ಕಾಂತಾರ ಚೆಲುವೆ ಲೀಲಾ ಆಲಿಯಾಸ್ ಸಪ್ತಮಿ ಗೌಡ ಇಂದಿಗೂ ವೀಕ್ಷಕರ ಮೋಸ್ಟ್ ಫೆವರಿಟ್.
ನಟಿಯ ಕಂಗಳ ಹೊಳೆಯುವ ಮಿಂಚು , ಹಲವು ಪಡ್ಡೆ ಹುಡುಗರು ಈ ಕಣ್ಣೋಟಕ್ಕೆ ಸೆರೆಯಾಗಿದ್ದಾರೆ.
ಚಂದನವನದ ಈ ನೀಳ ಸುಂದರಿ ಸೀರೆ, ಮಾಡರ್ನ್ ಡ್ರೆಸ್ ಯಾವುದೇ ಧರಿಸಿದ್ರೂ ಸಹ ಸಖತ್ ಸುಂದರವಾಗಿ ಕಾಣಿಸ್ತಾರೆ.
ಇದೀಗ ಸಪ್ತಮಿ ಗೌಡ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಲಂಗ, ದಾವಣಿ ಧರಿಸಿ ಮಿರಮಿರನೆ ಮಿಂಚುತ್ತಿದ್ದು, ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಸಪ್ತಮಿ ಕಂದು ಬಣ್ಣದ ಲಂಗ ದಾವಣಿ ಧರಿಸಿದ್ದು, ನೀಳ ಜಡೆ ಕಟ್ಟಿ ಅದರ ತುಂಬಾ ಕನಕಾಂಬರ ಮುಡಿದು ವಿಂಟೇಜ್ ಲುಕ್ ನಲ್ಲಿ ಪೋಸ್ ಕೊಟ್ಟಿದ್ದಾರೆ.
ನಟಿ ತಮ್ಮ ಟ್ರೆಡಿಶನಲ್ ಲುಕ್ ಜೊತೆಗೆ ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು ಎಂದು ಹಬ್ಬದ ಶುಭ ಹಾರೈಸಿದ್ದಾರೆ.
ಶುಭ ಕೋರುವುದರ ಜೊತೆಗೆ ನಟಿ ನೀವು ಹಬ್ಬ ಯಾವಾಗ ಆಚರಿಸುತ್ತೀರಿ ಎಂದು ಪ್ರಶ್ನೆಯನ್ನು ಕೇಳಿದ್ದಾರೆ. ಅಭಿಮಾನಿಗಳು ತಮ್ಮ ಫೇವರಿಟ್ ನಟಿಗೆ ಹಬ್ಬದ ಶುಭಾಶಯ ತಿಳಿಸಿದ್ದಾರೆ.
ಸಪ್ತಮಿ ಟ್ರಾವೆಲ್ ಪ್ರಿಯೆಯಾಗಿದ್ದು, ಹೆಚ್ಚಾಗಿ ವಿದೇಶದಲ್ಲಿ ನಟಿ ಟ್ರಾವೆಲ್ ಮಾಡುತ್ತಿರುತ್ತಾರೆ. ಸದ್ಯ ನಟಿ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಸಪ್ತಮಿ ಗೌಡ ಅವರು ಸತೀಶ್ ನೀನಾಸಂ ನಟಿಸುತ್ತಿರುವ ‘ದಿ ರೈಸ್ ಆಫ್ ಅಶೋಕ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲೂ ಇವರಲ್ಲು ಹಳ್ಳಿ ಹುಡುಗಿ ಲುಕ್.
ಇನ್ನು ಡಾಲಿ ಧನಂಜಯ್ ಅಭಿನಯಿಸಲಿರುವ ಹಲಗಲಿ ಸಿನಿಮಾಗೂ ಸಪ್ತಮಿ ಗೌಡ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ಆದರೆ ಸಿನಿಮಾ ಯಾವಾಗ ಶುರು ಅನ್ನೋದು ಇನ್ನಷ್ಟೇ ತಿಳಿದು ಬರಲಿದೆ.
ಪಿಂಕ್ ಸೀರೆ ತೊಟ್ಟ ಇಂಡಿಯನ್ ಬಾರ್ಬಿ ಡಾಲ್ ಆರಾಧನಾ ರಾಮ್
ಮಾರಕ ಕಾಯಿಲೆಯಿಂದಾಗಿ ಜೀವವನ್ನು ಕಳೆದುಕೊಂಡ ಚಂದನವನದ ತಾರೆಯರು
ಬರ್ತಾ ಬರ್ತಾ ಸಖತ್ Bold ಆಗ್ತಿದ್ದಾರೆ ಬಿಗ್ ಬಾಸ್ ಸಿಂಹಿಣಿ Sangeetha Sringeri
ಕನ್ನಡ ಚಿತ್ರರಂಗದಲ್ಲಿ ‘ಅಪ್ಪ’ ಸ್ಟಾರ್ ಆದ್ರೂ, ಮಕ್ಕಳು ಯಶಸ್ಸು ಕಾಣಲೇ ಇಲ್ಲ