ಕನ್ನಡ ಚಿತ್ರರಂಗದ ಹಲವಾರು ನಟ-ನಟಿಯರು ಮಾರಕ ಕಾಯಿಲೆಗೆ ತುತ್ತಾಗಿ ಸಾವನ್ನಪ್ಪಿದರು. ಕೆಲವರು ಕ್ಯಾನ್ಸರ್ ಗೆ ಗುರಿಯಾದರೆ, ಇನ್ನೂ ಕೆಲವರು ಕಿಡ್ನಿ ವೈಫಲ್ಯ. ಇಲ್ಲಿದೆ ತಾರೆಯರ ಡಿಟೇಲ್ಸ್.
sandalwood Dec 29 2025
Author: Pavna Das Image Credits:social media
Kannada
ನವೀನ್ ಮಯೂರ್
ಹ್ಯಾಂಡ್ಸಮ್ ನಟ ನವೀನ್ ಮಯೂರ್ ತಮ್ಮ 32ನೇ ವಯಸ್ಸಿಗೆ ಜಾಂಡೀಸ್ ತುತ್ತಾಗಿ 2010ರ ಅಕ್ಟೋಬರ್ ತಿಂಗಳಲ್ಲಿ ಸಾವನ್ನಪ್ಪಿದರು.
Image credits: social media
Kannada
ಸಂತೋಷ್ ಬಾಲರಾಜ್
ಜಾಂಡೀಸ್ ಸಮಸ್ಯೆಯಿಂದಾಗಿ ಕಿಡ್ನಿ ವೈಫಲ್ಯ, ಲಿವರ್ ಸಮಸ್ಯೆಗೆ ಒಳಗಾಗಿ ಕೊನೆಗೆ ಬಹು ಅಂಗಾಂಗ ವೈಫಲ್ಯದಿಂದಾಗಿ ನಟ ಸಂತೋಷ್ ಬಾಲರಾಜ್ ಇದೇ ವರ್ಷ ಆಗಸ್ಟ್ ತಿಂಗಳಲ್ಲಿ ಸಾವನ್ನಪ್ಪಿದರು.
Image credits: social media
Kannada
ಸತ್ಯಜೀತ್
ಕನ್ನಡ ಚಿತ್ರರಂಗದಲ್ಲಿ ವಿಲನ್ ಆಗಿಯೇ ಹಲವು ವರ್ಷಗಳಿಂದ ಗುರುತಿಸಿಕೊಂಡಿರುವ ನಟ ಸತ್ಯಜೀತ್ ಗ್ಯಾಂಗ್ರೀನ್ ನಿಂದಾಗಿ ಸಾವನ್ನಪ್ಪಿದ್ದರು.
Image credits: social media
Kannada
ಟೈಗರ್ ಪ್ರಭಾಕರ್
ಕನ್ನಡ ನಟ ಪ್ರಭಾಕರ್ (ಟೈಗರ್ ಪ್ರಭಾಕರ್) ಅವರು ಕಿಡ್ನಿ ವೈಫಲ್ಯ (Multi Organ Failure) ಮತ್ತು ಜಾಂಡೀಸ್ ಕಾರಣದಿಂದ ಮಾರ್ಚ್ 25, 2001 ರಂದು ನಿಧನರಾದರು.
Image credits: social media
Kannada
ಹರೀಶ್ ರಾಯ್
ಕನ್ನಡ ಚಿತ್ರಗಳಲ್ಲಿ ವಿಲನ್ ಆಗಿ ನಟಿಸುತ್ತಿದ್ದ ಹಾಗೂ ಕೆಜಿಎಫ್ ಚಾಚಾ ಆಗಿ ಗುರುತಿಸಿಕೊಂಡ ಹರೀಶ್ ರಾಯ್ 4ನೇ ಹಂತಹ ಥೈರಾಯ್ಡ್ ಕ್ಯಾನ್ಸರ್ ಗೆ ಬಲಿಯಾದರು.
Image credits: Social media
Kannada
ನಿರೂಪಕಿ ಅಪರ್ಣ
ಕನ್ನಡದ ಜನಪ್ರಿಯ ನಿರೂಪಕಿ ಹಾಗೂ ನಟಿ ಅಪರ್ಣ ಅವರು ಶ್ವಾಸಕೋಶದ ಕ್ಯಾನ್ಸರ್ ಗೆ ತುತ್ತಾಗಿ, ಚಿಕಿತ್ಸೆಗಳ ಹೊರತಾಗಿ ಚೇತರಿಕೆ ಕಾಣದೆ 2024ರ ಜುಲೈ ತಿಂಗಳಲ್ಲಿ ಮರಣ ಹೊಂದಿದ್ದರು.
Image credits: Social media
Kannada
ವಜ್ರಮುನಿ
ವಿಲನ್ ಆಗಿ ಹೀರೋಗಳಿಗೆ ಟಕ್ಕರ್ ಕೊಟ್ಟ ನಟ ವಜ್ರಮುನಿ ಜನವರಿ 5, 2006 ರಂದು ಹೃದಯಾಘಾತಕ್ಕೆ ಬಲಿಯಾದರು. ಅವರು ದೀರ್ಘಕಾಲದಿಂದ ಕಿಡ್ನಿ ವೈಫಲ್ಯ ಮತ್ತು ಮಧುಮೇಹದಿಂದ ಬಳಲುತ್ತಿದ್ದರು.