ಸ್ಯಾಂಡಲ್ ವುಡ್ ನಟ ಹಾಗೂ ನಿರ್ದೇಶಕ ಡಾರ್ಲಿಂಗ್ ಕೃಷ್ಣ ತಮ್ಮ ಮುದ್ದು ಮಗಳು ಹಾಗೂ ಪತ್ನಿಯ ಮುದ್ದಾದ ಫೋಟೊವನ್ನು ತಮ್ಮ ಇನ್’ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.
Image credits: Instagram
ನನ್ನ ಪ್ರಪಂಚ ಎಂದ ಕೃಷ್ಣ
ಮಿಲನಾ ನಾಗರಾಜ್ ಮುದ್ದು ಮಗಳು ಪರಿಯನ್ನು ಕೈಯಲ್ಲಿ ಹಿಡಿದಿದ್ದು, ಇಬ್ಬರು ಮುದ್ದಾಗಿ ನಗುತ್ತಿರುವ ಫೋಟೊ ಇದಾಗಿದೆ. ಇದಕ್ಕೆ ಕ್ಯಾಪ್ಶನ್ ಆಗಿ ಕೃಷ್ಣ My world ಎಂದು ಬರೆದುಕೊಂಡಿದ್ದಾರೆ.
Image credits: Instagram
ಅಭಿಮಾನಿಗಳಿಂದ ಮೆಚ್ಚುಗೆ
ಮಿಲನಾ ಮತ್ತು ಮುದ್ದು ಪರಿ ಫೋಟೊಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದು, ನಟಿಯರಾದ ಅಮೃತಾ ಅಯ್ಯಂಗಾರ್, ಸುಷ್ಮಿತಾ, ರಾಚೆಲ್ ಡೇವಿಡ್, ರೋಶನಿ ಪ್ರಕಾಶ್, ಮ್ಯಾಕ್ರಿನ್ ಡೀಸೋಜಾ ಪ್ರೀತಿಯ ಸುರಿಮಳೆ ಸುರಿದಿದ್ದಾರೆ.
Image credits: Instagram
ಜ್ಯೂನಿಯರ್ ಕೃಷ್ಣ ಎಂದ ಫ್ಯಾನ್ಸ್
ಅಮ್ಮ ಕೈಯಲ್ಲಿ ಮುದ್ದಾಗಿ ನಗುತ್ತಿರುವ ಪರಿಯನ್ನು ನೋಡಿ ಅಭಿಮಾನಿಗಳು ಇದು ಜ್ಯೂನಿಯರ್ ಕೃಷ್ಣ, ಸೇಮ್ ಅಪ್ಪನ ಥರಾನೆ ಇದ್ದಾಳೆ, ಮುದ್ದು ಕೃಷ್ಣ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
Image credits: Instagram
ಸೆಪ್ಟೆಂಬರ್ ತಿಂಗಳಲ್ಲಿ ಪರಿಯ ಆಗಮನ
ಕೃಷ್ಣಾ -ಮಿಲನಾ ದಂಪತಿಗಳು ಫೆಬ್ರುವರಿ 14, 2021 ರಂದು ಮದುವೆಯಾಗಿದ್ದು, ವಿವಾಹವಾಗಿ ಮೂರು ವರ್ಷಗಳ ಬಳಿಕ ಅಂದ್ರೆ ಸೆಪ್ಟೆಂಬರ್ 2024ರಂದು ಮಗಳಿಗೆ ಜನ್ಮ ನೀಡಿದ್ದರು.
Image credits: Instagram
ಮಗಳ ಜೊತೆಗಿನ ಫೋಟೊ
ಈ ಜೋಡಿ ಮಗು ಹುಟ್ಟಿ ಒಂದು ವಾರದಲ್ಲಿ ಫ್ಯಾಮಿಲಿ ಫೋಟೊ ಶೂಟ್ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಹೆಚ್ಚಾಗಿ ಈ ಸ್ಟಾರ್ ಕಪಲ್ ತಮ್ಮ ಮಗಳ ಜೊತೆಗಿನ ಮುದ್ದಾದ ಫೋಟೊ ಹಂಚಿಕೊಳ್ಳುತ್ತಿರುತ್ತಾರೆ.