ಚಂದನವನದ ನಟರ ಹಬ್ಬದ ಸಂಭ್ರಮದ AI ಫೋಟೊಗಳು ವೈರಲ್ ಆಗುತ್ತಿದ್ದು, ಹಬ್ಬದ ತಯಾರಿ, ಭರ್ಜರಿ ಭೋಜನ ಎಲ್ಲವನ್ನೂ ಕೂಡ ಇಲ್ಲಿ ಕಾಣಬಹುದು.
ಕಿಚ್ಚ ಮತ್ತು ದರ್ಶನ್ ನಡುವೆ ಮನಸ್ಥಾಪಗಳು ಇದ್ದಿರಬಹುದು, ಆದರೆ ಇವತ್ತಿಗೂ ಅಭಿಮಾನಿಗಳು ಇಬ್ಬರನ್ನು ಜೊತೆಯಾಗಿ ನೋಡಲು ಇಷ್ಟಪಡುತ್ತಾರೆ ಅನ್ನೋದಕ್ಕೆ ಇದೇ ಸಾಕ್ಷಿ.
ಹಬ್ಬದ ಸಂಭ್ರಮದಲ್ಲಿ ಮನೆಯನ್ನು ತಳಿರು ತೋರಣಗಳಿಂದ ಸಿಂಗರಿಸುತ್ತಿರುವ ರಾಕಿಂಗ್ ಸ್ಟಾರ್ ಯಶ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್.
ಸ್ಯಾಂಡಲ್ ವುಡ್ ಸ್ಟಾರ್ ನಟಿಯರಾಗಿದ್ದ ರಕ್ಷಿತಾ ಮತ್ತು ರಮ್ಯಾ ಮನೆ ಮುಂದೆ ರಂಗೋಲಿ ಬಿಡಿಸೋದು ಎಷ್ಟು ಚಂದ ಅಲ್ವಾ?
ಮನೆಗೆ ಹೂವಿನ ಅಲಂಕಾರವನ್ನು ಮಾಡುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ದುನಿಯಾ ವಿಜಯ್.
ಚಿರಂಜೀವಿ ಸರ್ಜಾ ಇಲ್ಲದೇ ಇರಬಹುದು. ಆದರೆ ಅಭಿಮಾನಿಗಳ ಮನದಲ್ಲಿ ಅವರು ಯಾವಯ್ಯೂ ಇದ್ದಾರೆ. ಚಿರು ಮತ್ತು ಧ್ರುವ ಜೊತೆಯಾಗಿ ಅಡುಗೆ ಮಾಡುವ ದೃಶ್ಯವೇ ಸುಂದರ.
ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ರಮೇಶ್ ಅರವಿಂದ್ ಅವರು ಜೊತೆಯಾಗಿ ಕುಳಿತು ಸಿಹಿ ಅಡುಗೆ ಮಾಡುತ್ತಿರೋದು ನೋಡೋಕೆ ಚಂದ.
ತಮ್ಮ ಕಾಮಿಡಿ ಮೂಲಕವೇ ಕನ್ನಡಿಗರ ಮನಸು ಗೆದ್ದ ಸಾಧು ಕೋಕಿಲಾ ಮತ್ತು ಚಿಕ್ಕಣ್ಣ ಹೀಗೆ ಜೋಡಿಯಾಗಿದ್ರೆ ಎಲ್ಲೆಡೆ ನಗುವಿನ ಹಬ್ಬ.
ಚಂದನವನದ್ದ ಮತ್ತಿಬ್ಬರು ಸುಂದರಿಯರಾದ ರಚಿತಾ ರಾಮ್ ಮತ್ತು ರಾಧಿಕಾ ಪಂಡಿತ್ ಹೂವು ಕಟ್ಟುವ ಸೊಬಗು ನೋಡಿ.
ಹಬ್ಬದ ಸಂಭ್ರಮದಲ್ಲಿ ಹಸುವಿಗೆ ಪೂಜೆ ಮಾಡಿ, ಆಹಾರ ನೀಡುತ್ತಿರುವ ಶಿವರಾಜಕುಮಾರ್ ಮತ್ತು ಉಪೇಂದ್ರ.
ದರ್ಶನ್, ಪುನೀತ್, ಯಶ್, ಸುದೀಪ್, ಉಪೇಂದ್ರ, ಶಿವಣ್ಣ ಎಲ್ಲರೂ ಜೊತೆಯಾಗಿ ಸೇರಿ ಹಬ್ಬದ ಪೂಜೆಯನ್ನು ಮಾಡುತ್ತಿರೋದು ನೋಡುತ್ತಿದ್ರೇನೆ ಏನೋ ಒಂಥರಾ ಖುಷಿ.
ಘಟಾನುಘಟಿ ನಟರೆಲ್ಲರೂ ಹಬ್ಬದ ಸಂಭ್ರಮದಲ್ಲಿ ಜೊತೆಯಾಗಿ ಕುಳಿತು ಬಾಳೆಲೆ ಊಟ ಸವಿಯುತ್ತಿದ್ದಾರೆ. ಇದೆಲ್ಲಾ ನಿಜಾ ಆಗ್ತಿದ್ರೆ ಎಷ್ಟು ಚೆಂದ ಎನ್ನುತ್ತಿದ್ದಾರೆ ಫ್ಯಾನ್ಸ್.