ಕನ್ನಡ ಚಿತ್ರರಂಗದ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್ ಅವರ ಹೊಸ ಲುಕ್ ಇದೀಗ ಅಭಿಮಾನಿಗಳ ಗಮನ ಸೆಳೆದಿದೆ.
sandalwood Dec 25 2025
Author: Pavna Das Image Credits:Instagram
Kannada
ನೀಲಿ ಗಾಗ್ರಾ ಚೋಲಿಯಲ್ಲಿ ಆಶಿಕಾ
ಆಶಿಕಾ ರಂಗನಾಥ್ ನೀಲಿ ಬಣ್ಣದ ಗಾಗ್ರಾ ಚೋಲಿ ಧರಿಸಿ, ಪೋಸ್ ಕೊಟ್ಟಿದ್ದು, ನಟಿ ಸಖತ್ ಸ್ಟೈಲಿಶ್ ಮತ್ತು ಸುಂದರವಾಗಿ ಕಾಣಿಸುತ್ತಿದ್ದಾರೆ.
Image credits: Instagram
Kannada
ಅಭಿಮಾನಿಗಳು ಫಿದಾ
ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್ ಈ ಸ್ಟೈಲಿಶ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಕಾಮೆಂಟ್ ಸೆಕ್ಷನ್ ಪೂರ್ತಿ ಪ್ರೀತಿಯ ಸುರಿಮಳೆಯಾಗಿದೆ.
Image credits: Instagram
Kannada
ವೈರಲ್ ಆಗ್ತಿದೆ ನಟಿ ಫೋಟೊ
ಆಶಿಕಾ ರಂಗನಾಥ್ ಹೊಸ ಫೋಟೊ ಸದ್ಯ ವೈರಲ್ ಆಗುತ್ತಿದ್ದು, ಈಗಾಗಲೇ 1ಲಕ್ಷದ 75 ಸಾವಿರ ಲೈಕ್ಸ್ ಹಾಗೂ ಎಂಟನೂರಕ್ಕೂ ಹೆಚ್ಚು ಜನ ಕಾಮೆಂಟ್ ಮಾಡಿದ್ದಾರೆ.
Image credits: Instagram
Kannada
ತೆಲುಗು ಸಿನಿಮಾಗಳಲ್ಲಿ ಬ್ಯುಸಿ
ಇತ್ತೀಚೆಗೆ ಕನ್ನಡದಲ್ಲಿ ಗತವೈಭದಲ್ಲಿ ನಟಿಸಿದ್ದ ಆಶಿಕಾ ರಂಗನಾಥ್ ಇದೀಗ ತೆಲುಗಿನಲ್ಲಿ ರವಿತೇಜ ಜೊತೆಗೆ 'ಭರ್ತ ಮಹಾಶಯುಲಕು ವಿಘ್ನಪ್ತಿ’ ಚಿತ್ರದಲ್ಲಿ ನಟಿಸಿದ್ದಾರೆ.
Image credits: Instagram
Kannada
ಗ್ಲಾಮರ್ ಗೊಂಬೆ
ಆಶಿಕಾ ತೆಲುಗು ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಗ್ಲಾಮರಸ್ ಪಾತ್ರಗಳ ಮೂಲಕ ಮಿಂಚುತ್ತಿದ್ದು, ಹೊಸ ಸಿನಿಮಾದಲ್ಲೂ ತುಂಡುಡುಗೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಆಚ್ಚರಿ ಮೂಡಿಸಿದ್ದಾರೆ.
Image credits: Instagram
Kannada
ಕಾಮಿಡಿ ಎಂಟರ್’ಟೈನ್ಮೆಂಟ್ ಸಿನಿಮಾ
ಕಿಶೋರ್ ತಿರುಮಲ ನಿರ್ದೇಶನದ ಕಾಮಿಡಿ ಎಂಟರ್‌ಟೈನರ್ 'ಭರ್ತ ಮಹಾಶಯುಲಕು ವಿಘ್ನಪ್ತಿ' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಚಿತ್ರದಲ್ಲಿ ಮತ್ತೊಬ್ಬ ನಾಯಕಿಯಾಗಿ ಡಿಂಪಲ್ ಹಯಾತಿ ನಟಿಸುತ್ತಿದ್ದಾರೆ.
Image credits: Instagram
Kannada
ತಮಿಳು-ತೆಲುಗು ಸಿನಿಮಾದಲ್ಲಿ ನಟನೆ
ಆಶಿಕಾ ತೆಲುಗಿನಲ್ಲಿ ‘ವಿಶ್ವಂಭರಮ್’ ಮತ್ತು ತಮಿಳಿನಲ್ಲಿ ಕಾರ್ತಿ ಜೊತೆ ‘ಸರ್ದಾರ್ 2’ ಸಿನಿಮಾದಲ್ಲಿ ಆಶಿಕಾ ರಂಗನಾಥ್ ನಟಿಸುತ್ತಿದ್ದಾರೆ.
Image credits: Instagram
Kannada
ಕನ್ನಡದಲ್ಲಿ ಯಾವ ಸಿನಿಮಾ?
ಆಶಿಕಾ ಕನ್ನಡದಲ್ಲಿ ‘ಗತವೈವಭ’ ಸಿನಿಮಾದಲ್ಲಿ ನಟಿಸಿದ್ದರು. ನಂತರ ಸದ್ಯ ಯಾವುದೇ ಪ್ರಾಜಕ್ಟ್ ಒಪ್ಪಿಕೊಂಡಿಲ್ಲ, ಆದಷ್ಟು ಬೇಗ ಕನ್ನಡದ್ದಲ್ಲಿ ನಟಿಸುವಂತೆ ಅಭಿಮಾನಿಗಳು ಕೇಳಿಕೊಂಡಿದ್ದಾರೆ.