Sandalwood

ಬೆಳ್ಳಿ ತೆರೆ ಮೇಲೆ ಕನ್ನಡತಿ

ಕನ್ನಡತಿ ಸೀರಿಯಲ್ ಬಳಿಕ ಮತ್ತೆ ತೆರೆ ಮೇಲೆ ಯಾವ ಕಾಣಿಸಿಕೊಳ್ಳುತ್ತೀರಿ ಎಂದು ಕೇಳುತ್ತಿದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ನಟಿ ರಂಜನಿ ರಾಘವನ್. 
 

Image credits: social media

ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಕ್ಕೆ ನಾಯಕಿ

ನಟಿ ರಂಜನಿ ರಾಘವನ್ ಇದೀಗ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಕ್ಕೆ ಸಹಿ ಹಾಕಿದ್ದು, ಸದ್ಯ ಅದೇ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ ಅನ್ನೋ ಸುದ್ದಿ ಬಂದಿದೆ. 
 

Image credits: social media

ಆದಿತ್ಯ ನಾಯಕ

ಹೊಸ ನಿರ್ದೇಶಕ ಕಿಶೋರ್ ಮೇಗಲಮನೆ ನಿರ್ದೇಶನದ ಈ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಕ್ಕೆ ನಟ ಆದಿತ್ಯ ನಾಯಕನಾಗಿ ಆಯ್ಕೆಯಾಗಿದ್ದು,ರಂಜನಿ - ಆದಿತ್ಯ ಕಾಂಬಿನೇಶನ್ ಮೊದಲ ಚಿತ್ರವಿದು.

Image credits: social media

ಇನ್ನೂ ಹೆಸರಿಡದ ಚಿತ್ರ

ಈ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ, ಸದ್ಯದಲ್ಲೇ ಜನಪ್ರಿಯ ನಟರೊಬ್ಬರು ಟೈಟಲ್ ರಿವೀಲ್ ಮಾಡಲಿದ್ದಾರೆ ಎನ್ನುವ ಸುದ್ದಿ ಇದೆ.
 

Image credits: social media

ಹೊಸ ಪಾತ್ರ ಹೊಸ ಹುಮ್ಮಸ್ಸು

ನಟಿ ರಂಜನಿ ರಾಘವನ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ನ್ಯೂಸ್ ಒಂದನ್ನು ಶೇರ್ ಮಾಡಿ ಹೊಸ ಕಥೆ, ಹೊಸ ಪಾತ್ರ, ಹೊಸ ಹುಮ್ಮಸ್ಸು ಎಂದು ಬರೆದು ಕೊಂಡಿದ್ದಾರೆ. 
 

Image credits: social media

ಅಭಿಮಾನಿಗಳಿಗೆ ಖುಷಿ

ರಂಜನಿ ಹೊಸ ಸಿನಿಮಾ ಸುದ್ದಿ ಕೇಳಿ ಅಭಿಮಾನಿಗಳು ತುಂಬಾನೆ ಥ್ರಿಲ್ ಆಗಿದ್ದು, ತಮ್ಮ ನೆಚ್ಚಿನ ನಟಿಯನ್ನು ಮತ್ತೆ ತೆರೆ ಮೇಲೆ ಕಾಣುವ ಸಂತಸದಲ್ಲಿದ್ದಾರೆ. 
 

Image credits: social media

ಹೊಸ ಪಾತ್ರದಲ್ಲಿ ಕಾಣುವಾಸೆ

ನೆಚ್ಚಿನ ನಟಿಗೆ ಅಭಿನಂದನೆ ಸಲ್ಲಿಸಿರುವ ಅಭಿಮಾನಿಗಳು ನಿಮ್ಮ ಕಲಾ ನೈಪುಣ್ಯವನ್ನು ಹೊಸ ಪಾತ್ರಗಳ ಮೂಲಕ ನೋಡಲು ಕಾತರರಾಗಿದ್ದೇವೆ ಎಂದು ಬರೆದುಕೊಂಡಿದ್ದಾರೆ. 
 

Image credits: social media

ತೀರ್ಥಯಾತ್ರೆ

ರಂಜನಿ ಸೋಶಿಯಲ್ ಮೀಡಿಯಾ ನೋಡಿದ್ರೆ ಅವರು ಉತ್ತರ ಭಾರತದ ಹಲವಾರು ಯಾತ್ರಾ ಸ್ಥಳಗಳಿಗೆ ಭೇಟಿ ನೀಡಿ, ಸಂಭ್ರಮಿಸಿದ್ದರು.

Image credits: our own

ನೀರೊಳಗಿದ್ದು ಬಿಸಿ ಏರಿಸಿದ 'ಗಾಳಿಪಟ' ನಟಿ: ಡೈಸಿ ಹಾಟ್ ಲುಕ್ ವೈರಲ್

Fathers Day: ಮಗಳಿಗೆ ನೇಲ್ ಪಾಲಿಶ್ ಹಚ್ಚಿದ ಯಶ್, ಸುಂದರ ಫೋಟೋ ಹಂಚಿಕೊಂಡ ರಾಧಿಕಾ

ಫುಲ್ ಸ್ಲಿಮ್ ಸ್ಲಿಮ್; ರಚಿತಾ ರಾಮ್ ಫೋಟೋ ವೈರಲ್!

'ಸಪ್ತ ಸಾಗರದಾಚೆ ಎಲ್ಲೋ' ರುಕ್ಮಿಣಿ ವಸಂತ ಕರ್ನಾಟಕದ ಎಳನೀರು ಸಚಿವೆಯಂತೆ