ಕನ್ನಡ ಚಿತ್ರರಂಗದ ಕನಸಿನ ರಾಣಿ ಮಾಲಾಶ್ರೀ ಪುತ್ರಿ ಆರಾಧನಾ ರಾಮ್, ಒಂದು ಸಿನಿಮಾದಲ್ಲಿ ನಟಿಸಿದ್ದರೂ ಸಹ ಭರವಸೆಯ ನಟಿಯಾಗಿ ಹೊರ ಹೊಮ್ಮಿದ್ದಾರೆ.
ಆರಾಧಾನಾ ಕಾಟೇರ ಸಿನಿಮಾದಲ್ಲಿ ದರ್ಶನ್ ತೂಗುದೀಪ್ ಗೆ ನಾಯಕಿಯಾಗಿ ಅದ್ಭುತ ಅಭಿನಯ ನೀಡಿದ್ದರು. ಈ ಸಿನಿಮಾ ನಟಿಗೆ ಸಿಕ್ಕಾಪಟ್ಟೆ ಯಶಸ್ಸು ತಂದು ಕೊಟ್ಟಿತ್ತು.
ಆದ್ರೆತರುಣ್ ಸುಧೀರ್ ನಿರ್ದೇಶನದ ಕಾಟೇರ ಸಿನಿಮಾ ರಿಲೀಸ್ ಆಗಿ ಬರೋಬ್ಬರಿ ಎರಡು ವರ್ಷಗಳು ಕಳೆದಿದ್ದರೂ ಸಹ, ಆರಾಧನಾ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ.
ಆರಾಧನಾ ರಾಮ್ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಾರೆ. ತಮ್ಮ ಟ್ರಾವೆಲ್ ಫೋಟೊ, ಫ್ಯಾಮಿಲಿ ಫೋಟೊ, ಫೋಟೊ ಶೂಟ್ ಗಳನ್ನು ಶೇರ್ ಮಾಡುತ್ತಿರುತ್ತಾರೆ.
ಇದೀಗ ಆರಾಧನಾ ಮಿನಿ ಸ್ಕರ್ಟ್ ಕ್ರಾಪ್ ಟಾಪ್ ಧರಿಸಿ ಸಿಕ್ಕಾಪಟ್ಟೆ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ನಟಿಯ ಫೋಟೊ ವೈರಲ್ ಆಗುತ್ತಿದೆ.
ಆರಾಧನಾ ರಾಮ್ ಸಖತ್ ಸ್ಟೈಲಿಶ್ ಫೋಟೊ ನೋಡಿ, ಅಭಿಮಾನಿಗಳ ದಿಲ್ ಖುಷ್ ಆಗಿದ್ದು, ಕಾಮೆಂಟ್ ಸೆಕ್ಷನ್ ಪೂರ್ತಿ ಹಾರ್ಟ್ ಇಮೋಜಿಯಿಂದ ಕೆಂಪಾಗಿದೆ.
ಕೆಲವು ತಿಂಗಳ ಹಿಂದೆ ಆರಾಧನಾ ರಾಮ್ ರಿಯಲ್ ಸ್ಟಾರ್ ಉಪೇಂದ್ರ ಅವರ ‘ನೆಕ್ಸ್ಟ್ ಲೆವೆಲ್’ ಸಿನಿಮಾ ನಾಯಕಿಯಾಗಲಿದ್ದಾರೆ ಎನ್ನುವ ಸುದ್ದಿ ಬಂದಿತ್ತು. ಆದರೆ ಆ ಬಗ್ಗೆ ಅಪ್ ಡೇಟ್ ಇಲ್ಲ.
ಆರಾಧನಾ ರಾಮ್ ರನ್ನು ಮತ್ತೆ ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ನಟಿ ಮತ್ತೆ ಯಾವಾಗ ಚಂದನವನದಲ್ಲಿ ಮಿಂಚುತ್ತಾರೆ ಅನ್ನೋದನ್ನು ಕಾದು ನೋಡಬೇಕು.
ಕನ್ನಡ ಸಿನಿಮಾ ಮೂಲಕ ನಟನೆ ಅರಂಭಿಸಿ, ಪರಭಾಷೆಯಲ್ಲಿ ಫೇಮಸ್ ಆದ ನಟಿಯರು
ವಿವಾಹ ವಾರ್ಷಿಕೋತ್ಸವದ ದಶಕದ ಸಂಭ್ರಮದಲ್ಲಿ ‘ರಂಗಿತರಂಗ’ ನಟ ನಿರೂಪ್ ಭಂಡಾರಿ
ಸಂಗೀತ ಶೃಂಗೇರಿಗೆ ಲವ್ ಆಗಿದ್ಯಾ? ಫೋಟೊ ಜೊತೆಗಿನ ಕ್ಯಾಪ್ಶನ್ ಗುಟ್ಟೇನು?
ತಮ್ಮ ಸಿನಿಮಾ ರಿಲೀಸ್ ಆಗುವ ಮುನ್ನವೇ ಸಾವನ್ನಪ್ಪಿದ ಕನ್ನಡ ನಟರು