Sandalwood
ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ಎಂದೆ ಖ್ಯಾತಿ ಪಡೆದಿರುವ ನಟಿ ರಾಧಿಕಾ ಪಂಡಿತ್. ಸಿನಿಮಾದಲ್ಲಿ ನಟಿಸಿದೇ ವರ್ಷಗಳೇ ಕಳೆದಿದ್ದರೂ ಸಹ, ಇಂದಿಗೂ ಇವರು ಸಿನಿ ರಸಿಕರ ಫೇವರಿಟ್.
ರಾಧಿಕಾ ಪಂಡಿತ್ ಬರ್ತ್ ಡೇಯಿಂದ ಹಿಡಿದು, ನಟಿಯ ಕುರಿತು ನಿಮಗೆ ತಿಳಿಯದಿರುವ ಕೆಲವೊಂದು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
ರಾಧಿಕಾ ಪಂಡಿತ್ ತಮ್ಮ ಹುಟ್ಟಿದ ವರ್ಷವನ್ನು ಯಾವಾಗ್ಲೂ ಸೀಕ್ರೆಟ್ ಆಗಿಯೇ ಇಟ್ಟಿದ್ದಾರೆ. ಇವರ ಡೇಟ್ ಆಫ್ ಬರ್ತ್ ಮಾರ್ಚ್ 7, 1984 ರಂದು ಬೆಂಗಳೂರಲ್ಲಿ ಹುಟ್ಟಿದ್ದು ಇವರು.
ರಾಧಿಕಾ ಪಂಡಿತ್ ಹಿರಿಯ ಪುತ್ರಿಯಾಗಿದ್ದು, ಇವರಿಗೊಬ್ಬ ತಮ್ಮ ಕೂಡ ಇದ್ದಾರೆ. ಅವರ ಹೆಸರು ಗೌರಂಗ್ ಪಂಡಿತ್. ಅವರನ್ನ ರಾಧಿಕಾ ಪ್ರೀತಿಯಿಂದ ಗೊಲ್ಲು ಎನ್ನುತ್ತಾರೆ.
ಹೌದು, ರಾಧಿಕಾ ಅವರು ರಾಕಿಂಗ್ ಸ್ಟಾರ್ ಯಶ್ ಗಿಂತ 2 ವರ್ಷ ದೊಡ್ಡವರು. ಯಶ್ ಹುಟ್ಟಿದ್ದು, 1986 ರಲ್ಲಿ. ರಾಧಿಕಾ ಹುಟ್ಟಿದ್ದು, 1984 ರಲ್ಲಿ.
ರಾಧಿಕಾ ಮತ್ತು ಯಶ್ ಸೀರಿಯಲ್ ನಲ್ಲಿ ಜೊತೆಯಾಗಿ ಮಾಡಿದ್ದು, ಮೊದಲಿಗೆ 10 ವರ್ಷ ಸ್ನೇಹಿತರಾಗಿದ್ದ ಈ ಜೋಡಿ, ನಂತರವೇ ಪ್ರೀತಿಯಲ್ಲಿ ಬಿದ್ದರು.
ರಾಧಿಕಾಗೆ ಇಷ್ಟವಿರುವ ಎಲ್ಲಾ ವಸ್ತುಗಳನ್ನು ಗಿಫ್ಟ್ ಮಾಡಿ, ಫೋನಲ್ಲಿ ಪ್ರಪೋಸ್ ಮಾಡಿದ್ದ ಯಶ್. 6 ತಿಂಗಳು ಯೋಚಿಸಿ, ಕಾಯಿಸಿ ನಂತರ Yes ಅಂದಿದ್ದ ರಾಧಿಕಾ ಪಂಡಿತ್.
ನೋಡೋದಕ್ಕೆ ಈಗಷ್ಟೇ ಕಾಲೇಜು ಮುಗಿಸಿರುವ ಹುಡುಗಿಯಂತೆ ಕಾಣಿಸುವ ರಾಧಿಕಾ ಪಂಡಿತ್ ವಯಸ್ಸು ಈಗ 40 ಅಂದ್ರೆ ನೀವು ನಂಬಲೇ ಬೇಕು. ಆದ್ರು ಇವರ ಬ್ಯೂಟಿಗೆ ಫಿದಾ ಆಗದವರೇ ಇಲ್ಲ.