ಸ್ಯಾಂಡಲ್’ವುಡ್ ಸುಂದರಿ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ಹೊಸ ಫೋಟೊ ಶೂಟ್ ಶೇರ್ ಮಾಡಿದ್ದು, ತಿಳಿ ಹಸಿರು, ಹಳದಿ ಬಣ್ಣದ ಸೀರೆಯಲ್ಲಿ ನಟಿ ತುಂಬಾನೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.
Image credits: Instagram
ಅಪ್ಪಟ ದೇವತೆ
ತಿಳಿ ಬಣ್ಣದ ಈ ಸೀರೆಯುಟ್ಟು ಸಿಂಪಲ್ ಲುಕ್ ನಲ್ಲಿ ಕಂಗೊಳಿಸುತ್ತಿರುವ ಆಶಿಕಾ ಅಂದಕ್ಕೆ ಮನಸೋತಿರುವ ಅಭಿಮಾನಿಗಳು ದೇವತೆ, ಮಿಸ್ ಕರ್ನಾಟಕ, ಕನ್ನಡಿಗರ ಕ್ರಶ್ ಎಂದು ಕಾಮೆಂಟ್ ಮಾಡಿದ್ದಾರೆ.
Image credits: Instagram
ಮಿಸ್ ಯೂ ಸಿನಿಮಾ
ಆಶಿಕಾ ನಟ ಸಿದ್ಧಾರ್ಥ್ ಜೊತೆ ಮಿಸ್ ಯೂ ಎನ್ನುವ ತಮಿಳು ಸಿನಿಮಾ ಮಾಡಿದ್ದು, ಚಿತ್ರ ಬಿಡುಗಡೆಯಾಗಿ ಜನಮೆಚ್ಚುಗೆ ಪಡೆದಿದೆ. ಚಿತ್ರದ ಪ್ರಮೋಷನ್ ಫೋಟೊಗಳಲ್ಲಿ ಇದು ಒಂದಾಗಿದೆ.
Image credits: Instagram
ರೋಮ್ಯಾಂಟಿಕ್ ಕಾಮಿಡಿ
ಮಿಸ್ ಯೂ ಸಿನಿಮಾ ರೊಮ್ಯಾಂಟಿಕ್ ಕಾಮಿಡಿ ಸಿನಿಮಾವಾಗಿದ್ದು, ಮೆಮೊರಿ ಲಾಸ್ ಆಗಿರುವ ಹುಡುಗ, ಹಿಂದೊಮ್ಮೆ ತಾನೇ ರಿಜೆಕ್ಟ್ ಮಾಡಿದ ಹುಡುಗಿಯ ಪ್ರೀತಿಯಲ್ಲಿ ಮತ್ತೆ ಹೇಗೆ ಬೀಳುತ್ತಾನೆ ಎನ್ನುವ ಕಥೆ ಹೊಂದಿದೆ.
Image credits: Instagram
ಬಹುಬೇಡಿಕೆಯ ನಟಿ
ಆಶಿಕಾ ರಂಗನಾಥ್ ಇದೀಗ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿದ್ದು, ಕನ್ನಡದ ಜೊತೆ ಜೊತೆಗೆ ತಮಿಳು, ತೆಲುಗು ಸಿನಿಮಾಗಳಲ್ಲೂ ಆಶಿಕಾ ಬ್ಯುಸಿಯಾಗಿದ್ದಾರೆ.
Image credits: Instagram
ಮುದ್ದಾದ ಫೋಟೊಗಳು
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಆಶಿಕಾ ಹೆಚ್ಚಾಗಿ ತಮ್ಮ ಸಿನಿಮಾ ಫೋಟೊ, ತಮ್ಮ ಫೋಟೊ ಶೂಟ್, ವಿಡಿಯೋಗಳನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳ ಜೊತೆ ಕನೆಕ್ಟ್ ಆಗುತ್ತಿರುತ್ತಾರೆ.
Image credits: Instagram
ಹೊಸ ಸಿನಿಮಾಗಳು
ಆಶಿಕಾ ಕೈಯಲ್ಲಿ ಸದ್ಯ ಮೂರು ಸಿನಿಮಾಗಳಿದ್ದು, ಕನ್ನಡದಲ್ಲಿ ಗತವೈಭವ, ತೆಲುಗಿನಲ್ಲಿ ವಿಶ್ವಾಂಭರ ಹಾಗೂ ತಮಿಳಿನಲ್ಲಿ ಸರ್ದಾರ್ 2 ಸಿನಿಮಾಗಳಲ್ಲಿ ಈ ಮಿಲ್ಕಿ ಬ್ಯೂಟಿ ನಟಿಸಲಿದ್ದಾರೆ.