ಕನ್ನಡತಿ ಸೀರಿಯಲ್ ಮೂಲಕ ಮನೆಮಾತಾಗಿದ್ದ ಹರ್ಷ ಆಲಿಯಾಸ್ ಕಿರಣ್ ರಾಜ್ ಕನ್ನಡತಿ ಬಳಿಕ ಬೇರೆ ಯಾವುದೇ ಸೀರಿಯಲ್ ನಲ್ಲಿ ಕಾಣಿಸಿಕೊಂಡಿಲ್ಲ. ತ್ರಿಪುರ ಸುಂದರಿಯಲ್ಲಿ ಗೆಸ್ಟ್ ರೋಲ್ ಮಾಡಿದ್ದರು.
sandalwood Jun 27 2023
Author: Suvarna News Image Credits:Instagram
Kannada
ಗುಡ್ ನ್ಯೂಸ್
ಕೆಲ ದಿನಗಳ ಹಿಂದೆಯಷ್ಟೆ ನಟಿ ರಂಜನಿ ರಾಘವನ್ ಹೊಸ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಹೆಳಿದ್ದರು. ಇದೀಗ ಕಿರಣ್ ರಾಜ್ ಅವರ ಹೊಸ ಸಿನಿಮಾದ ಹೊಸ ಸುದ್ದಿ ಬಂದಿದೆ.
Image credits: Instagram
Kannada
ಹೊಸ ಚಿತ್ರದ ಟೀಸರ್
ಕಿರಣ್ ರಾಜ್ ನಾಯಕನಾಗಿ ನಟಿಸುತ್ತಿರುವ ರಾನಿ ಚಿತ್ರದ ಟೀಸರ್ ರೀಲೀಸ್ ಬಗ್ಗೆ ಮಾಹಿತಿ ನೀಡಿದ್ದು, ಜುಲೈ 5 ರಂದು ಟೀಸರ್ ರಿಲೀಸ್ ಆಗಲಿದೆ ಎಂದು ಕಿರಣ್ ತಿಳಿಸಿದ್ದಾರೆ.
Image credits: Instagram
Kannada
ರಾನಿ ಚಿತ್ರ
ಕಿರಣ್ ರಾಜ್ ಅಭಿನಯದ ರಾನಿ ಚಿತ್ರವನ್ನು ಚಂದ್ರಕಾಂತ್ ಪೂಜಾರಿ, ಉಮೇಶ್ ಹೆಗ್ಡೆ ನಿರ್ಮಾಣ ಮಾಡಿದ್ದು, ಗುರುತೇಜ್ ಶೆಟ್ಟಿ ಚಿತ್ರ ನಿರ್ದೇರ್ಶಿಸಿದ್ದಾರೆ.
Image credits: Instagram
Kannada
ಬರ್ತ್ ಡೇ ದಿನ ಟೀಸರ್
ಕಿರಣ್ ಚಿತ್ರದ ಟೈಟಲ್ ಅನ್ನು ದುಬೈನಲ್ಲಿ 13 ಸಾವಿರ ಅಡಿಯಿಂದ ಸ್ಕೈ ಡೈವ್ ಮಾಡುವ ಮೂಲಕ ರಿಲೀಸ್ ಮಾಡಿದ್ದರು. ಇದೀಗ ಹುಟ್ಟಿದ ಹಬ್ಬದ ದಿನ ಟೀಸರ್ ರಿಲೀಸ್ ಆಗುತ್ತಿದ್ದು, ಕುತೂಹಲ ಹೆಚ್ಚಿದೆ.
Image credits: Instagram
Kannada
ರಗಡ್ ಲುಕ್
ಚಿತ್ರದಲ್ಲಿ ಕಿರಣ್ ರಾಜ್ ರಗಡ್ ಲುಕ್ಕಲ್ಲಿ ಕಾಣಿಸಿಕೊಂಡಿದ್ದು, ಚಿತ್ರದ ಪೋಸ್ಟರ್, ಟೈಟಲ್ ನೋಡಿಯೇ ಕಿರಣ್ ಇನ್ನೇನು ಮೋಡಿ ಮಾಡಬಹುದು ಎಂದು ಅಭಿಮಾನಿಗಳು ಕಾತುರರಾಗಿದ್ದಾರೆ.
Image credits: Instagram
Kannada
ಮೂವರು ನಾಯಕಿಯರು
ಚಿತ್ರದಲ್ಲಿ ಸಮೀಕ್ಷಾ, ಅಪೂರ್ವ, ರಾದ್ಯಾ ಮೂವರು ನಾಯಕಿಯರಾಗಿ ಕಾಣಿಸಿಕೊಂಡಿದ್ದು, ಮೂವರು ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ ಎಂದು ತಿಳಿದು ಬಂದಿದೆ. .
Image credits: Instagram
Kannada
ಡಿಸೆಂಬರ್ ನಲ್ಲಿ ರಿಲೀಸ್
ಚಿತ್ರದಲ್ಲಿ ರವಿ ಶಂಕರ್, ಮೈಕೋ ನಾಗರಾಜ್, ಬಿ. ಸುರೇಶ್, ಮಂಡ್ಯ ರಮೇಶ್, ಮೊದಲಾದ ದೊಡ್ಡ ಕಲಾವಿದರು ನಟಿಸಿದ್ದಾರೆ. ಡಿಸೆಂಬರ್ ತಿಂಗಳಿನಲ್ಲಿ ಚಿತ್ರ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ..