Sandalwood

ಆಶಾ ಭಟ್

ರಾಬರ್ಟ್ ಚಿತ್ರದಲ್ಲಿ ಕಣ್ಣು ಹೊಡೆಯಾಕ ನಿನ್ನೆ ಕಲಿತೀನಿ ಎಂದು ಹೇಳಿ ಯುವಜನರ ಮನಸ್ಸಿಗೆ ಲಗ್ಗೆ ಇಟ್ಟ ಚೆಲುವೆ ಆಶಾ ಭಟ್ ಈವಾಗ ಎಲ್ಲಿದ್ದಾರೆ?

Image credits: Instagram

ಮಿಸ್ ದಿವಾ ಸೂಪ್ರನ್ಯಾಷನಲ್

2014 ರಲ್ಲಿ ಮಿಸ್ ದಿವಾ ಬ್ಯೂಟಿ ಕಾಂಟೆಸ್ಟ್ ನಲ್ಲಿ ಮಿಸ್ ದಿವಾ ಸೂಪ್ರನ್ಯಾಷನಲ್ ಟೈಟಲ್ ಗೆಲ್ಲುವ ಮೂಲಕ ಸುದ್ದಿಯಾದ ಆಶಾ ಭಟ್

Image credits: Instagram

ಭಾರತವನ್ನು ಪ್ರತಿನಿಧಿಸಿದ ಆಶಾ

ಭಾರತದಲ್ಲಿ ಗೆದ್ದ ಬಳಿಕ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಸೂಪ್ರನ್ಯಾಷನಲ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಕಿರೀಟ ಮುಡಿಗೇರಿಸುವ ಮೂಲಕ ಇತಿಹಾಸ ನಿರ್ಮಿಸಿದರು.

Image credits: Instagram

ಭದ್ರಾವತಿ ಹುಡುಗಿ

ಆಶಾ ಭಟ್ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಹುಡುಗಿಯಾಗಿದ್ದು, ಆಳ್ವಾಸ್ ಕಾಲೇಜಿನಲ್ಲಿ ಕಾಲೇಜು ಮುಗಿಸಿ, ಆರ್.ವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದರು. 

Image credits: Instagram

ಜಂಗ್ಲೀ ಚಿತ್ರದ ಮೂಲಕ ಸಿನಿಮಾಗೆ ಎಂಟ್ರಿ

ಆಶಾ ಭಟ್ ಬಾಲಿವುಡ್ ನ ಜಂಗ್ಲೀ ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. ಈ ಚಿತ್ರದಲ್ಲಿ ಇವರು ವಿದ್ಯುತ್ ಜಮಾವಾಲ್ ಮತ್ತು ಪೂಜಾ ಸಾವಂತ್ ಜೊತೆ ತೆರೆ ಹಂಚಿಕೊಂಡಿದ್ದರು. 
 

Image credits: Instagram

ರಾಬರ್ಟ್ ಮೂಲಕ ಕನ್ನಡಕ್ಕೆ ಎಂಟ್ರಿ

ರಾಬರ್ಟ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆಶಾ ಭಟ್ ಕಣ್ಣು ಹೊಡೆಯಾಕ ಹಾಡಿನ ಮೂಲಕ ಕರ್ನಾಟಕದಾದ್ಯಂತ್ ಜನಪ್ರಿಯತೆ ಗಳಿಸಿದರು, ಜೊತೆಗೆ ಭರವಸೆಯ ನಟಿಯಾಗಿ ಹೊರ ಹೊಮ್ಮಿದರು. 
 

Image credits: Instagram

ಗಾಯಕಿ, ಡ್ಯಾನ್ಸರ್

ಆಶಾ ಭಟ್ ಅವರು ಅತ್ಯುತ್ತಮ ಗಾಯಕಿ ಮತ್ತು ನೃತ್ಯಗಾರ್ತಿಯೂ ಆಗಿದ್ದು, ಇವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹಾಡುಗಳ ವೀಡಿಯೋ ಮತ್ತು ಡ್ಯಾನ್ಸ್ ವಿಡೀಯೋ ಶೇರ್ ಮಾಡುತ್ತಿರುತ್ತಾರೆ. 
 

Image credits: Instagram

ಪುಸ್ತಕ ಪ್ರೇಮಿ

ಪುಸ್ತಕ ಪ್ರೇಮಿಯೂ ಆಗಿರುವ ಆಶಾಭಟ್ ಸದ್ಯ ತಾವು ಪುಸ್ತಕ ಓದುತ್ತಿರುವ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಜೊತೆಗೆ ನೀವು ಯಾವ ಪುಸ್ತಕ ಓದುತ್ತಿದ್ದೀರಿ ಎಂದು ಕೇಳಿದ್ದಾರೆ. 
 

Image credits: Instagram

ಮಲ್ಟಿ ಟ್ಯಾಲೆಂಟೆಡ್

ಆಶಾ ಭಟ್ ಮಲ್ಟಿ ಟ್ಯಾಲೆಂಟೆಡ್ ಎಂದೇ ಹೇಳಬಹುದು. ಯಾಕಂದ್ರೆ, ಸಿಂಗರ್, ಭರತನಾಟ್ಯ ಕಲಾವಿದೆ, ಮಾರ್ಷಲ್ ಆರ್ಟ್ ಪ್ರವೀಣೆ, ಚಿತ್ರ ಕಲಾವಿದೆ, ಎಲ್ಲವೂ ಹೌದು. 
 

Image credits: Instagram

ಈಗೆಲ್ಲಿದ್ದಾರೆ ಆಶಾ ಭಟ್

ಕೇವಲ ಮೂರು ಚಿತ್ರಗಳಲ್ಲಿ ಕಾಣಿಸಿಕೊಂಡ ಬಳಿಕ ಅವರು ಹೆಚ್ಚಾಗಿ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಸೋಶಿಯಲ್ ಮೀಡಿಯಾ ಮೂಲಕ ಅವರು ಅಭಿಮಾನಿಗಳ ಜೊತೆ ಕನೆಕ್ಟ್ ಆಗುತ್ತಿದ್ದಾರೆ. 
 

Image credits: Instagram

ಕನ್ನಡತಿ ರಂಜನಿ ಬಳಿಕ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಕಿರಣ್ ರಾಜ್

ಮಗಳಿಗೆ ಕಿವಿ ಚುಚ್ಚಿಸಿದ ರಿಷಬ್ ಶೆಟ್ಟಿ; ರಾಧ್ಯಾ- ರಣ್ವಿತ್ ಫೋಟೋ ವೈರಲ್

'KGF' ಸಿನಿಮಾದ ಶಾಂತಿ ನೋಡಿ ದಂಗಾದ ಫ್ಯಾನ್ಸ್: ಇವ್ರು ನಿಜಕ್ಕೂ ಅವರೇನಾ?

ಮತ್ತೆ ತಾಯಿ ಆಗ್ತಿರುವ ಸಂಭ್ರಮದಲ್ಲಿ ನಿರ್ದೇಶಕ ಪವನ್ ಒಡೆಯರ್ ಪತ್ನಿ ಅಪೇಕ್ಷಾ