾ ಮೂಲಕ ಎಂಟ್ರಿ ಕೊಟ್ಟ ಪ್ರಣೀತಾ, ಬಳಿಕ ತಮಿಳು, ತೆಲುಗು, ಮಲಯಾಲಂ ಸಿನಿಮಾಗಳಲ್ಲಿ ನಟಿಸುವ ಮೂಲಕ ಜನಪ್ರಿಯತೆ ಗಳಿಸಿದ್ರು.
ಅಂದ ಹಾಗೇ ಪ್ರಣೀತಾ ಬಾಲಿವುಡ್ ನ ಹಂಗಾಮ 2 ಹಾಗೂ ಬುಜ್ -ದ ಪ್ರೈಡ್ ಆಫ್ ಇಂಡಿಯಾ ಸಿನಿಮಾಗಳಲ್ಲೂ ಸಹ ನಟಿಸಿದ್ದಾರೆ.
ಮತ್ತಷ್ಟು ಸ್ಲಿಮ್ ಆಗ್ಬಿಟ್ರು ಯುವ ಬೆಡಗಿ ಸಪ್ತಮಿ ಗೌಡ
ಕಲರ್ ಫುಲ್ ಅವತಾರದ ಮೂಲಕ ಕಿಚ್ಚೆಬ್ಬಿಸಿದ ಚೈತ್ರಾ ಆಚಾರ್
ಸಪ್ತ ಸಾಗರ ಚೆಲುವೆಯ ಈ ಲುಕ್ ಹೇಗಿದೆ? ಸಖತ್ ಕ್ಯೂಟ್ ಅಲ್ವಾ?
ಗಾಜನೂರಿನಲ್ಲಿ ಸೋದರತ್ತೆ ಭೇಟಿ ಮಾಡಿದ ಶಿವರಾಜ್‌ಕುಮಾರ್-ಗೀತಕ್ಕ!